ಕಾಟವ್ವನಹಳ್ಳಿ ಸರ್ಕಾರಿ ಶಾಲೆಯ – ಮಕ್ಕಳಿಂದ ಹೊರ ಸಂಚಾರ.
ಚಳ್ಳಕೆರೆ ಜು.16

ತಾಲೂಕಿನ ನೇರಲಗುಂಟೆ ಸಮೀಪದ ಕಾಟವ್ವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ನಗರದ ಪಾವಗಡ ರಸ್ತೆಯ ಶ್ರೀಸಾಯಿ ಬಾಬಾ ಮಂದಿರ ಹಾಗೂ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನಕ್ಕೆ ಹೊರ ಸಂಚಾರ ಕೈಗೊಂಡರು.

ಶ್ರೀಸಾಯಿ ಬಾಬಾ ಮಂದಿರದ ಆವರಣದಲ್ಲಿ ನಗರದ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರನ್ನು ಭೇಟಿಯಾದ ಶಿಕ್ಷಕರು ಮತ್ತು ಮಕ್ಕಳಿಗೆ ಮಾತಾಜೀಯವರು ಚಾಕೋಲೇಟ್ ವಿತರಿಸಿ ಆಶೀರ್ವಾದಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್, ಸಹ ಶಿಕ್ಷಕರಾದ ಸಿ.ಎಸ್ ಭಾರತಿ, ಶಶಿಕಲಾ, ಸುನೀತ ರಾಣಿ, ಬೋರಮ್ಮ, ಯತೀಶ್ ಎಂ ಸಿದ್ದಾಪುರ, ರಶ್ಮಿ ಪಂಡಿತಾರಾಧ್ಯ, ಯೋಗೇಶ್ವರಿ ಸೇರಿದಂತೆ ವಿದ್ಯಾರ್ಥಿಗಳಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.