ಕಲಿಯುಗಕ್ಕೆ ಭಕ್ತಿ ಮಾರ್ಗವೇ ಸೂಕ್ತ – ಮಾತಾಜೀ ಅಮೋಘಮಯೀ ಅಭಿಮತ.
ಚಳ್ಳಕೆರೆ ಜು.18

ಭಗವಾನ್ ಶ್ರೀರಾಮಕೃಷ್ಣರು ಹೇಳಿದಂತೆ ಇಂದಿನ ಕಲಿಯುಗಕ್ಕೆ ಭಕ್ತಿ ಮಾರ್ಗವೇ ಸೂಕ್ತ ಎಂದು ಮೈಸೂರಿನ ಶ್ರೀಶಾರದಾ ವಿಶ್ವ ಭಾವೈಕ್ಯ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಅಮೋಘಮಯೀ ತಿಳಿಸಿದರು. ನಗರದ ವಾಸವಿ ಕಾಲನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಭಾಗವತದಲ್ಲಿ ಬರುವ ದೃಷ್ಟಾಂತ ಕಥೆಗಳು” ಎಂಬ ವಿಷಯವಾಗಿ “ಗಾನ-ಪ್ರವಚನ” ನೀಡಿದರು.

ಶ್ರೀಮದ್ ಭಾಗವತದ ಸಾರವಸ್ತುವೇ ಭಕ್ತಿ, ಭಕ್ತಿ ಮಾರ್ಗದ ಮೂಲಕ ನಾವು ಸುಲಭವಾಗಿ ಭಗವಂತನನ್ನು ದರ್ಶಿಸಿ ಮೋಕ್ಷ ಪಡೆಯಬಹುದು. ಆದ್ದರಿಂದ ಭಾಗವತದಲ್ಲಿ ಬರುವ ದೃಷ್ಟಾಂತ ಕಥೆಗಳ ನಿತ್ಯ ಶ್ರವಣ ಮತ್ತು ಅನುಸಂಧಾನದಿಂದ ಸಾರ್ಥಕ ಬದುಕು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಸತ್ಸಂಗದ ಆರಂಭದಲ್ಲಿ ನವಲಗುಂದದ ಶ್ರೀಶಾರದೇಶ್ವರಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಅನನ್ಯಮಯೀ ಅವರು ವಿಶೇಷ ಭಜನಾ ಕಾರ್ಯಕ್ರಮವನ್ನು ನಡೆಸಿ ಕೊಟ್ಟರೆ ಕುಮಾರಿ ಹರ್ಷಿತಾ ಮತ್ತು ಮನಸಿರಿ ಶ್ರೀಮದ್ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದರು.

ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ, ಸದ್ಭಕ್ತರಾದ ಶ್ರೀಮತಿ ಸಿ.ಎಸ್ ಭಾರತಿ, ವಿಜಯಲಕ್ಷ್ಮೀ ಸದಾನಂದ, ಪ್ರಮೀಳಾ, ಮಾಣಿಕ್ಯ ಸತ್ಯನಾರಾಯಣ, ವನಜಾಕ್ಷಿ ಮೋಹನ್, ಜಿ ಯಶೋಧಾ ಪ್ರಕಾಶ್, ಮಂಜುಳ, ಯತೀಶ್.ಎಂ ಸಿದ್ದಾಪುರ, ಗೀತಾ ಸುಂದರೇಶ್, ಸುಮನಾ ಕೋಟೇಶ್ವರ, ಗೀತಾ ವೆಂಕಟೇಶರೆಡ್ಡಿ, ಚೇತನ್, ಕವಿತಾ, ಕಾವೇರಿ, ಸುರೇಶ್, ಚೆನ್ನಕೇಶವ, ವಿಜಯಲಕ್ಷ್ಮಿ, ವಿಮಲಾ, ಸಂತೋಷ್, ರಶ್ಮಿ ಪಂಡಿತಾರಾಧ್ಯ, ನಳಿನ, ಸೌಮ್ಯ, ಪಂಕಜ ಚೆನ್ನಪ್ಪ, ಸುಧಾಮಣಿ ಸೇರಿದಂತೆ ಸಾಕಷ್ಟು ಸಂಖ್ಯೆಯ ಸದ್ಭಕ್ತರಿದ್ದರು.
ವರದಿ-ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.