ಮಣಿಪಾಲ ಆರೋಗ್ಯ ಕಾರ್ಡ್ 2025 ರ – ನೋಂದಣಿ ಪ್ರಾರಂಭ.

ತರೀಕೆರೆ ಜು.16

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಣಿಪಾಲವು ಕರ್ನಾಟಕ ಮತ್ತು ನೆರೆಯ ರಾಜ್ಯಗಳ ದಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಕೈಗೆಟ್ಟುಕುವ ದರದಲ್ಲಿ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ ಎಂದು ಕಸ್ತೂರ್ಬಾ ಆಸ್ಪತ್ರೆ ವ್ಯವಸ್ಥಾಪಕರಾದ ಶ್ರೀ ಮೋಹನ್ ಶೆಟ್ಟಿ ರವರು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಮಣಿಪಾಲ ಆರೋಗ್ಯ ಕಾರ್ಡ್ 2025 ರ ನೋಂದಣಿ ಪ್ರಾರಂಭವಾಗಿದೆ. ಇದರ ಸದುಪಯೋಗವನ್ನು ತರೀಕೆರೆ ಮತ್ತು ತಾಲೂಕಿನ ಸುತ್ತ ಮುತ್ತಲಿನ ಗ್ರಾಮಸ್ಥರು, ಸಾರ್ವಜನಿಕರು ಇದರ ಉಪಯೋಗ ಪಡೆದು ಕೊಳ್ಳಬೇಕೆಂದು ಹೇಳಿದರು. ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ, ಎಚ್.ಎಸ್ ಬಲ್ಲಾಳರು ಘೋಷಿಸಿದ್ದಾರೆ ಎಂದು ತಿಳಿಸಿದರು. ಮಣಿಪಾಲ ಸಂಸ್ಥೆಯ ಸಮಸ್ಥಾಪಕ ಡಾ, ಪಿ.ಎಂ.ಎ ಫೈ ಅವರ ದೂರ ದೃಷ್ಟಿಯ ನಾಯಕತ್ವವನ್ನು ನೆನಪಿಸಿದರು. ಮಾಹೆ ಕುಲಾಧಿಪತಿ ಡಾ, ರಾಮದಾಸ್.ಎಂ ಪೈ ಅವರ ಮಾರ್ಗದರ್ಶನದಲ್ಲಿ 2000 ಇಸ್ವಿಯಲ್ಲಿ ಪ್ರಾರಂಭಿಸಲಾದ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯು ಈಗ ರಜತ ಮಹೋತ್ಸವದ ಮೈಲುಗಲ್ಲನ್ನು ತಲುಪಿದೆ 25 ವರ್ಷಗಳಲ್ಲಿ ಇದು ಕೋಟ್ಯಂತರ ಫಲಾನುಭವಿಗಳ ಜೀವನವನ್ನು ಮುಟ್ಟಿದೆ ಎಂದಿದ್ದಾರೆ.

ಮಾರುಕಟ್ಟೆ ವಿಭಾಗದ ಪ್ರತಿ ನಿಧಿಯಾದ ಅನಿಲ್ ಮಾತನಾಡಿ ಮಣಿಪಾಲದ ಕಸ್ತೂರಿಬಾ ಆಸ್ಪತ್ರೆಯಲ್ಲಿ ಕಾರ್ಡುದಾರರಿಗೆ ತಜ್ಞ ಮತ್ತು ಸೂಪರ್ ಸ್ಪೆಷಾಲಿಟಿ, ಸಮಾಲೋಚನೆ ವ್ಯವಸ್ಥೆ ಇದೆ ರೋಗ ನಿರ್ಣಯ ಮತ್ತು ಪ್ರಯೋಗಾಲಯ ಪರೀಕ್ಷೆಗಳು ಸಹ ಲಭ್ಯವಿದೆ ರೇಡಿಯೋಲಜಿ, ಒಪಿಡಿ ಮತ್ತು ಮಧುಮೇಹ ಪಾದದ ಹಾರೈಕೆಯ ಮೇಲೆ ರಿಯಾಯಿತಿ ಪ್ರಯೋಜನಗಳು, ಡಯಾಲಿಸಿಸ್ ಮತ್ತು ಆಸ್ಪತ್ರೆ ಔಷಧಿಗಳ ಮೇಲೆ ಹತ್ತು ಪರ್ಸೆಂಟ್ ರಿಯಾಯಿತಿ ವ್ಯವಸ್ಥೆ ಇದೆ ಎಂದು ತಿಳಿಸಿದರು. ಪತ್ರಕರ್ತರಾದ ತರೀಕೆರೆ ಎನ್ ವೆಂಕಟೇಶ್ ಮಾತನಾಡಿ ಕಸ್ತೂರಿಬಾ ಮಣಿಪಾಲರವರು ಪತ್ರಕರ್ತರಿಗೆ ಉಚಿತ ಚಿಕಿತ್ಸಾ ವ್ಯವಸ್ಥೆ ಏರ್ಪಡಿಸಿದ್ದು ಈ ವ್ಯವಸ್ಥೆಯು ಪತ್ರಕರ್ತರ ಕುಟುಂಬಗಳಿಗೂ ಸಹ ತುಂಬಾ ಉಪಯುಕ್ತವಾಗಿದೆ ಎಂದು ತಿಳಿಸಿದರು. ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ಕೃಷ್ಣ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರಾದ ಶಶಿಧರ್ ಅಭಿನಂದನೆ ತಿಳಿಸಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್. ತರೀಕೆರೆ.ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button