ನಾಳೆ ಪತ್ರಿಕಾ ದಿನಾಚರಣೆ ಮತ್ತು ಉಚಿತ ಆರೋಗ್ಯ – ತಪಾಸಣಾ ಶಿಬಿರ ಕಾರ್ಯಕ್ರಮ.
ಕೂಡ್ಲಿಗಿ ಜು.20

ಕೂಡ್ಲಿಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘ ಕೂಡ್ಲಿಗಿ ತಾಲೂಕು ಎಸ್.ಎಸ್ ನಾರಾಯಣ ಸೂಪರ್ ಸ್ಪೆಷಲಿಸ್ಟ್ ಸೆಂಟರ್ ದಾವಣಗೆರೆ ಮತ್ತು ಸಾರ್ವಜನಿಕ ಆಸ್ಪತ್ರೆ ಕೂಡ್ಲಿಗಿ ತಾಲೂಕ ವಿಜಯನಗರ ಜಿಲ್ಲಾ, ಜಂಟಿ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಆಯೋಜಿಸಿದ್ದು ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ, ಎನ್.ಟಿ ಶ್ರೀನಿವಾಸ್, ಅಧ್ಯಕ್ಷತೆ ಬಾಣದ ಶಿವಮೂರ್ತಿ ಅಧ್ಯಕ್ಷರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘ ತಾಲೂಕು ಘಟಕ ಕೂಡ್ಲಿಗಿ, ಕಾವಲಿ ಶಿವಪ್ಪ ನಾಯಕ ಅಧ್ಯಕ್ಷರು ಪಟ್ಟಣ ಪಂಚಾಯಿತಿ ಕೂಡ್ಲಿಗಿ, ಬಂಗ್ಲೆ ಮಲ್ಲಿಕಾರ್ಜುನ ಸಂಸ್ಥಾಪಕ ರಾಜ್ಯಾಧ್ಯಕ್ಷರು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಬೆಂಗಳೂರು, ಕು. ವಿ.ಕೆ ನೇತ್ರಾವತಿ ತಹಶೀಲ್ದಾರ್ ಕೂಡ್ಲಿಗಿ, ಮಲ್ಲೇಶ್ ದೊಡ್ಡಮನಿ ಡಿ.ಎಸ್.ಪಿ ಕೂಡ್ಲಿಗಿ.

ಕೆ ನರಸಪ್ಪ ಕಾರ್ಯ ನಿರ್ವಹಣಾಧಿಕಾರಿಗಳು ತಾಲೂಕ ಪಂಚಾಯಿತಿ ಕೂಡ್ಲಿಗಿ, ಡಾ, ಪ್ರದೀಪ್ ಆರೋಗ್ಯ ಅಧಿಕಾರಿಗಳು ತಾಲೂಕ ಸಾರ್ವಜನಿಕ ಆಸ್ಪತ್ರೆ ಕೂಡ್ಲಿಗಿ, ಡಾ, ಮಧು.ಸಿ ಮುಖ್ಯ ವೈದ್ಯಾಧಿಕಾರಿಗಳು ತಾಲೂಕ ಸಾರ್ವಜನಿಕ ಆಸ್ಪತ್ರೆ ಕೂಡ್ಲಿಗಿ, ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೃದಯ ರೋಗ, ನರ ರೋಗ, ಮೂತ್ರಕೋಶ, ಮೂತ್ರಪಿಂಡ, ಗ್ಯಾಸ್ಟ್ರೋ ಸೈನ್ಸ್, ಹಾಗೂ ಕೀಲು ಮತ್ತು ಮೂಳೆ ವೈದ್ಯರು ಲಭ್ಯವಿರುತ್ತಾರೆ. ಈ ಕಾರ್ಯಕ್ರಮ 21-07-2025 ರಂದು ಸೋಮವಾರ ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 2:00 ಗಂಟೆ ವರೆಗೆ ಸ್ಥಳ ಸಾರ್ವಜನಿಕರ ಆಸ್ಪತ್ರೆ ಕೂಡ್ಲಿಗಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘದ ಅಧ್ಯಕ್ಷರಾದ ಬಾಣದ ಶಿವಮೂರ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ