ವಚನ ಸಾಹಿತ್ಯದಲ್ಲಿ ಸರ್ವರಿಗೂ – ಸಮಾನತೆಗೆ ಆದ್ಯತೆ.

ಕೆ.ಹೊಸಹಳ್ಳಿ ಜು.18

ಕೂಡ್ಲಿಗಿ ತಾಲೂಕಿನ ಕಾನ ಹೊಸಹಳ್ಳಿಯ ಕನ್ನಡ ಭವನದಲ್ಲಿ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮತ್ತು ತಾಲೂಕು ಕದಳಿ ವೇದಿಕೆ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಎನ್.ಎಂ ರವಿಕುಮಾರ್ ಮಾತನಾಡಿ ನಮ್ಮ ಬದುಕಿನಲ್ಲಿ ಶರಣರ ಆಶಯ ಅಳವಡಿಕೆ ಅತ್ಯವಶ್ಯಕವಾದದ್ದು. 12 ನೇ. ಶತಮಾನದ ಶರಣೀಯರ ಜೀವನ ಆದರ್ಶಮಯವಾಗಿದೆ. ಅವರ ಅನುಭವದ ಮೂಲಕ ರಚಿಸಿದ ವಚನಗಳ ಆದರ್ಶಗಳನ್ನು ಪಾಲಿಸಿದರೆ ಸುಂದರ ಸಮಾಜ ನಿರ್ಮಾಣವಾಗುವುದೆಂದು ಶರಣ ಸಾಹಿತ್ಯ ಪರಿಷತ್ತಿನ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸಾಹಿತಿಯನ್ನು ಎನ್.ಎಂ ರವಿಕುಮಾರ್ ಹೇಳಿದರು. 12 ನೇ. ಶತಮಾನದಲ್ಲಿ ದಯವೇ ಧರ್ಮದ ಮೂಲವಯ್ಯ ಎಂದು ಶರಣರು ಸಾರಿದ್ದಾರೆ. ಇತ್ತೀಚಿನ ವಾತಾವರಣ ನೋಡುತ್ತಿದ್ದರೆ ಭಯವೇ ಧರ್ಮದ ಮೂಲವಯ್ಯ ಎನ್ನುವಂತಾಗಿರುವುದು ನೋವಿನ ಸಂಗತಿಯಾಗಿದೆ. ವಿಶ್ವದಲ್ಲೇ ಶ್ರೇಷ್ಠ ಧರ್ಮ ಶರಣ. ಧರ್ಮ ಶ್ರೇಷ್ಠ ಸಾಹಿತ್ಯ ವಚನ ಸಾಹಿತ್ಯ, ಬೌದ್ಧ ಧರ್ಮಕ್ಕೆ ದೊರೆತ ರಾಜಶ್ರೀಯ ವಿಶ್ವ ವ್ಯಾಪಿ ಶರಣ ಧರ್ಮಕ್ಕೆ ದೊರೆಯುತ್ತಿದ್ದರೆ ವಿಶ್ವ ಮಾನ್ಯತೆಯನ್ನು ಪಡೆಯುತ್ತಿತ್ತು ಎಂದು ತಿಳಿಸಿದರು. ಗೌಡರ ಗಂಗಣ್ಣ ಹಂಪಮ್ಮ ರವಿಚಂದ್ರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದ ಕುರಿತು ಬಸವಾದಿ ಶರಣರ ಸಂದೇಶ ಪ್ರಸಾರ ಮತ್ತು ಶರಣರ ಸಾಹಿತ್ಯದ ಪ್ರಸ್ತುತತೆ ಕುರಿತು ನಿವೃತ್ತ ಉಪನ್ಯಾಸಕ ವಸಂತ ಸಜ್ಜನ್ ಮಾತನಾಡಿ 12 ನೇ. ಶತಮಾನದ ಬಸವಣ್ಣನವರ ಕಾಯಕ ದಾಸೋಹ ತತ್ವಕ್ಕೆ ಮಾರುಹೋಗಿ ಕಾಶ್ಮೀರದ ಅರಸು ಇಂದಿನ ಮೋಳಿಗೆ ಮಾರಯ್ಯ ಎಂದೇ ಪ್ರಖ್ಯಾತಿ ಪಡೆದರು. ನಾನಾ ಭಾಗದಿಂದ ಕಲ್ಯಾಣಕ್ಕೆ ಆಗಮಿಸಿದರು ಎಂದರು. ಫ.ಗು ಹಳಕಟ್ಟಿಯವರು ಕುರಿತು ಸವಿವರವಾಗಿ ತಿಳಿಸಿದರು. ಬಸವಣ್ಣನವರ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿ ಸಮ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಕಲ್ಯಾಣದಲ್ಲಿ ಎಲ್ಲರೊಳಗೊಂಡ ಶರಣರ ಕೂಟವನ್ನು ರಚಿಸಿ ಸಮಾಜದ ಅಭ್ಯುದಯಕ್ಕೆ ಶ್ರಮಿಸಿದವರು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಫ.ಗು ಹಳಕಟ್ಟಿಯವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಸಾ.ಮ ಸಂಗಮೇಶ್ವರಯ್ಯ, ಅಧ್ಯಕ್ಷತೆ ವಹಿಸಿದ್ದರು.

ಕವಿ ಯು.ಜಗನ್ನಾಥ್, ಹಿರಿಯ ಸಾಹಿತಿಗಳಾದ ಡಾ.ಎ ವೃಷಭೇಂದ್ರ ಆಚಾರ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿಶ್ವೇಶ್ವರ ಸಜ್ಜನ್, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಕಾರ್ಯದರ್ಶಿ ಕೆ.ಎಸ್ ವೀರೇಶ್, ಸರಳ ಸಾಹಿತ್ಯ ಪರಿಷತ್ತು ತಾಲೂಕು ಮಹಿಳಾ ಕದಳಿ ವೇದಿಕೆಯ ಘಟಕದ ಅಧ್ಯಕ್ಷ ತಿಪ್ಪೀರಮ್ಮ ಸಕಲಪುರದ ಹಟ್ಟಿ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ನಂದಿ ಬಸವರಾಜ್, ದತ್ತಿ ದಾಸೋಹಿಗಳಾದ ಎಚ್ ಜಿ ಶರಣಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷರಾದ ಎನ್ ಎಸ್ ತಿಪ್ಪೇಸ್ವಾಮಿ, ಸಫಾರಿ ರಾಮಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಕಾರ್ಯದರ್ಶಿ ಕೆ ಸುಭಾಷ್ ಚಂದ್ರ, ನಿವೃತ್ತ ಶಿಕ್ಷಕರಾದ ಮಹದೇವಪ್ಪ , ಮಂಜುನಾಥ, ಪ್ರದೀಪ, ಅಶೋಕ, ಟಿಎಂ ಸಿದ್ದಲಿಂಗ ಮೂರ್ತಿ, ವೀರೇಶ, ಸುಮತಿ ಮಂಜುನಾಥಯ್ಯ, ಬಸವರಾಜಪ್ಪ ಹುಚ್ಚವನಹಳ್ಳಿ, ಜಿ.ಬಿ ಮಹದೇವ ಗೌಡ, ನಾಗರಾಜ್, ಸೇರಿದಂತೆ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button