“ದೇವಾದಿ ದೇವ ಶ್ರೀರಾವುತರಾಯನ ಸದಾ ನೆನೆವ ಮನ ಪಾವನವು”…..

A ದಿಂದ Z ವರ್ಣಮಾಲೆಯಲಿಅಕ್ಷರ ರೂಪದಲಿ ಜಗವ ಬೆಳಗುವದೇವಾದಿ ದೇವ ಮಹಾದೇವಶ್ರೀರಾವುತರಾಯ ಮಲ್ಲಯ್ಯ ಪ್ರಸೀದಂತು
A-ಅಂಧಕಾರ ಕಳೆವ ಆದಿದೇವ ಆರಾಧ್ಯ ದೇವ ಸದಾಶಿವ
ಶ್ರೀರಾವುತರಾಯ ನಮೋ ನಮಃ
B-ಭಂಡಾರದ ಒಡೆಯ ಭವ ಹರ
ಶ್ರೀರಾವುತರಾಯ ನಮೋ ನಮಃ
C-ಚಂದ್ರಶೇಖರ ಚಂಡು ಹೂವು ಪ್ರೀಯ
ಶ್ರೀರಾವುತರಾಯ ನಮೋ ನಮಃ
D-ದೇವಾದಿ ದೇವ ದೇಹಿ ಪುರವಾಸ
ಶ್ರೀರಾವುತರಾಯ ನಮೋನಮಃ
E- ಈಶ್ವರ ಅವತಾರಿ ಶ್ರೀರಾವುತರಾಯ
ನಮೋ ನಮಃ
F-ಪುಷ್ಪ ಅಲಂಕಾರ ಅಚ್ಚಮಲ್ಲಿಗೆಯ ಹೂವು
ಮೂಡಿಯುವ ಶ್ರೀರಾವುತರಾಯ ನಮೋ
ನಮಃ
G-ಗುಣವಂತರ ವರಪ್ರದಾಯ
ಶ್ರೀರಾವುತರಾಯ ನಮೋ ನಮಃ
H-ಹಣೆಯ ತುಂಬಾ ಬಂಗಾರ ವಜ್ರ
ವೈಡೊರ್ಯ ಧರಿಸಿದ ಜಗದೊಡೆಯ
ಶ್ರೀರಾವುತರಾಯ ನಮೋ ನಮಃ
I-ಇಂದುಧರ ಶುಭೋದಯರಾಯ
ಶ್ರೀರಾವುತರಾಯ ನಮೋ ನಮಃ
J- ಜಗದ ಜನ ಪಾಲಕ ಶ್ರೀರಾವುತರಾಯ
ನಮೋನಮಃ
K- ಕರುಣೆಯ ಖಂಡೋಬಾ ಶ್ರೀರಾವುತರಾಯ
ನಮೋ ನಮಃ
L-ಲಕ್ಷೋಪ ಲಕ್ಷ ಕಣ್ ಕಾಂತಿಯ ಜನ ಹಿತ
ಶ್ರೀರಾವುತರಾಯ ನಮೋ ನಮಃ
M-ಮಲ್ಹಾರಿ ಶ್ರೀರಾವುತರಾಯ ನಮೋ ನಮಃ
N- ನಂಬಿದವರ ಅಂಗೈಯಲ್ಲಿರಿಸಿ ಸಲಹುವ
ಜಗಪಾಲಕ ಶ್ರೀರಾವುತರಾಯ ನಮೋ ನಮಃ
O-ಓಂಕಾರ ಶ್ರೀಕರ ಶ್ರೀರಾವುತರಾಯ
ನಮೋ ನಮಃ
P-ಪುಷ್ಪಲೋಚನ ಪರಂಜ್ಯೋತಿ
ಶ್ರೀರಾವುತರಾಯ ನಮೋ ನಮಃ
Q- ಖುಷಿಯ ಅಶ್ವಾರೂಢ ಶ್ರೀರಾವುತರಾಯ
ನಮೋ ನಮಃ
R-ರವಿತೇಜ ರವಿಲೋಚನ ಶ್ರೀರಾವುತರಾಯ
ನಮೋ ನಮಃ
S-ಸನಾತನ ಸರ್ವೇಶ್ವರ ಶ್ರೀ ರಾವುತರಾಯ
ನಮೋ ನಮಃ
T-ತೇಜಸ್ ತೆರದ ಬಂಡಿ ಸವಾರ
ಶ್ರೀರಾವುತರಾಯ ನಮೋನಮಃ
U-ಉಗ್ರಾಯ ಶೀಘ್ರ ಫಲ ಪ್ರದಾಯ
ಶ್ರೀರಾವುತರಾಯ ನಮೋ ನಮಃ
V- ವಿಶಾಲಕ್ಷ ವಜ್ರ ಹಸ್ತ ವಿಜಯ
ಶ್ರೀರಾವುತರಾಯ ನಮೋ ನಮಃ
W- ವೈಕಂಠವ ಧರೆಗೆ ಇಳಿಸಿದ ಮಹಾದೇವ
ಶೀರಾವುತರಾಯ ನಮೋ ನಮಃ
X-ಕ್ಷೇತ್ರ ದರ್ಶನದಿ ಸರ್ವರ ಪಾವನಗೊಳಿಸುವ
ಶ್ರೀರಾವುತರಾಯ ನಮೋ ನಮಃ
Y-ಯಮನ ಪಾಶವ ತಡೆಯುವ ಶಿವ ಹರ
ಶ್ರೀರಾವುತರಾಯ ನಮೋ ನಮಃ
Z-ಜನಪಾಲಕ ಸದಾ ಜಯದ ಹಾದಿಯಲಿ
ನಡೆಸುವ ಶ್ರೀರಾವುತರಾಯ ನಮೋ ನಮಃ

ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ