ರೋಟರಿ ಗದಗ ಸೆಂಟ್ರಲ್ ಪದಾಧಿಕಾರಿಗಳಿಗೆ – ಪದಗ್ರಹಣ ಸಮಾರಂಭ.
ಗದಗ ಜು.17

ರೋಟರಿ ಗದಗ ಸೆಂಟ್ರಲ್ ವತಿಯಿಂದ ೨೦೨೫-೨೬ ನೇ. ಸಾಲಿನ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭವು ಸೇವಾಲಾಲ ನಗರದ ರೋಟರಿ ಭವನದಲ್ಲಿ ಜರುಗಿತು. ಸಾನಿಧ್ಯವನ್ನು ಪರಮ ಪೂಜ್ಯ ಡಾ, ತೋಂಟದ ಸಿದ್ದರಾಮ ಮಹಾಸ್ವಾಮಿಗಳು ವಹಿಸಿದ್ದರು. ಡಿ.ಆರ್.ಎಫ್ ಸಿ ಪಿಡಿಜಿ ರೋ.ಗಣೇಶ ಭಟ್ ಅವರ ಅಮೃತ ಹಸ್ತದಿಂದ ನೂತನ ಪದಾಧಿಕಾರಿಗಳಿಗೆ ಸೇವಾ ದೀಕ್ಷೆಯನ್ನು ನೆರವೇರಿಸಿ ರೋಟರಿ ಗದಗ ಸೆಂಟ್ರಲ್ ಪ್ರಸಕ್ತ ಸಾಲಿನಲ್ಲಿ ಶಿಕ್ಷಣ, ಆರೋಗ್ಯ, ಸದಭಿರುಚಿಯ ಸಮಾಜ ಮುಖಿ ಕಾರ್ಯಗಳನ್ನು ಕೈಗೊಳ್ಳಲಿ ಎಂದರು. ಉಪಸ್ಥಿತರಿದ್ದ ಅಸಿಸ್ಟಂಟ್ ಗೌರ‍್ನರ್ ರೋ.ವಿ.ಕೆ ಗುರುಮಠ ತಾವು ಕ್ಲಬ್ ಬೆಳವಣಿಗೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು. ಅಧ್ಯಕ್ಷರಾಗಿ ರೋ.ಚೇತನ ಅಂಗಡಿ, ಕಾರ್ಯದರ್ಶಿ ರೋ.ರಾಜು ಉಮನಾಬಾದಿ, ಖಜಾಂಚಿ ರೋ. ಡಾ, ಪ್ರಭು.ಗಂಜಿಹಾಳ, ಉಪಾಧ್ಯಕ್ಷರಾಗಿ ರೋ.ಟಿ ಎಸ್ ಪಾಟೀಲ, ಐಪಿಪಿ ರೋ.ಆರ್ ಬಿ ದಾನಪ್ಪಗೌಡರ, ಪ್ರೆಸಿಡೆಂಟ್ ಎಲೆಟ್ ರೋ.ಮಧುಸೂಧನ ಪುಣೇಕರ, ಸಾರ್ಜಂಟ್ ಅಟ್ ಆರ್ಮ್ಸ ರೋ. ಈಶಣ್ಣ ಗದ್ದಿಕೇರಿ, ನಿರ್ದೇಶಕ ಮಂಡಳಿಯಲ್ಲಿ ಕ್ಲಬ್ ಸೇವೆ ರೋ. ಪ್ರಕಾಶ ಉಗಲಾಟದ, ವೃತ್ತಿಪರ ಸೇವೆ ರೋ.ಮಂಜುನಾಥ ಬೇಲೇರಿ, ಸಮುದಾಯ ಸೇವೆ ರೋ. ಮುರುಗೇಶ ಬಡ್ನಿ, ಅಂತಾರಾಷ್ಟ್ರೀಯ ಸೇವೆ ರೋ.ಮಲ್ಲಿಕಾರ್ಜುನ ಐಲಿ, ಯುವಸೇವೆ ರೋ ರಾಜು ಕಂಟಿಗೊಣ್ಣನವರ, ಸ್ಥಾಯಿ ಸಮಿತಿಯಲ್ಲಿ- ಆಡಳಿತ ರೋ.ಡಾ, ಸಿ.ಬಿ ಹಿರೇಗೌಡ್ರ, ಸೇವಾಯೋಜನೆ ರೋ ಎಸ್.ಆಯ್ ಅಣ್ಣಿಗೇರಿ, ಸದಸ್ಯತ್ವ ರೋ.ಎಸ್.ಸಿ.ಲಕ್ಕುಂಡಿ, ಪಿಆರ್ ಓ ಮತ್ತು ಬುಲೆಟಿನ್ ರೋ.ಹೆಚ್ ವಿ ಶೆಟ್ಟಿ, ಕ್ಲಬ್ ತರಬೇತುದಾರರು ರೋ ಡಾ, ವಿ.ಸಿ.ಶಿರೋಳ, ರೋಟರಿ ಫೌಂಡೇಶನ್ ರೋ.ಶರಣಬಸಪ್ಪ ಗುಡಿಮನಿ, ಪೋಲಿಯೊ ಪಲ್ಸ್ ರೋ.ಸಂತೋಷ ತೋಟಗಂಟಿಮಠ, ಆರ್ ಸಿ ಸಿ/ಐಸಿಸಿ ರೋ.ಸಿ.ಜಿ.ಹಿರೇಗೌಡ್ರ, ಕ್ಲಬ್ ಇತಿಹಾಸಕಾರ ರೋ.ಮಲ್ಲಿಕಾರ್ಜುನ ಚಂದಪ್ಪನವರ, ಸೋಶಿಯಲ್ ಮತ್ತು ಕಲ್ಚರಲ್ ರೋ.ವಿಜಯಕುಮಾರ ಹಿರೇಮಠ , ಸ್ಪೋರ್ಟ್ಸ ಕಮೀಟಿ ರೋ. ರಾಜು ಕುರುಡಗಿ ಪದಗ್ರಹಣ ಮಾಡಿದರು. ಸಾನಿಧ್ಯ ವಹಿಸಿದ್ದ ಡಾ, ತೋಂಟದ ಸಿದ್ದರಾಮ ಮಹಾಸ್ವಾಮಿಗಳು ರೋಟರಿ ಗದಗ ಸೆಂಟ್ರಲ್ ಉತ್ತಮವಾದ ಕಾರ್ಯಗಳನ್ನು ಮಾಡುವ ಮೂಲಕ ಹೆಸರಾಗಿದೆ. ಸೇವೆಗೆ ಇನ್ನೊಂದು ಹೆಸರೆ ರೋಟರಿ ಸಂಸ್ಥೆ ಆಗಿದೆ ಎಂದು ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಶ್ರೀ ಸಿ.ಎಫ್ ಪಾಟೀಲ, ಶ್ರೀ ಸಿ.ಜಿ.ಚನ್ನಪ್ಪಗೌಡರ, ಮಹಿಳಾ ಸದಸ್ಯರಾಗಿ ಶ್ರೀಮತಿ ವಂದನಾ ಚೇ. ಅಂಗಡಿ, ಶ್ರೀಮತಿ ಜ್ಯೋತಿ ವಿ ಹಿರೇಮಠ, ಶ್ರೀಮತಿ ವಿದ್ಯಾ ಪ್ರ ಗಂಜಿಹಾಳ, ಶ್ರೀಮತಿ ಸುಜಾತ ಶ ಗುಡಿಮನಿ, ಶ್ರೀಮತಿ ಜ್ಯೋತಿ ರಾ. ಉಮನಾಬಾದಿ, ಶ್ರೀಮತಿ ಮಂಗಳಾ ಮ. ಬೇಲೇರಿ ನೂತನವಾಗಿ ಕ್ಲಬ್ ಸದಸ್ಯರಾಗಿ ಸೇರ್ಪಡೆಗೊಂಡರು. ರೋ.ಇಂಜನೀಯರ ಮೋಹನ ಹುಲಕೋಟಿ , ರೋ.ಶಶಿಧರ ದಿಂಡೂರ, ರೋ.ರಾಜಣ್ಣ ಮುಧೋಳ, ರೋ. ಪರಶುರಾಮ ನಾಯ್ಕರ್, ರೋ.ಸುರೇಶ ಅಬ್ಬಿಗೇರಿ ರೋ. ಮಂಜುನಾಥ ಕಬಾಡಿ, ರೋ.ಡಿ.ಜಿ.ಕೊಳ್ಳಿ, ರೋ.ಕೆ.ವಿ.ಪಾಟೀಲ, ರೋ.ಸುರೇಶ ನಿಡಗುಂದಿ ಮೊದಲಾದವರು ಪಾಲ್ಗೊಂಡಿದ್ದರು.
*****
– ಡಾ.ಪ್ರಭು ಗಂಜಿಹಾಳ
ಮೊ:9448775346