ಶ್ರೀ ಕನ್ನಿಕಾ ಪರಮೇಶ್ವರಿಗೆ ವಿಶೇಷ ಅಲಂಕಾರ – ಪೂಜೆ ಪಲ್ಲಕ್ಕಿ ಸೇವೆ.

ಕೂಡ್ಲಿಗಿ ಜು.16

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ. ಜು 15 ರಂದು ಅಷಾಡ ಮಂಗಳವಾರ ದಂದು ಶ್ರೀಕನ್ನಿಕಾ ಪರಮೇಶ್ವರಿ ತಾಯಿಗೆ ವಿಶೇಷ ಅಲಂಕಾರ ಪೂಜೆ ಹಾಗೂ ಪಲ್ಲಕ್ಕಿ ಸೇವೆ ಭಜನಾರಾಧನೆ ಜರುಗಿತು. ಅರ್ಚಕರಾದ ಗುರುಸ್ವಾಮಿರವರ ನೇತೃತ್ವದಲ್ಲಿ ಶ್ರೀಕನ್ನಿಕಾ ಪರಮೇಶ್ವರಿ ಸೇವಾ ಸಮಿತಿಯವರು. ಆಷಾಢ ಮಾಸದ ಮಂಗಳವಾರ ದಂದು ದೇವಿಗೆ ವಿಶೇಷ ಅಲಂಕಾರ ಪೂಜೆ ಪಲ್ಲಕ್ಕಿ ಸೇವೆ ಹಾಗೂ ಭಜನಾರಾಧನೆಯನ್ನು ಸಲ್ಲಿಸಿದರು. ಅಲ್ಲದೇ ಆಷಾಡ ಮಾಸದ ಮಂಗಳವಾರದ ಪ್ರಯುಕ್ತ ಪಟ್ಟಣದ ವಿವಿದ ದೇವಸ್ಥಾನಗಳಲ್ಲಿನ ದೇವರಿಗೆ ವಿಶೇಷ ಆರಾಧನೆ ಸೇವೆ ಸಲ್ಲಿಸಲಾಯಿತು. ಪಟ್ಟಣದ ಆರಾಧ್ಯ ದೇವ ಗ್ರಾಮ ದೇವತೆ ಶ್ರೀ ಊರಮ್ಮ ದೇವಿ, ಶ್ರೀ ಕೊತ್ತಲಾಂಜನೇಯ, ಶ್ರಿವೆಂಕಟೇಶ್ವರ, ಶ್ರೀ ಕೊತ್ತಲಾಂಜನೇಯ, ಶ್ರೀಸೊಲ್ಲಮ್ಮದೇವಿಯ, ವಿಶೇಷ ಪೂಜೆ ಹಾಗೂ ಆರಾಧನೆ ಜರುಗಿಸಲಾಯಿತು. ಆಷಾಢ ಮಾಸದಲ್ಲಿ ಈ ರೀತಿ ವಿಶೇಷ ಪೂಜೆಯನ್ನು ಮಾಡುವುದರಿಂದ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿ ಕೊಳ್ಳಬಹುದಾಗಿದೆ. ಹಾಗೂ ಅವರು ಎಲ್ಲಾ ಬಗೆಯ ಫಲಗಳನ್ನು ದ್ವಿಗುಣವಾಗಿ ಪಡೆಯುವ ಫಲಿತಾಂಶ ಸಿಗುತ್ತದೆ ಎಂದು ಹೇಳಲಾಗುತ್ತದೆ. ಆಷಾಢ ಮಾಸದಲ್ಲಿ ಶ್ರೀಕನ್ನಿಕಾ ಪರಮೇಶ್ವರಿ ಮತ್ತು ಮಂಗಲ ದೇವರಿಗೆ ವಿಶೇಷ ಅಲಂಕಾರ ಪೂಜೆ ಭಜನೆ ಪಲ್ಲಕ್ಕಿ ಸೇವೆ ಸಲ್ಲಿಸುವುದರ ಜೊತೆಗೆ, ವೆಂಕಟೇಶ್ವರ, ಸೂರ್ಯ ದೇವ, ದುರ್ಗಾ ಮತ್ತು ಲಕ್ಷ್ಮಿ ದೇವಿಯರ. ಮತ್ತು ಆಂಜನೇಯನನ್ನು ಪೂಜಿಸುವುದು ಭಕ್ತರಿಗೆ ಅತ್ಯಂತ ಮಂಗಳಕರ ವೆಂದು ಪರಿಗಣಿಸಲಾಗಿದೆ. ಪ್ರತಿ ಮಂಗಳವಾರ ದಂದು ಶ್ರೀಕನ್ನಿಕಾ ಪರಮೇಶ್ವರಿ, ಹಾಗೂ ಹನುಮಂತನ ದೇವಸ್ಥಾನಕ್ಕೆ ತೆರಳಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸುವುದರಿಂದ ವಿಶೇಷ ಫಲಗಳು ದೊರಕಲಿವೆ ಎಂದು ಹೇಳಲಾಗುತ್ತದೆ.

ದೇವರ ಸನ್ನಿಧಾನದಲ್ಲಿ ದೇವರ ಮಂತ್ರಗಳ ಪಠನೆ ಭಜನಾರಾಧನೆ ಸೇವೆ ಮಾಡುವುದರಿಂದ, ಶ್ರಿಕನ್ನಿಕಾ ಪರಮೇಶ್ವರಿ ಹಾಗೂ ಮಂಗಳ ದೇವರಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುವುದರಿಂದ. ಸಕಲ ಕಷ್ಟಗಳಿಂದ ಮುಕ್ತಿ, ಹಾಗೂ ಇಷ್ಟಾರ್ಥಗಳು ಸಿದ್ಧಿಸಿ ಲಭಿಸುವುದೆಂದು ಆಧ್ಯಾತ್ಮ ಚಿಂತಕರು ತಿಳಿಸಿದ್ದಾರೆ. ಆಷಾಢ ಮಾಸದಲ್ಲಿ ಇಷ್ಟ ದೇವ ಕುಲ ದೇವ ಗ್ರಾಮ ದೇವರ ಆರಾಧನೆಯಿಂದ, ಜೀವನದಲ್ಲಿ ಎದುರಾಗುವ ಕಷ್ಟಗಳು ದೂರವಾಗುತ್ತವೆ ಮತ್ತು ಸಕಲ ಭಾಗ್ಯಗಳು ಪ್ರಾಪ್ತಿ ಯಾಗುತ್ತವೆ ಎಂದು ಹೇಳಲಾಗುತ್ತದೆ. ಅಂತೆಯೇ ಶ್ರೀಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ, ಆಷಾಢ ಮಂಗಳವಾರ ದಂದು ಪಟ್ಟಣದ ಆರ್ಯ ವೈಷ್ಯ ಸಂಘದವರು. ಶ್ರೀಕನ್ನಿಕಾ ಪರಮೇಶ್ವರಿ ದೇವರ ಸೇವಾ ಸಮಿತಿಯವರು, ದೇವಿಗೆ ವಿಶೇಷ ಅಲಂಕಾರ ಪಲ್ಲಕ್ಕಿ ಸೇವೆ ಭಜನಾರಾಧನೆ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಆರ್ಯ ವೈಷ್ಯ ಸಮಾಜದ ನೂರಾರು ಮಹಿಳೆಯರು, ನೂರಾರು ಯುವಕರು ಹಿರಿಯರು ಮಕ್ಕಳು ಶ್ರೀಕನ್ನಿಕಾದೇವಿಯ ಆರಾಧನೆ ಸೇವೆಯಲ್ಲಿ ಭಾಗಿ ಯಾಗಿದ್ದರು ಎಂದು ವರದಿಯಾಗಿದೆ.

.ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ. ಬಿ.ಸಾಲುಮನೆ.ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button