ಗ್ರಾಮದಲ್ಲಿ ಹತ್ತು ದಿನದ ಮಹೋರಂ ಕೊನೆಯ ದಿನ ದಂದು – ಹಬ್ಬದ ಸಂಭ್ರಮಚಾರಣೆ.
ಬೆಳವಣಿಕಿ ಜು.18

ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಬೆಳವಣಿಕಿ ಗ್ರಾಮದಲ್ಲಿ ಸಂಭ್ರಮದಿಂದ ಹೆಜ್ಜೆ ಮೇಳಗಳಿಂದ ಹಾಡು ಮತ್ತು ಹೆಜ್ಜೆ ಹಾಕುವುದರ ಮೂಲಕ ಬೆಳವಣಿಕಿ ಗ್ರಾಮದ ಹತ್ತು ದಿನದ ಜಾತಾ ಕಾರ್ಯಕ್ರಮ ನೆರವೇರಿಸಲಾಯಿತು. ಸುತ್ತ ಮತ್ತಲಿನ ಗ್ರಾಮಗಳ ಜನರು ಮತ್ತು ಗ್ರಾಮದ ಹಿರಿಯರು ಯುವಕರು ಸೇರಿ ಅತ್ಯಂತ ವಿಜೃಂಭಣೆಯಿಂದ ಯಾವಗಲ್ಲ ಗ್ರಾಮದ ತಳವಾರ್ ಓಣಿ ಹೆಜ್ಜೆ ಮೇಳ ಮತ್ತು ಹೊಂಬಳ ಗ್ರಾಮದ ಅಂಬೇಡ್ಕರ್ ಯುವಕ ಮಂಡಳದ ಹೆಜ್ಜೆ ಮೇಳದವರು ಮತ್ತು ಮಂಗಳ ಮುಖಿಯರನ್ನ ಒಳಗೊಂಡ ಮಹೋರಂ ಪದಗಳನ್ನ ಹಾಡುವ ಮೂಲಕ ಹೆಜ್ಜೆ ಹಾಕುತ್ತ ಜನರ ಮನ ಸೆಳೆಯುವಂತಹ ಹೆಜ್ಜೆ ಹಾಕಿದರು.

ಮಸೀದಿಯಲ್ಲಿ ಇರುವ ದೇವರಿಗೆ ಸಕ್ಕರೆ ನೈವೇದ್ಯ ಮಾಡಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಹಿತ ಮಾಡಿಸಲಾಗಿತ್ತು.ಗ್ರಾಮದ ಮಹಿಳೆಯರು ಮತ್ತು ಹಿರಿಯರು ದೇವರಿಗೆ ಸಕ್ಕರೆ ನೈವೇದ್ಯ ಮಾಡಿಸಿ ಪ್ರಸಾದ ಸೇವಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದವರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ.ಗದಗ