ಸಾಮಾಜಿಕ ಲೆಕ್ಕ ಪರಿಶೋಧನೆ – ಗ್ರಾಮ ಸಭೆ ಜರುಗಿತು.
ಕಲಕೇರಿ ಜು.18

ಗ್ರಾಮ ಪಂಚಾಯಿತಿಯಲ್ಲಿ ಸನ್ 2024-25 ನೇ. ಸಾಲಿನ ನರೇಗಾ ಯೋಜನೆ ಮತ್ತು 15 ನೇ. ಹಣಕಾಸು ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆ ಜರುಗಿತು.

ದಿನಾಂಕ 17-07-2025, ಗುರುವಾರ ಸೋಶಿಯಲ್ ಆಡಿಟರ್ ಮೈತ್ರಾಬಾಯಿ ರಾಠೋಡ ಹಾಗೂ ಸಿಬ್ಬಂದಿ ವರ್ಗ ಹಾಗೂ ಕಲಕೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಎಲ್ಲಾ ಗ್ರಾಮ ಪಂಚಾಯಿತಿಯ ಸಿಬ್ಬಂದಿಯವರು ಮತ್ತು ಗ್ರಾಮದ ಗ್ರಾಮಸ್ಥರು ಹಾಗೂ ಮಹಿಳೆಯರು ಸೇರಿದಂತೆ ಕಾರ್ಯಕ್ರಮ ನೆರವೇರಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ