14-ವರ್ಷದ ಅರುಣಾ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಗೈದ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಹಾಗೂ ಸೂಕ್ತ ಕಾನೂನು ಕ್ರಮ – ಕೈಗೊಳ್ಳಬೇಕೆಂದು ಒತ್ತಾಯಿಸಿ ಡಿ.ಸಿಯವರ ಮುಖಾಂತರ ಸಿ.ಎಂ ರವರಿಗೆ ಮನವಿ ಸಲ್ಲಿಕೆ.

ವಿಜಯನಗರ ಜು.17

ವಿಜಯನಗರ ಜಿಲ್ಲೆ ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟ (ರಿ) ಬೆಂಗಳೂರು. ವಿಜಯನಗರ ಅಲ್ಲಾ ಶಿದ್ದೇಕ್ಕಾತರ ಕ್ಷೇಮಾಭಿವೃದ್ಧಿ ಸಂಘ ಹೊಸಪೇಟೆ ದಲಿತಪರ ಮತ್ತು ಪ್ರಗತಿಪರ ಸಂಘಟನೆಗಳು ಹೊಸಪೇಟೆ, ವಿಜಯನಗರ (ಜಿಲ್ಲೆ) ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.”ಬೆಂಗಳೂರು ನಗರ ಜಿಲ್ಲೆ ಮಾಗಡಿ ರಸ್ತೆಯ ತಾವರಗೇರಿಯಿಂದ ಗಾರೆ ಕೆಲಸ ಮಾಡಿಕೊಂಡು ಜೀವನೋಪಾಯ ದುಡಿಯಲು ಹೋಗಿದ್ದು, ಕೊಪ್ಪಳ ಜಿಲ್ಲೆಯ ಹೊಸಬಂಡಿ ಹರ್ಲಾಪುರ ಗ್ರಾಮದ ದಲಿತ ಪರಿಶಿಷ್ಟ ಜಾತಿ ಅಲಮಾರಿ ಸಿಳ್ಳೆಕ್ಯಾತ ಸಮುದಾಯದ ನಾಗಪ್ಪ ಮತ್ತು ರೇಣುಕಮ್ಮಾ ದಂಪತಿಗಳು ಮೂರು ಜನ ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು 14 ವರ್ಷದ ಅರುಣಾ ಎಂಬ ಹೆಣ್ಣುಮಗಳನ್ನು ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಮಾರಕಾಸ್ತ್ರಗಳಿಂದ ಮುಖಕ್ಕೆ ಹೊಡೆದು ಕೊಲೆ ಮಾಡಿದ್ದಾರೆ. ಪೋಲಿಸರು ಆರೋಪಿಗಳನ್ನು ಬಂಧಿಸಿ ಎಫ್.ಐ.ಆರ್. ದಾಖಲಿಸಿದ್ದಾರೆ. ಘಟನೆ ತಿಳಿದಾಕ್ಷಣ ರಾಜ್ಯದ ಎಲ್ಲಾ ಅಲೆಮಾರಿ ಸಮುದಾಯದವರು ಮುಖಂಡರುಗಳು, ಹಾಗೂ ಬೆಂಗಳೂರು, ರಾಮನಗರ ಜಿಲ್ಲೆ ನೊಂದ ಕುಟುಂಭವನ್ನು ಭೇಟಿಯಾಗಿ ಬಾಲಕಿ ಮೇಲೆ ಅಮಾನವೀಯ ಕ್ರೂರ ಕೃತ್ಯ ಗೈದ ಆರೋಪಿಗಳಿಗೆ ಗಲ್ಲು ಶಿಕ್ಷೆ ಕೊಡಬೇಕೆಂದು ದಲಿತ ಪರಿಶಿಷ್ಟ ಜಾತಿ ಅಲೆಮಾರಿ ಸಿಳ್ಳೆಕ್ಯಾತ ಸಮುದಾಯದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆ ಮಾಡಿರುವ ಕೃತ್ಯಕ್ಕೆ ಉಗ್ರವಾಗಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಅಲೆಮಾರಿ, ದಲಿತ ಸಂಘಟನೆಗಳು ಉಗ್ರವಾಗಿ ಹೋರಾಟ ಮೂಲಕ ಖಂಡನೆ ವ್ಯಕ್ತಪಡಿಸಿದ್ದಾರೆ.

ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಹಾಗೂ ನೊಂದ ಕುಟುಂಬಕ್ಕೆ ಸರ್ಕಾರದಿಂದ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಮತ್ತು ಮಹಿಳಾ ಮಕ್ಕಳ ಆಯೋಗ, ಪೋಲಿಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕುಗಳ ಪದಾಧಿಕಾರಿಗಳು ಅಲೆಮಾರಿ ಮುಖಂಡರುಗಳು ಮತ್ತು ದಲಿತಪರ ಸಂಘಟನೆಗಳು, ಪ್ರಗತಿಪರ ಚಿಂತಕರು, ಕಾರ್ಯಕಾರಿಣಿ ಸಮಿತಿ ಸದಸ್ಯರುಗಳು ಜಿಲ್ಲಾ ಅನುಷ್ಠಾನ ಸಮಿತಿ, ಸದಸ್ಯರುಗಳು, ಗೌರವ ಸದಸ್ಯರುಗಳು ಸರ್ವ ಸದಸ್ಯರುಗಳು ಈ ಮೂಲಕ ನ್ಯಾಯ ಒದಗಿಸಿ ಕೊಡಬೇಕೆಂದು ನನಗೆ ಪತ್ರವನ್ನು ಸಲ್ಲಿಸಿದರು ಈ ಸಂದರ್ಭದಲ್ಲಿ ಮುಖಂಡರುಗಳಾದಸಿದ್ದು ಬೆಳಗಲ್,ಕಿನ್ನೂರಿ ಶೇಖಪ್ಪ, ಜೆ.ರಮೇಶ, ಸಣ್ಣಮಾರೆಪ್ಪ, ಜೆ.ಶಿವಕುಮಾರ್, ಶೇಖರ್, ಹಂಪಯ್ಯ, ಮಾರುತಿ, ರಾಜಕುಮಾರ್, ಜಂಬಯ್ಯನಾಯಕ, ಈ ಸಂದರ್ಭದಲ್ಲಿ ಹಲವಾರು ಮುಖಂಡರು ಉಪಸ್ಥಿತರಿದ್ದರು.ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button