ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ 12 ನೇ. ಜಿಲ್ಲಾ ಸಮ್ಮೇಳನದ – ಧ್ವಜ ರೋಹಣ ನೇರವೆರಿಸಿದ ಮೀನಾಕ್ಷಿ ಬ್ಯಾಳಿ.
ವಿಜಯಪುರ ಜು.17

ನಗರದ ಸರ್ಕಾರಿ ನೌಕರರ ಭವನದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ 12 ನೇ. ಜಿಲ್ಲಾ ಸಮ್ಮೇಳನದ ಧ್ವಜ ರೋಹಣ ನೆರವೇರಿಸಿ ರಾಜ್ಯಾಧ್ಯಕ್ಷರಾದ ಮೀನಾಕ್ಷಿ ಬ್ಯಾಳಿ ಸಮ್ಮೇಳನ ಉದ್ಘಾಟನೆ ಮಾಡಿ ಮಾತನಾಡಿ. ಜಿಲ್ಲೆಯಲ್ಲಿ ಈ ಹಿಂದೆ ಇದ್ದ ರಾಜಕೀಯ ಪರಸ್ಥಿತಿ ಹಲವು ಬದಲಾವಣಿ ಕಂಡಿದೆ ಈ ಹಿಂದೆ ಎಂಟು ಶಾಸಕರಲ್ಲಿ ಮೂರು ಕಾಂಗ್ರೆಸ್ ಮೂರು ಬಿಜೆಪಿ ಹಾಗೂ ಎರಡು ಜೆಡಿಎಸ್ ಶಾಸಕರು ಇದ್ದ ಸ್ಥಿತಿ ಈಗ ತುಂಬಾ ಬದಲಾಗಿದೆ. ಬಬಲೇಶ್ವರ, ಬ.ಬಾಗೇವಾಡಿ, ಇಂಡಿ, ಸಿಂದಗಿ, ಮುದ್ದೇಬಿಹಾಳ, ನಾಗಠಾಣ, ಈ 6 ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಆಯ್ಕೆ ಆಗಿದೆ. ವಿಜಯಪುರ ನಗರ ಕ್ಷೇತ್ರದಲ್ಲಿ ಒಂದು ಬಿಜೆಪಿ ದೇವರ ಹಿಪ್ಪರಗಿಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಆಯ್ಕೆ ಆಗಿದೆ. ಈ ರೀತಿ ಜಿಲ್ಲೆಯಲ್ಲಿ ಶಾಸಕರುಗಳು ಇದ್ದರೆ, ಒಂದು ಲೋಕ ಸಭಾ ಕ್ಷೇತ್ರ ಬಿಜೆಪಿ ಹೊಂದಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡಿಯಿದ್ದು, ಬಿಜೆಪಿ ಬಳಿ ಒಂದು ಸ್ಥಾನ ಬಿಜೆಪಿ ಪಡೆದು ಹಿನ್ನಡೆ ಅನುಭವಿಸಿದ್ದರು ಲೋಕಸಭಾ ಸ್ಥಾನ ಉಳಿಸಿಕೊಂಡಿದೆ, ಸ್ತ್ರೀ ವಿರೋಧಿಯಾಗಿರುವ ಕೋಮುವಾದಿ ಬಿಜೆಪಿಗೆ ಹಿನ್ನಡೆ ಆಗಿದ್ದರೂ ಅದು ತನ್ನ ಹಿಂದು ಮುಸ್ಲಿಂ ಕೋಮುವಾದದ ಅಜೆಂಡಾ ಮುಂದುವರಿಸಿ ಕೊಂಡು ಹೋರಟಿದೆ ಇದರತ್ತ ನಮ್ಮ ಮಹಿಳೆಯರು ನಮ್ಮ ಯುವಕರು ಹೋಗದಂತೆ ನಾವು ಎಚ್ಚರ ವಹಿಸಬೇಕು. ದಿನಾಂಕ: 16-08-2022 ರಂದು ಹಸಿವು ಮುಕ್ತ ಬದುಕು ನನ್ನ ಸಂವಿಧಾನಿಕ ಹಕ್ಕು ಮಿತಿ ಮಿರಿದ ನಿರುದ್ಯೋಗ ಗನ್ನಕ್ಕೆರಿದೆ ದಿನ ನಿತ್ಯ ಬಳಸುವ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಕುರಿತು ಸಹಿ ಸಂಗ್ರಹಣೆ ಮಾಡಿದ ಕುರಿತು. ಕೋರಿಯರ ಮಾಡುವ ಕುರಿತು ಸಭೆ ನಡಿಯಿತು.

ದಿನಾಂಕ: 19-08-2022 ರಂದು ನ್ಯಾಯಕ್ಕಾಗಿ ಧ್ವನಿ ಎತ್ತೋಣ ಐದು ತಿಂಗಳ ಬಸರಿಯ ಮೇಲೆ ಎರಡು ದಿನ ಬಾಣಂತಿಯ ಮೇಲೆ ಸಾಮೂಹಿಕ ಅತ್ಯಚಾರ ಎಸಗಿ ಮೂರು ವರ್ಷದ ಹಸುಗೂಸನ್ನು ಕಲ್ಲಿಗೆ ಹೊಡೆದು ಸಾಯಿಸಿದ ಆರೋಪ ಸಾಬಿತಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ ಸರಕಾರದ ತಿರ್ಮಾನದ ವಿರುದ್ಧ ಹೋರಾಟ ಮಾಡಲಾಯಿತು.ಬಿಲ್ಕಿಸ್ ಬಾನುಗೆ ನ್ಯಾಯಕ್ಕಾಗಿ ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆ ಯಿಂದ ಪ್ರತಿಭಟನೆ ಮಾಡಲಾಯಿತು ಎಂದರು. ಪದ್ಮಿನಿ ಕಿರಣಗಿ ಕಲಬುರಗಿ ಜಿಲ್ಲಾ ಕಾರ್ಯದರ್ಶಿಗಳು ಮಾತನಾಡಿ ದಿನಾಂಕ: 27-08-2022 ರಂದು ಪ್ರಗತಿಪರ ಸಂಘಟನೆಯಿಂದ ಪ್ರತಿಭಟನೆ ಜನ ಸಾಮೂಹಿಕ ಕೊಲೆಗಾರರನ್ನು ಅತ್ಯಾಚಾರಿಗಳನ್ನು ಮತ್ತೆ ಜೈಲಿಗೆ ಕಳುಹಿಸಲು ಆಗ್ರಹಿಸಿ ಪ್ರತಿಭಟನೆ ಮಾಡಲಾಯಿತು. 11 ನೇ. ಸಮ್ಮೇಳನದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದೆವು ನಮ್ಮಲ್ಲಿ ಪುಲ್ ಟೈಮ್ ಕೆಲಸ ಮಾಡುವವರಿಲ್ಲ. ಆದ್ದರಿಂದ ನಮ್ಮ ಕೈಯಲ್ಲಿ ಆದಷ್ಟು ಸಂಘಟನೆ ಮುಂದುವರಿಸಿ ಕೊಂಡು ಬಂದಿದ್ದೇವೆ. ರಾಜ್ಯ ಸಮಿತಿಯ ಮಾರ್ಗದರ್ಶನದಲ್ಲಿ ಹೇಳಿದ ಎಲ್ಲಾ ಹೋರಾಟಗಳನ್ನು ಮಾಡುತ್ತಾ ಬಂದಿದ್ದೇವೆ. ಆದ್ದರಿಂದ ಇನ್ನೂ ಮುಂದೆ ಇನ್ನೂ ಸಂಘಟನೆಯನ್ನು ಚೆನ್ನಾಗಿ ಮುಂದುವರಿಸಿ ಕೊಂಡು ಹೋಗಬೇಕು ಸ್ಥಳೀಯ ಹೋರಾಟ ಮಾಡುತ್ತಾ ಬಂದಿದ್ದೇವೆ. ಎಂದರು.12 ನೇ. ಜಿಲ್ಲಾ ಸಮ್ಮೇಳನ ಅಂಗವಾಗಿ 40 ವರ್ಷಗಳಿಂದ ಹೋರಾಟದ ಹಾದಿಯಲ್ಲಿರುವ ಸೋನುಬಾಯಿ ಬ್ಯಾಳಿ ಮತ್ತು ಸಾಹೇಬಿ ಶೇಖ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ಭಾರತಿ ವಾಲಿ ಜಿಲ್ಲಾಧ್ಯಕ್ಷರು ಸುರೇಖಾ ರಜಪೂತ್ ಹಿರಿಯ ಹೋರಾಟಗಾರರು ಅನುಸಯ್ಯ ಹಜೇರಿ ಕಾರ್ಯದರ್ಶಿಗಳು ಸುನಂದಾ ನಾಯಕ ಸುವರ್ಣ ಹಲಗಣಿ ಸಾಹೇಬಿ ಶೇಖ್ ದಾಕ್ಷಾಯಿಣಿ ಉಡೆದ ವೀರಮ ಅಂಗಡಿಮಠ ರಾಜಮಾ ನದಾಫ ಸೋನು ಬಾಯಿ ಬ್ಯಾಳಿ ಮತ್ತಿತರರು ಉಪಸ್ಥಿತರಿದ್ದರು.