ಅಂತೂ ಇಂತೂ ಸುಸಜ್ಜಿತ ಗೊಳ್ಳಲು ತಯಾರಾಯ್ತು ಕಂಪ್ಲಿ ಷಾಮಿಯ ಚಂದ್ – ಪ್ರೌಢ ಮತ್ತು ಪದವಿ ಪೂರ್ವ ಕಾಲೇಜ್.
ಕಂಪ್ಲಿ ಜು.19

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಕಲ್ಯಾಣ ಕರ್ನಾಟಕದ ಸಂಘಟನಾ ಕಾರ್ಯದರ್ಶಿ ಟಿ.ಎಚ್.ಎಂ ರಾಜಕುಮಾರ ಇವರು ಹಾಗೂ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳು ಕಳೆದ ಬಾರಿ ಮಾನ್ಯ ಪೊಲೀಸ್ ನಿರೀಕ್ಷಕರು ಕರ್ನಾಟಕ ಲೋಕಾಯುಕ್ತ ಬಳ್ಳಾರಿ ಸಾರ್ವಜನಿಕರ ಕುಂದು ಕೊರತೆ ಅಹವಾಲುಗಳ ಸ್ವೀಕಾರ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾದ ಷಾಮಿಯ ಚಂದ್ ಬಾಲಕರ ಸರ್ಕಾರಿ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಉಳಿಸಿ ಸುಸಜ್ಜಿತ ಗೊಳಿಸಿ ಎಂಬ ಅಭಿಯಾನ ದೊಂದಿಗೆ ಜಾಗೃತ ಗೊಳಿಸಲು ಸರ್ಕಾರಿ ಅಧಿಕಾರಿಗಳಿಗೆ ಸೂಚಿಸಿ ಮನವಿಯನ್ನು ಸಲ್ಲಿಸಿದಕ್ಕೆ ಮೊದಲ ಜಯ ದೊರಕಿ ದಂತಾಗಿದೆ ಮಾನ್ಯ ಶಾಸಕರಾದ ಶ್ರೀ ಜೆ.ಎನ್ ಗಣೇಶ್ ರವರು ಕಂಪ್ಲಿ ಈ ದಿನ ಶಾಲೆಯ ಬಗ್ಗೆ ಮಾತನಾಡಿ ಅತೀ ಶೀಘ್ರದಲ್ಲಿ ಕಾಮಗಾರಿಯನ್ನು ಮಾಡಲು ಆಶ್ವಾಸನೆ ಕೊಟ್ಟರು ಇದಕ್ಕೆ ಸಂಘಟನೆ ವತಿಯಿಂದ ಮತ್ತು ಹಳೆಯ ವಿದ್ಯಾರ್ಥಿಗಳ ವತಿಯಿಂದ ಕಾಮಗಾರಿಯನ್ನು ಅತಿ ಶೀಘ್ರದಲ್ಲಿ ಪ್ರಾರಂಭಿಸಿ ಎಂದು ಧನ್ಯವಾದಗಳು ತಿಳಿಸಿದರು ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಟಿ.ಎಚ್.ಎಂ ರಾಜಕುಮಾರ.ಕಂಪ್ಲಿ.ಬಳ್ಳಾರಿ

