ಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ಸಾಂಸ್ಕೃತಿಕ ಹಾಗೂ ವಿವಿಧ – ಸಾಂಘಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ.
ನರೇಗಲ್ಲ ಜು.18

ಗಜೇಂದ್ರಗಡ ತಾಲೂಕಿನ ನರೇಗಲ್ಲಿನ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನರೇಗಲ್ಲನಲ್ಲಿ ಇಂದು ಸನ್ 2025-26 ನೇ. ಸಾಲಿನ ಸಾಂಸ್ಕೃತಿಕ ಹಾಗೂ ವಿವಿಧ ಸಾಂಘಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಶಾಲೆಯ ಚೇರಮನ್ನರಾದ ಶ್ರೀ ಯುತ ಡಾಕ್ಟರ್, ಜಿ.ಕೆ ಕಾಳೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಯುತ ಅರುಣ್ ಕುಲಕರ್ಣಿಯವರು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಂದ ಮಾತ್ರ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು. ಎಸ್ ಎ.ವಿ.ವಿ.ಪಿ ಸಮಿತಿಯ ಆಡಳಿತ ಅಧಿಕಾರಿಗಳಾದ ಎನ್.ಆರ್ ಗೌಡರ್, ಉಚಿತ ಪ್ರಸಾದ ನಿಲಯದ ಚೇರಮನ್ನರಾದ ಮಲ್ಲಿಕಾರ್ಜುನಪ್ಪ ಮೆಣಸಗಿ ಉಪಸ್ಥಿತರಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ಬಿ.ಜಿ ಶಿರ್ಸಿಯವರು ಸೇರಿದಂತೆ, ಎಮ್.ವಿ ಕಡೆತೋಟದ, ಶ್ರೀಮತಿ ಪೂರ್ಣಿಮಾ ಅಂಗಡಿ, ವಿ ಪಿ ಗ್ರಾಮ ಪುರೋಹಿತ, ಎಸ್ ವಿ ಹಿರೇಮಠ,ವಿ ಎಸ್ ಜಾದವ್, ಎಸ್ ಕೆ ಕುಲಕರ್ಣಿ, ಸಾವಿತ್ರಿ ಮಾನ್ವಿ,ಎಮ್ ಎಮ್ ಸಿಳ್ಳಿನ್.ಗೀತಾ ಶಿಂಧೆ, ಕೆ ಆಯ್ ಕೋಳಿವಾಡ, ಆಯ್ ಬಿ ಒಂಟೇಲಿ, ಶ್ರೀಮತಿ ಎನ್ ಜೆ ಸಂಗನಾಳ, ಜೆ ವಿ ಕೆರಿಯವರ,ಅಕ್ಕಮಹಾದೇವಿ ಅಯ್ಯನಗೌಡ್ರ, ಶ್ರೀಮತಿ ರಾಜೇಶ್ವರಿ ಈಟಿ, ಗೀತಾ ಕಂಬಳಿ, ರಜಿಯಾಬೇಗಂ, ವಿದ್ಯಾ ಮುಗಳಿ, ಜಯಶ್ರೀ ಮೆಣಸಗಿ, ಎಮ್.ಎಸ್ ಧರ್ಮಾಯತ, ಎಸ್.ಎ ಚೋಳಿನ, ಕುಮಾರಿ ಪಿ ಎಸ್ ಅಂಗಡಿ, ಶ್ರೀಮತಿ ಪದ್ಮಾವತಿ ಅಂಬಿಗೇರ ಶ್ವೇತಾ ಶಿ ಹಿರೇಮಠ, ನೇತ್ರಾ ಸೋಬಾನದ ನಂದಿತಾ ಮ ರಾಜೂರ ಮತ್ತು ಎಲ್ಲಾ ಸಿಬ್ಬಂದಿಗಳು ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ.ಗದಗ