ಸಾರ್ವಜನಿಕರಿಗೆ ಅಗತ್ಯ ಇರುವಾಗಲೆಲ್ಲ ಅತ್ಯಂತ ಶೀಘ್ರವಾಗಿ – ಸ್ಪಂದಿಸುವ ಸಂಸ್ಥೆ ಅಂದರೆ ಅದು ಎಚ್.ಆರ್.ಎಸ್
ಇಳಕಲ್ಲ ಜು.15

ಇಲ್ಲಿನ ಸರಕಾರೇತರ ಸಂಸ್ಥೆ (NGO) ಹುಮ್ಯಾನಿಟೇರಿಯನ ರಿಲೀಫ ಸೊಸೈಟಿ (HRS) ಇದರ ಪದಾದಿಕಾರಿಗಳು ತಹಶೀಲ್ದಾರ ಕಚೇರಿಗೆ ಭೇಟಿ ನೀಡಿ ನೂತನವಾಗಿ ಆಗಮಿಸಿದ ತಾಲೂಕಾ ದಂಡಾಧಿಕಾರಿಗಳಾದ ಶ್ರೀ ಅಮರೇಶ ಪಮ್ಮಾರ ಇವರನ್ನು ಗೌರವಿಸಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಎಚ್.ಆರ್.ಎಸ್ ಇದರ ಜೋನಲ್ ಲೀಡರ ಅಬ್ದುಲ್ ಖದೀರ್ ವಿಜಯಪುರ ಇವರು ತಾಲೂಕಾ ದಂಡಾಧಿಕಾರಿಗಳಿಗೆ ಸತ್ಕರಿಸಿ ಎಚ್.ಆರ್.ಎಸ್ ಇದರ ಕಾರ್ಯ ಚಟುವಟಿಕೆಗಳನ್ನು ವಿವರಿಸಿ, “ಸಂಸ್ಥೆಯು ಕರ್ನಾಟಕದಾದ್ಯಂತ ತನ್ನ ಶಾಖೆಗಳನ್ನು ಹೊಂದಿದ್ದು ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಜನರಿಗೆ ಪುನರ್ವಸತಿ ಕಲ್ಪಿಸುವುದು, ಪರಿಹಾರ ಸಾಮಗ್ರಿಗಳನ್ನು ತಲುಪಿಸುವುದು, ಜನರಿಗೆ ರಕ್ಷಣೆಗಳನ್ನು ನೀಡುವುದು ಮುಂತಾದ ಕೆಲಸಗಳನ್ನು ನಿರ್ವಹಿಸುತ್ತದೆ ಈ ನಿಟ್ಟಿನಲ್ಲಿ ಸರ್ಕಾರದ ಸಹಾಯ ಹಸ್ತ ಅತ್ಯಂತ ಅವಶ್ಯಕವಾಗಿದೆ” ಎಂದರು. ಇಲಕಲ್ಲ ಎಚ್.ಆರ್.ಎಸ್ ಘಟಕದ ಗ್ರುಪ್ಪ್ ಲೀಡರ ಅಬ್ದುಲ್ ಗಫಾರ ತಹಶೀಲ್ದಾರ ಮಾತನಾಡಿ, “ಸಾರ್ವಜನಿಕರಿಗೆ ಅಗತ್ಯ ಇರುವಾಗಲೆಲ್ಲ ಅತ್ಯಂತ ಶೀಘ್ರವಾಗಿ ಸ್ಪಂದಿಸುವಂತಹ ಸಂಸ್ಥೆಯಾಗಿದ್ದು, ಮಾನವ ನಿರ್ಮಿತ ಅಥವಾ ಪ್ರಕೃತಿ ವಿಕೋಪಗಳಲ್ಲಿ ಪ್ರತಿಯೊಂದು ಅವಘಡಗಳಲ್ಲಿ ತನ್ನ ಸೇವೆಯನ್ನು ಸಲ್ಲಿಸುತ್ತಿದೆ,

ಇಡೀ ರಾಜ್ಯಾದ್ಯಂತ ಮಳೆ ಪ್ರವಾಹಗಳ ಸಂದರ್ಭಗಳಲ್ಲಿ, ನೆರೆ ಹಾವಳಿಗಳು, ಭೂಕಂಪಗಳು ಸಂಭವಿಸಿದಾಗ ಸಂಸ್ಥೆಯು ಅಲ್ಲಿಗೆ ತಲುಪಿ ಜನರಿಗೆ ಪರಿಹಾರ ಒದಗಿಸುವಂತಹ ಕಾರ್ಯ ಮಾಡುತ್ತದೆ, ಧರ್ಮದಲ್ಲಿ ಮನುಷ್ಯರ ಸೇವೆಗೆ ಅತ್ಯಂತ ಮಹತ್ವ ನೀಡಲಾಗಿದ್ದು, ಯಾವುದೇ ಫಲಾಪೇಕ್ಷೆ ಇಲ್ಲದೆ ಜನರ ಸೇವೆ ಮಾಡಲು ಕಂಕಣ ಬದ್ಧವಾಗಿದೆ, ಈ ದಿಸೆಯಲ್ಲಿ ತಾಲೂಕ ಆಡಳಿತದಿಂದಲೂ ಕೂಡ ಇದಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕೆಂದರು. ಇದಕ್ಕೆ ಉತ್ತಮವಾಗಿ ಸ್ಪಂದಿಸಿದ ತಾಲೂಕಾ ದಂಡಾಧಿಕಾರಿಗಳು “ಇಂದಿನ ದಿನಗಳಲ್ಲಿ ಸರಕಾರಗಳು ಮಾಡುವಂತ ಕೆಲಸ ಸಂಘ ಸಂಸ್ಥೆಗಳು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯವಾದದ್ದು, ಈ ನಿಟ್ಟಿನಲ್ಲಿ ತಮ್ಮ ಸಂಸ್ಥೆಗೆ ಸಂಪೂರ್ಣವಾದ ಸಹಾಯ ಸಹಕಾರ ನೀಡುವುದಾಗಿ ಭರವಸೆಯಿತ್ತರು”.

ಈ ಸಂದರ್ಭದಲ್ಲಿ HRS ಸಂಸ್ಥೆಯ ಸದಸ್ಯರಾದ ನಬಿಸಾಬ ಗಬ್ಬೂರ, ಸಿರಾಜುದ್ದೀನ್ ಹುಮನಾಬಾದ, ಮುಹ್ಮದರಫೀಕ್ ಬಳಗಾನೂರ, ಜಹಾಂಗೀರ ನಂದವಾಡಗಿ, ಬಾಷಾ ದಫೇದಾರ, ಆದಂಸಾಬ ಕುಳಗೇರಿ, ಹುಸೇನ ಕಮತಗಿ, ಮುಹ್ಮದಶಫೀ ನಂದವಾಡಗಿ, ಮುಜಾಹೀದ ಅತ್ತಾರ, ರಿಹಾನ ಬದಾಮಿ, ಮಹಿಳಾ ವಾಲೈಂಟೀಯರ್ಸ್ ಕಾರ್ಯಕರ್ತೆಯರಾದ ಗೌಸಿಯಾ ಬದಾಮಿ, ಯಾಸ್ಮೀನ ಮುಹ್ಮದಿ ಗಬ್ಬೂರ, ನುಸ್ರತ್ ಜಹಾಂ ಮೊಮಿನಾತಿ ಅತ್ತಾರ, ಆಯೇಶಾಬೇಗಂ ತಹಶೀಲ್ದಾರ, ಸಮೀನಾ ತರನ್ನುಮ್ ಅತನೂರ, ಉಪಸ್ಥಿತರಿದ್ದರು.
ಜಿಲ್ಲಾ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಅಬ್ದುಲ್.ಗಫಾರ.ತಹಶೀಲ್ದಾರ