ಶ್ರೀ ವೆಂಕಟೇಶ್ವರ ಪದವಿ ಮಹಾ ವಿದ್ಯಾಲಯದಲ್ಲಿ ಸರಸ್ವತಿ ಪೂಜಾ – ಕಾರ್ಯ ಹಾಗೂ ತರಗತಿ ಪ್ರಾರಂಭೋತ್ಸವ.

ಮಾನ್ವಿ ಜು.18

ಪಟ್ಟಣದ ಶ್ರೀ ವೆಂಕಟೇಶ್ವರ ಪದವಿ ಮಹಾ ವಿದ್ಯಾಲಯ ಮಾನ್ವಿ ರಾಷ್ಟೀಯ ಸೇವಾ ಯೋಜನೆ ಘಟಕ ಮತ್ತು ಯುವ ರೆಡ್ ಕ್ರಾಸ್ ಸಹಯೋಗದಲ್ಲಿ ಬಿ.ಎ ಪ್ರಥಮ ವರ್ಷ ವಿದ್ಯಾರ್ಥಿಗಳ ತರಗತಿ ಪಾರಂಭೋತ್ಸವ ಹಾಗೂ ಸರಸ್ವತಿ ಪೂಜಾ ಕಾರ್ಯ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಶಂಕರಪ್ಪ ಅಂಗಡಿ ಕಾಲೇಜು ನಡೆದ ಬಂದ ಹಾದಿ ಹಳೆ ವಿದ್ಯಾರ್ಥಿಗಳ ಸಾಧನೆಯನ್ನ ಮೆಲುಕು ಹಾಕಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಯೋಧರು ಆಂಜನೇಯ ಜೆಲ್ಲಿ ನೀರಮಾನ್ವಿ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ಕಡಿಮೆ ಮಾಡಿ ಪುಸ್ತಕ ಜೊತೆ ಹೆಚ್ಚಿನ ಕಾಲ ಕಳೆಯಿರಿ ನಿಮಗೆ ಒಳ್ಳೆಯ ಭವಿಷ್ಯವಿದೆ ಎಂದು ಕಾರ್ಯಕ್ರಮ ಕುರಿತು ಮಾತನಾಡಿದರು. ಶ್ರೀ ವೆಂಕಟೇಶ್ವರ ಪದವಿ ಮಹಾ ವಿದ್ಯಾಲಯವು ಅಜರಾಮರವಾಗಿ ಉಳಿಸಿ ಕೊಂಡು ಹೋಗಲು ನಮ್ಮ ಉಪನ್ಯಾಸಕ ತಂಡ ಸದಾ ಸಿದ್ಧವಾಗಿ ನಿಂತಿದೆ ಹಾಗೂ ವಿದ್ಯಾರ್ಥಿಗಳು ಉಪನ್ಯಾಸಕರ ಮಾರ್ಗದರ್ಶನದಲ್ಲಿ ಮುಂದುವರಿಯ ಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬಹಳ ಕಠಿಣವಾಗಿ ಶ್ರಮವಹಿಸಿ ಅಭ್ಯಾಸ ಮಾಡಬೇಕು ಎಂದು ಪ್ರಾಸ್ತಾವಿಕ ನುಡಿಯಲ್ಲಿ ನೂತನ ಅಧ್ಯಕ್ಷರಾದ ಆಂಜನೇಯ ನಸಲಾಪುರ ವಿದ್ಯಾರ್ಥಿಗಳಿಗೆ ತಿಳಿಸಿದರು. ಎಸ್.ಎಂ.ವಿ.ಓ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶ್ರೀದೇವಿ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೆ ಹಿಂಜರಿಯದೆ ಮುನ್ನುಗ್ಗಬೇಕು ಎಂದು ತಿಳಿಸಿದರು. ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ್ ಓಲೇಕಾರ್ ಮಾತನಾಡಿ ಈ ಶಿಕ್ಷಣ ಸಂಸ್ಥೆಯಲ್ಲಿ ಹಲವಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ಉನ್ನತವಾದ ಸ್ಥಾನ ಮಾನಗಳನ್ನು ಪಡೆದು ಕೊಂಡಿದ್ದಾರೆ. ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳು ಕೂಡ ಮುಂದಿನ ಉನ್ನತವಾದ ಭವಿಷ್ಯವನ್ನು ಕಟ್ಟಿಕೊಂಡು ತಂದೆ ತಾಯಿಗಳಿಗೆ ಹಾಗೂ ಕಲಿಸಿದ ಗುರುಗಳಿಗೆ ಹೆಸರು ತರುವಂತವರಾಗಿ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಡಾ, ಹುಲಿಯಪ್ಪ ಧುಮತಿ, ಚಂದ್ರಶೇಖರ ಎಚ್, ಮಹಿಬೂಬ್ ಮದ್ಲಾಪುರ ಮಲ್ಲಪ್ಪ ನೆಲಕೋಳ ಶ್ರೀ ವೆಂಕಟೇಶ್ವರ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಎಂ.ಡಿ ಅಶ್ರರ್, ಉಪನ್ಯಾಸಕರಾದ ಅಂಬಣ್ಣ ನಾಯಕ, ಶೈಲಜಾ, ರೇಣುಕಾ ಹಾಗೂ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮಹಿಬೂಬ ಮದ್ಲಾಪುರ ನಿರೂಪಿಸಿದರೆ, ಚಂದ್ರಶೇಖರ ಸ್ವಾಗತಿಸಿದರೆ ಅಂಬಣ್ಣ ನಾಯಕ ವಂದಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button