“ಏಕಾಂಗಿತವೇ ನಿಜ ಶಕ್ತಿ”…..

ಜಗದಲಿ ನೇರ ನಡೆ ನುಡಿಯುವರನ್ನು
ಒಬ್ಬಂಟಿಗನಾಗಿಸುವರು
ನಿಶ್ವಾರ್ಥ ಸಹಾಯ ಗುಣದವನು ನಿಜ
ಬಡವನು
ಶುದ್ಧ ಹಸ್ತ ಸ್ವಾಭಿಮಾನದವನು ಅಪಮಾನವ
ಎದುರಿಸುವನು
ಕನಿಕರದಿ ಕರಗುವವನು ಸೂರ್ಯ
ಪ್ರಖರದಲಿರುವನು
ಸಕಲರನ್ನು ಸಮಭಾವದಿ ಕಾಣುವವರನ್ನು
ಶತ್ರುತ್ವದಿ ಕಾಣುವರು
ಜಗವೆಲ್ಲಾ ನಗುಸುವವನು ನೋವಿನಲಿರುವನು
ಶ್ರಮವಹಿಸಿ ಗಳಿಸಿದವನು ಅನುಭವಿಸದೇ
ಉಳಿಸುವನು
ಸುಖ ದುಃಖವೇ ಎಲ್ಲಾ ಎದುರಿಸಿ ಗೆಲ್ಲುವ
ಯುಕ್ತಿ
ವಜ್ರಕಾಯದವನಿಗೆ ಏಕಾಂಗಿತನವೇ ನಿಜ ಶಕ್ತಿ
ಶ್ರೀ ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ