ರಾಷ್ಟ್ರೀಯ ಸಾರ್ವತ್ರಿಕ – ಲಸಿಕಾ ಕರಣ ಜಾಗೃತಿ ಕಾರ್ಯಕ್ರಮ.
ಅಮೀನಗಡ ಜು.16

ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ, ತಾಲೂಕಾ ಆರೋಗ್ಯ ಅಧಿಕಾರಿಗಳು ಹುನಗುಂದ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಅಮೀನಗಡ ಸಹಯೋಗದಲ್ಲಿ, ಅಮೀನಗಡ ಉಪ ಕೇಂದ್ರ ಎ&ಬಿ ಅಮೀನಗಡ ಶ್ರೀಮಂಗಳಮ್ಮ ದೇವಿ ಗುಡಿಯ ಆವರಣದಲ್ಲಿ “ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಅಭಿಯಾನ” ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು, “ಮಕ್ಕಳಲ್ಲಿ ಒಂಬತ್ತು ಮಾರಕ ರೋಗಗಳ ತಡೆಗೆ ಲಸಿಕೆಗಳು ಮಕ್ಕಳಿಗೆ ಸಂಜೀವಿನಿ” “ನಿಮ್ಮ ಮಗುವಿಗೆ ಲಸಿಕೆ ಹಾಕಿಸಿ ಆರೋಗ್ಯವಂತ ಮಕ್ಕಳು ಸಮಾಜದ ಬೆಳಕು” ಎಂಬ ಘೋಷ ವಾಕ್ಯಯೊಂದಿಗೆ ಮಗುವಿಗೆ ಸರಿಯಾದ ಸಮಯಕ್ಕೆ ಲಸಿಕೆಯನ್ನು ಕೊಡಿಸುವುದು ಪಾಲಕರ ಜವಾಬ್ದಾರಿ. ಬಾಲಕ್ಷಯ, ಪೋಲಿಯೋ, ನಾಯಿ ಕೆಮ್ಮು ಗಂಟಲು ಮಾರಿ, ವಾಂತಿ ಬೇಧಿ, ಬಿಳಿ ಕಾಮಾಲೆ, ನಂಜುರೋಗ ದಡಾರ ಅಂಧತ್ವ ತಡೆಗೆ ಮಗುವಿನ ವಯಸ್ಸಿಗೆ ಅನುಸಾರ ಲಸಿಕೆ ಹಾಕಲಾಗುವುದು ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ತಿಂಗಳು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಸದುಪಯೋಗ ಪಡೆದು ಕೊಳ್ಳಬೇಕು ಎಂದರು. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಹಿರಿಯ ಪ್ರಾಥಮಿಕ ಸುರಕ್ಷಾ ಅಧಿಕಾರಿ ಶ್ರೀಮತಿ ಕಮಲಾ ಪ್ರಾಥಮಿಕ ಸುರಕ್ಷಾ ಅಧಿಕಾರಿಗಳಾದ ಸಿ.ಎಚ್ ಕೊಲಕಾರ ನಯನಾ ಗೌಡರ ಆಶಾ ಕಾರ್ಯಕರ್ತೆಯರು ಅಮೀನಗಡ ಪಟ್ಟಣದ ತಾಯಿಂದಿರು ಗರ್ಭಿಣಿಯರು, ಅರ್ಹ ಲಸಿಕಾ ಕರಣ ಜಾಗೃತಿ ಕಾರ್ಯಕ್ರಮದಲ್ಲಿ ಮುದ್ದು ಕಂದಮ್ಮಗಳು ಭಾಗವಸಿದ್ದರು.