ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ – ನಟರಾಜನ ದರ್ಬಾರ್.
ಮಾನ್ವಿ ಜು.17

ಸಮಾಜ ಕಲ್ಯಾಣ ಇಲಾಖೆಯ ಮಾನ್ವಿ ತಾಲೂಕ ಅಧಿಕಾರಿ ನಟರಾಜ ಕೇಂದ್ರ ಸ್ಥಾನದಲ್ಲಿ ಇರದೆ ನಿತ್ಯ ಮಸ್ಕಿ ಯಿಂದ ಓಡಾಡುತ್ತಿದ್ದು, ನಟರಾಜ ಎಂಬ ಭೂಪನಿಗೆ ಕಾನೂನಿನ ಭಯ ಅನ್ನೋದು ಇಲ್ಲವಾಗಿದ್ದರಿಂದ ಈತನದ್ದೆ ಕಾರುಬಾರು ನಡೆದಿದೆ.

ರಾಯಚೂರು ಜಿಲ್ಲೆಯ ಮಾನ್ವಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ನಟರಾಜ ಸರಕಾರದ ಕಾರನ್ನು ನಿತ್ಯ ಕಾನೂನು ಬಾಹಿರವಾಗಿ ಮಸ್ಕಿಗೆ ಕೊಂಡ್ಯೊಯ್ಯುತ್ತಿದ್ದು. ಸಮಾಜ ಕಲ್ಯಾಣ ವಸತಿ ವಿದ್ಯಾರ್ಥಿಗಳಿಗೆ ಗುಣಮಟ್ಟದಲ್ಲಿ ಆಹಾರ ನೀಡದೆ ಲೂಟಿ ಮಾಡುತ್ತಿದ್ದಾರೆಂದು ದಲಿತ ಸಂಘರ್ಷ ಸಮಿತಿ ಮುಖಂಡ ಸದಾನಂದ ಪನ್ನೂರು ಗಂಭೀರವಾಗಿ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರೆ ಮಾನ್ವಿ ಸಮಾಜ ಕಲ್ಯಾಣ ತಾಲೂಕ ಅಧಿಕಾರಿ ನಟರಾಜನ ದುರಾಡಳಿತವನ್ನು ಮೆಚ್ಚುವಿರಾ ಅಥವಾ ವಿಧಾನ ಸೌಧದ ಮೂರನೆ ಮಹಡಿಯಲ್ಲಿ ಸನ್ಮನಿಸಿ ಗೌರವಿಸಿ ಪ್ರಶಸ್ತಿ ಕೊಡುವಿರಾ ನೀವೆ ಆಲೋಚನೆ ಮಾಡಿ. ನಟರಾಜನ ಬಗ್ಗೆ ತರಹೇವಾರಿ ಸಮಸ್ಯೆಗಳು ಬಂದರು ಕ್ಯಾರೆ ಎನ್ನದೆ ಈ ಭೂಪನ ವಿಚಾರದಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ನಿಲುವು ಏನು ಅಂತಾ ಸಾರ್ವಜನಿಕರ ಪ್ರಶ್ನೆಯಾಗಿದೆ.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ