ಸಂವಿಧಾನ ಮತ್ತು ಅಂಬೇಡ್ಕರ್ ಸಾಮಾಜಿಕ ಸಮಾನತೆಗಾಗಿ – ಜನ ಆಂದೋಲನ ಸಮಾವೇಶ 22 ಕ್ಕೆ ಕಾರ್ಯಕ್ರಮ.

ವಿಜಯಪುರ ಜು.21

ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ಸಮಿತಿ ವಿಜಯಪುರ ವತಿಯಿಂದ ಸಂವಿಧಾನ ಮತ್ತು ಅಂಬೇಡ್ಕರ್ ಸಾಮಾಜಿಕ ಸಮಾನತೆಗಾಗಿ ಜನ ಆಂದೋಲನ ಸಮಾವೇಶ ದಿನಾಂಕ 22-07-2025 ಮಂಗಳವಾರ ಮಧ್ಯಾಹ್ನ 12.30 ಗಂಟೆಗೆ ಸಮಾವೇಶ ಕಂದಗಲ ಶ್ರೀ ಹನುಮಂತರಾಯ ರಂಗ ಮಂದಿರದಲ್ಲಿ ಜರಗುವುದು ಮೆರವಣಿಗೆ ಬೆಳಿಗ್ಗೆ 11.00 ಗಂಟೆಗೆ ಬೌದ್ಧ ವಿಹಾರದಿಂದ ಹೊರಟು ನಗರದ ಪ್ರಮುಖ ರಸ್ತೆಗಳ ಮಾರ್ಗವಾಗಿ ರಂಗ ಮಂದಿರ ತಲುಪುವುದು. ಸಮಾವೇಶದ ಕುರಿತು ರಾಜ್ಯ ಸಂಘಟನಾ ಸಚಾಲಕರಾದ ರಮೇಶ ಆಸಂಗಿ ಮಾತನಾಡಿ ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷವಾಯಿತು. ದೇಶವು ಲಿಖಿತವಾದ ಸಂವಿಧಾನವನ್ನು ಅನುಷ್ಠಾನಕ್ಕೆ ತಂದು 75 ವರ್ಷಗಳಾಯಿತು. ಸಂವಿಧಾನ ಶಿಲ್ಪಿ ಡಾ, ಬಿ.ಆ‌ರ್. ಅಂಬೇಡ್ಕರ್ ರವರು ತಮ್ಮ ಪರಿಕಲ್ಪನೆಯ ಸಂವಿಧಾನದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯ ಸ್ವಾತಂತ್ರ್ಯ ಭಾರತದ ಕನಸುಗಳನ್ನು ನನಸು ಮಾಡುವ ದಿಸೆಯಲ್ಲಿ ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯಾತಿತ ಸ್ವರೂಪ, ಭ್ರಾತೃತ್ವ ಹಾಗೂ ಒಕ್ಕೂಟ ಪ್ರಭುತ್ವಗಳನ್ನು, ಭದ್ರವಾದ ಅಡಿಪಾಯ ಹಾಕಿ ರಚಿಸಿದ್ದಾರೆ. ಈ ಮೂಲಭೂತವಾದ ಆಶಯಗಳಿಗೆ ಧಕ್ಕೆ ಉಂಟು ಮಾಡುವ ಯಾವುದೇ ಕೃತ್ಯಗಳನ್ನು ಇಡೀ ಅಖಂಡ ಭಾರತದಲ್ಲಿ ಯಾರು ಸಹಿಸಲು ಸಾಧ್ಯವಿಲ್ಲ. ಆದರೆ ವಿಶ್ವದಲ್ಲಿ ಅತ್ಯಂತ ಬಲಿಷ್ಠವಾದೆ ಇಂತಹ ಮಹತ್ವದ ಸಂವಿಧಾನವನ್ನು ಹಾಡು ಹಗಲಲ್ಲೆ ದೇಶದ ರಾಜಧಾನಿ ನವ ದೆಹಲಿಯಲ್ಲಿ ಕೆಲವು ಪೂರ್ವಾಗ್ರಹ ಪೀಡಿತ ಮನಸ್ಸಿನ ಜನರು ಸುಟ್ಟು ಹಾಕಿದ್ದಾರೆ ಮತ್ತು ಬಾಬಾ ಸಾಹೇಬ ಡಾ, ಅಂಬೇಡ್ಕರ ರವರ ವಿರುದ್ದ ಘೋಷಣೆಗಳನ್ನು ಕೂಗುತ್ತಾರೆ ಎಂದರೆ, ಇವರಿಗೆ ಈ ಧೈರ್ಯ ಎಲ್ಲಿಂದ ಬಂತು? ಇದರ ಹಿಂದಿರುವ ಶಕ್ತಿ ಯಾವುದಿರಬಹುದು? ಇದನ್ನು ನೋಡಿ ಕೊಂಡು ಸರಕಾರಗಳು ಮೌನವಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜ್ಞಾವಂತ ನಾಗರೀಕರು ತಲೆ ತಗ್ಗಿಸುವಂತೆ ಮಾಡಿದೆ. ಮಾತ್ರವಲ್ಲದೆ. ಸ್ವತಂತ್ರ ಭಾರತದಲ್ಲಿ ಇಂದೆಂದೂ ಕಂಡಿರಿಯದಂತಹ ಹೊಸ ಸವಾಲು ಎದುರಾಗಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇದು ದೇಶದ ಭಾವೈಕ್ಯತೆ ಮತ್ತು ಸಮಗ್ರತೆಗೆ ಅಪಾಯದ ಮುನ್ಸೂಚನೆ ಯಾಗಿದೆ. ಇಂತಹ ಅಪಾಯಕಾರಿ ಸನ್ನಿವೇಶದಲ್ಲಿ ಎಲ್ಲಾ ದೇಶ ಪ್ರೇಮಿಗಳು ಒಗ್ಗಟ್ಟಾಗಿ ಪರಿಸ್ಥಿತಿಯನ್ನು ಎದುರಿಸ ಬೇಕಾಗಿದೆ. ಇದು ನಮ್ಮೆಲ್ಲರ ಮುಂದಿರುವ ತುರ್ತು ಕರ್ತವ್ಯವಾಗಿದೆ.ಕರ್ನಾಟಕದಲ್ಲಿ ದಲಿತ ಚಳುವಳಿಯು ಪ್ರಾರಂಭವಾದಾ ಗಿನಿಂದಲೂ ಅಂಬೇಡ್ಕರ್ ಚಿಂತನೆಯನ್ನು ತನ್ನ ಮೂಲಾಧಾರವಾಗಿಸಿ ಕೊಂಡಿದೆ. ಅಸ್ಪೃಶ್ಯತಾ ಜಾತಿ ವಿನಾಶ, ಸಮಾನತೆ ಹಕ್ಕು, ಪ್ರಜಾಸತ್ತಾತ್ಮಕ ಆಡಳಿತ, ಜಾತ್ಯಾತೀತ ನಿಲುವು, ಅಹಿಂಸಾತ್ಮಕ ಹೋರಾಟದ ವಿಧಾನ ಸ್ವಾವಲಂಬಿ ಬದುಕಿನ ಭರವಸೆ. ಇತ್ಯಾದಿಯಾಗಿ ಅಂಬೇಡ್ಕರ್ ಮುಂದಿಟ್ಟ ತತ್ವಗಳನ್ನು ಕರ್ನಾಟಕ ದಲಿತ ಚಳವಳಿ ಅನುಸರಿಸಿ ಕೊಂಡು ಬಂದಿದೆ. ನಮ್ಮ ದೇಶ ಯಾವುದೇ ಒಂದು ಧರ್ಮಕ್ಕೆ ಮೀಸಲಾಗಿಲ್ಲ ನಮ್ಮದು ಸರ್ವ ಧರ್ಮಗಳ ದೇಶವಾಗಿದೆ. ಅಲ್ಪಸಂಖ್ಯಾತರ ಮೇಲೆ ಬಹು ಸಂಖ್ಯಾತರರು ಯಾವುದೇ ಕಾರಣಕ್ಕೆ ಸವಾರಿ ಮಾಡ ಬಾರದೆಂದು ಧಾರ್ಮಿಕ ಅಲ್ಪಸಂಖ್ಯಾತರಿಗೆ ಕೆಲವು ವಿಶೇಷ ಸವಲತ್ತುಗಳ ಅವಕಾಶಗಳನ್ನು ಸಂವಿಧಾನ ಕಲ್ಪಿಸಿದೆ. ಇಂತಹ ಕೆಲವು ಕಾರಣಗಳಿಂದಾಗಿ ಸಂವಿಧಾನವನ್ನು ಸುಡುವ ಮಟ್ಟಕ್ಕೆ ತಲುಪಲಾಗಿದೆ ಎಂದು ಭಾವಿಸಬಹುದು. ನಮ್ಮ ಸಂವಿಧಾನದಲ್ಲಿ ಮಾನವೀಯ ಹಾಗೂ ಮನುಷ್ಯತ್ವದ ಅಂಶಗಳಿಗೆ ಹೆಚ್ಚು ಒತ್ತು ಕೊಡಲಾಗಿದೆ. ಇದರಲ್ಲಿ ಸಾಮಾಜಿಕ ನ್ಯಾಯ ಪ್ರಮುಖ ಸ್ಥಾನ ಹೊಂದಿದೆ. ಎಂದರು ಬೆಳಗಾವಿ ವಿಭಾಗೀಯ ಸಂಚಾಲಕರಾದ ವಿನಾಯಕ್ ಗುಣಸಾಗರ ಮತ್ತು ಜಿಲ್ಲಾ ಸಂಚಾಲಕರಾದ ಅಶೋಕ ಚಲವಾದಿ ಮಾತನಾಡಿ, ದಲಿತರಿಗೆ, ಹಿಂದುಳಿದವರಿಗೆ ಮತ್ತು ಬಡವರು, ತುಳಿತಕ್ಕೆ, ಶೋಷಣೆಗೆ ಸಿಲುಕಿರುವ ಅಸಹಾಯಕರನ್ನು ರಾಜಕೀಯವಾಗಿ, ಆರ್ಥಿಕವಾಗಿ, ಇವೆಲ್ಲಾ ಅಂಬೇಡ್ಕರ್ ರವರ ಪರಿಕಲ್ಪನೆ ಗಳಾಹಗಿವೆ. ಇದನ್ನು ಸಂವಿಧಾನ ಕುರಿತಂತೆ ಪಾಠ ಹೇಳ ಬೇಕಾಗಿದೆ. ದೇಶದ ಬಹುತ್ವಕ್ಕೆ ಎಂದಿನಿಂದಲೂ ವಿರುದ್ಧವಾಗಿರುವ ಆರ್.ಎಸ್.ಎಸ್, ಯಾವಾಗಲೂ ಮನುಷ್ಯನ ಆಹಾರ, ಬಟ್ಟೆ ಆಚರಣೆ ಹಾಗೂ ಅವರ ಆಲೋಚನೆಗಳ ವಿಷಯದಲ್ಲಿ ನಿಯಂತ್ರಣ ಸಾಧಿಸಲು ಯತ್ನಿಸುತ್ತಲೆ ಇದೆ. ಆದರೆ ಬಾಬಾಸಾಹೇಬ ಅಂಬೇಡ್ಕರರು ನೀಡಿರುವ ಈ ದೇಶದ ಆತ್ಮವಾದ ಸಂವಿಧಾನವು ಎಷ್ಟು ಗಟ್ಟಿಯಾಗಿದೆ ಯೆಂದರೆ ಇಂತಹ ನೂರು ದಾಳಿಗಳು ಮತ್ತು ಕುತಂತ್ರಗಳನ್ನು ಅದು ಇನ್ನೂ ಕೋಟಿ ಬಾರಿ ಎದುರಿಸಿ ನಿಲ್ಲುವಷ್ಟು ಸಮರ್ಥವಾಗಿದೆ. ಇತ್ತೀಚಿಗೆ ಬಾಬಾ ಸಾಹೇಬ ಅಂಬೇಡ್ಕರರ ವಿಷಯದಲ್ಲಿ ಪ್ರೀತಿ ತೋರಿಸುವ ನಾಟಕ ಮಾಡುತ್ತಿರುವ ಆ‌ರ್.ಎಸ್.ಎಸ್ ನವರು ಡಾ, ಬಾಬಾ ಸಾಹೇಬ ಅಂಬೇಡ್ಕರರ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಮಾತನಾಡುತ್ತಿರುವ ದತ್ತಾತ್ರೇಯ ಹೊಸಬಾಳೆ ಅವರನ್ನು ಆರ್.ಎಸ್.ಎಸ್ ನಿಂದ ಹೊರ ಹಾಕಿ ಅವರ ಮೇಲೆ ಕ್ರಮ ಜರುಗಿಸಲಿ, ಇಲ್ಲವಾದರೆ ತಾವೊಬ್ಬ ದೇಶದ್ರೋಹಿ ಸಂಘಟನೆ ಎಂಬುದನ್ನು ಬಹಿರಂಗವಾಗಿ ಒಪ್ಪಿ ಕೊಳ್ಳಬೇಕು. ಈ ಹಿನ್ನಲೆಯಲ್ಲಿ ಸಂವಿಧಾನ ಮತ್ತು ಅಂಬೇಡ್ಕರ ಸಾಮಾಜಿಕ ಸಮಾನತೆಗಾಗಿ ಜನ ಆಂದೋಲನ ಸಮಾವೇಶವನ್ನು ದಿನಾಂಕ:-22/07/2025 ರಂದು ಮಂಗಳವಾರ ಬೌದ್ಧ ವಿಹಾರದಿಂದ ಸಕಲ ವಾದ್ಯಗಳೊಂದಿಗೆ ಬೆಳಿಗ್ಗೆ ಹನ್ನೊಂದು ಘಂಟೆಗೆ ಮೇರವಣಿಗೆ ಹೊರಟು ವಿವಿಧ ನಗರದ ಪ್ರಮುಖ ರಸ್ತೆಗಳಲ್ಲಿ ಹೊರಟು ಕಂದಗಲ ಹನುಮಂತರಾಯ ಮಂದಿರದಲ್ಲಿ 12.30 ಕ್ಕೆ ಸಮಾವೇಶವನ್ನು ಹಮ್ಮಿ ಕೊಳ್ಳಲಾಗಿದೆ ಈ ಸಮಾವೇಶಕ್ಕೆ ದಿವ್ಯ ಸಾನಿಧ್ಯವನ್ನು ಪ.ಪೂ ಶ್ರೀ.ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ. ಉರಿಲಿಂಗ ಪೆದ್ದಿಮಠ ಸಂಸ್ಥಾನ ಮೈಸೂರು. ಭಾಗವಹಿಸುವರು ಸಭೆ ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ಸತೀಶ ಜಾರಕಿಹೊಳಿ ಮಾನ್ಯ ಲೋಕೋಪಯೋಗಿ ಸಚಿವರು, ಕರ್ನಾಟಕ ಸರ್ಕಾರ. ಜ್ಯೋತಿ ಬೆಳಗಿಸುವವರು ಸನ್ಮಾನ್ಯ ಡಾ, ಎಂ.ಬಿ ಪಾಟೀಲ್ ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರ್ಕಾರ. ಮಾನ್ಯ ಶ್ರೀ ರಮೇಶ ಆಸಂಗಿ ರಾಜ್ಯ ಸಂಘಟನಾ ಸಂಚಾಲಕರು ಇವರಿಗೆ ಕರ್ನಾಟಕ ಸರ್ಕಾರದ 2011 ನೇ. ಸಾಲಿನ ಡಾ, ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪುರಸ್ಕುತರು ಮತ್ತು 2025 ನೇ. ಸಾಲಿನ ಡಾ, ಬಾಬು ಜಗಜೀವನರಾಮ ಪ್ರಶಸ್ತಿ ಪುರಸ್ಕೃತರು. ಇವರಿಗೆ ವಿಶೇಷ ಸನ್ಮಾನಿಸಲಾಗುವುದು.

ವಿಶೇಷ ಉಪನ್ಯಾಸಕರಾಗಿ ಶ್ರೀ ಡಾ, ಸುಜಾತಾ ಚಲವಾದಿ ಶಂಕರ ದೇವನೂರ ಆಧ್ಯಾತ್ಮ ಚಿಂತಕರು, ಮೈಸೂರು, ಹಾಗೂ ಸಹಾಯಕ ಪ್ರಾಧ್ಯಾಪಕರು ಎಸ್.ಕೆ.ಕಾಲೇಜು, ತಾಳಿಕೋಟಿ. ಉಪನ್ಯಾಸ ನೀಡುವರು ಮೆರವಣಿಗೆ ಉದ್ಘಾಟನೆಯನ್ನು ಪ್ರೊ. ರಾಜು ಆಲಗೂರ ಮಾಜಿ ಶಾಸಕರು, ನಾಗಠಾಣ. ಸಭೆಯ ಅಧ್ಯಕ್ಷತೆಯನ್ನು ಶ್ರೀ ಹೆಣ್ಣೂರು ಶ್ರೀನಿವಾಸ ರಾಜ್ಯ ಸಂಚಾಲಕರು, ಬೆಂಗಳೂರು ವಹಿಸಿ ಕೊಳ್ಳುವವರು ಮುಖ್ಯ ಆತಿಥಿಗಳಾಗಿ ಶ್ರೀ ಸಂಗಮೇಶ ಬಬಲೇಶ್ವರ ಅಧ್ಯಕ್ಷರು, ಶರಣಪ್ಪ ಸುಣಗಾರ ಮಾಜಿ ಶಾಸಕರು ಸಿಂದಗಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಧಾರವಾಡ, ಶ್ರೀ ಅಶೋಕ ಮನಗೂಳಿ ಮಾನ್ಯ ಶಾಸಕರು, ಸಿಂದಗಿ, ಶ್ರೀ ಪ್ರಭುಗೌಡ ಪಾಟೀಲ್ (ಲಿಂಗದಳ್ಳಿ) ಕೆ.ಪಿ.ಸಿ.ಸಿ. ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ವಿಜಯಪುರ. ಶ್ರೀ ಹಮೀದ್ ಮುಶ್ರಿಪ್ ಜಿಲ್ಲಾ ಕಾಂಗ್ರೇಸ್ ಮುಖಂಡರು ಶ್ರಿ ರಿಷಿ ಆನಂದ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿ.ಪಂ ವಿಜಯಪುರ ಶ್ರೀ ಲಕ್ಷ್ಮಣ ನಿಂಬರಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ವಿಜಯಪುರ. ಶ್ರೀ ಸೋಮಲಿಂಗ ಗೆಣ್ಣೂರ ಹೆಚ್ಚುವರಿ ಜಿಲ್ಲಾಧಿಕಾರಿಗಳು, ವಿಜಯಪುರ, ಶ್ರೀ ಮಹೇಶ ಪೊತ್ದಾರ್ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ವಿಜಯಪೂರ. ಪ್ರಾಸ್ಥಾವಿಕವಾಗಿ ಶ್ರೀ ವಿನಾಯಕ ಗುಣಸಾಗರ ಬೆಳಗಾವಿ ವಿಭಾಗ ಸಂಚಾಲಕರು, ಮಾತನಾಡುವವರು. ಸ್ವಾಗತವನ್ನು ಶ್ರೀ ಅಶೋಕ ಚಲವಾದಿ ಜಿಲ್ಲಾ ಸಂಚಾಲಕರು ವಿಜಯಪುರ ಮಾಡುವರು. ಆದುದರಿಂದ ನಾವೆಲ್ಲರೂ ಸುರಕ್ಷಿತವಾಗಿ ಒಗ್ಗಟ್ಟಿನಿಂದ ಬದುಕಲು ಸಂವಿಧಾನದ ಆಶಯಗಳನ್ನು ರಕ್ಷಿಸಬೇಕು. ಅದಕ್ಕಾಗಿ ಹೊಸ ಸವಾಲುಗಳನ್ನು ಎದುರಿಸಲು ಆಂದೋಲನವನ್ನು ಕಟ್ಟಿ ಬೆಳಸಬೇಕಾದ ಅಗತ್ಯ ತುರ್ತಾಗಿ ಆಗಬೇಕಾಗಿದೆ. ಈ ಹಿನ್ನಲೆಯಲ್ಲಿ ಅಂಬೇಡ್ಕರ ಮತ್ತು ಸಂವಿಧಾನ ಎಂಬ ಮಹತ್ವದ ವಿಷಯದ ಮೇಲೆ ಸಾಮಾಜಿಕ ಸಮಾನತೆಗಾಗಿ ಜನ ಆಂದೋಲನ ಸಮಾವೇಶವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಬಣ) ಜಿಲ್ಲಾ ಸಮಿತಿ, ವಿಜಯಪುರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಸುಮಾರು 5000 ಕ್ಕೂ ಹೆಚ್ಚು ಜನ ಸೇರುವರು. ಜನ್ನರಲ್ಲಿ ಜಾಗೃತಿ ಒಗ್ಗಟ್ಟು ಹೋರಾಟ ರೂಪಿಸಲು ಸಮಿತಿಯು ಮುಂದಾಗಿದೆ. ಪ್ರಗತಿಪರರು, ಸಕ್ರಿಯವಾಗಿ ಕಾರ್ಯಕರ್ತರು, ಅಂಬೇಡ್ಕರವಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸ ಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ವಿಜಯಪುರ ತಮ್ಮಲ್ಲಿ ಸಮಿತಿಯು ಮನವಿ ಮಾಡಿ ಕೊಳ್ಳುತ್ತದೆ. ಎಂದರು ಈ ಸಂದರ್ಭದಲ್ಲಿ ರೇಣುಕಾ ಮಾದರ ರಾಜ್ಯ ಮಹಿಳಾ ಸಂಚಾಲಕರು ಯಶೋದಾ ಮೇಲಿನಕೆರಿ ಮಹಿಳ ಜಿಲ್ಲಾ ಸಂಚಾಲಕರುಶರಣು ಸಿಂದೆ ಜಿಲ್ಲಾ ಸಂಘಟನಾ ಸಂಚಾಲಕರುಪ್ರಕಾಶ ಗುಡಿಮನಿ ಜಿಲ್ಲಾ ಸಂಘಟನಾ ಸಂಚಾಲಕರು ಲಕ್ಕಪ್ಪ ಬಡಿಗೇರ್ ಜಿಲ್ಲಾ ಸಂಘಟನಾ ಸಂಚಾಲಕರು ಪರಶುರಾಮ ದಿಂಡವಾರ ಜಿಲ್ಲಾ ಸಂಘಟನಾ ಸಂಚಾಲಕರು ಅನೀಲ ಕೊಡತೆ ಜಿಲ್ಲಾ ಸಂಘಟನಾ ಸಂಚಾಲಕರುಬಿ,ಎಸ್ ತಳವಾರ ಕಾರ್ಯಕಾರಿ ಸಮಿತಿ ಸದಸ್ಯರ (ಸುರೇಶ ನಡಗಡ್ಡಿ) ಜಿಲ್ಲಾ ವಿದ್ಯಾರ್ಥಿ ಒಕ್ಕೂಟ ಸಂಚಾಲಕರು ಸುಭದ್ರಾ ಮೇಲಿನಮನಿ ಮಹಿಳಾ ಜಿಲ್ಲಾ ಸಂಘಟನಾ ಸಂಚಾಲಕರು ಚಂದ್ರಕಲಾ ಮಸಳಿಕೇರಿ ಮಹಿಳಾ ಜಿಲ್ಲಾ ಸಂಘಟನಾ ಸಂಚಾಲಕರು ದೇವರ ಹಿಪ್ಪರಗಿ, ರವಿ ಮ್ಯಾಗೇರಿ, ತಾಲೂಕಾ ಸಂಚಾಲಕರು ಬ.ಬಾಗೇವಾಡಿ ರಾಜಕುಮಾರ ಸಿಂದಗೇರಿ,, ತಾಲೂಕಾ ಸಂಚಾಲಕರು ಮಂಜುನಾಥ ಏಂಟಮನ,, ತಾಲೂಕಾ ಸಂಚಾಲಕರು ಸಿಂದಗಿ, ಶಿವು ಮೂರಮನ,, ತಾಲೂಕಾ ಸಂಚಾಲಕರು ಇಂಡಿ, ಲಕ್ಷ್ಮಣ ಹಾಲಿಹಾಳ,, ತಾಲೂಕಾ ಸಂಚಾಲಕರು ನಿಡಗುಂದಿ, ಸಾಯಿನಾಥ ಬನಸೋಡೆ, ತಾಲೂಕಾ ಸಂಚಾಲಕರು ಚಡಚಣ, ರವೀಚಂದ್ರ ಚಲವಾದಿ,, ತಾಲೂಕಾ ಸಂಚಾಲಕರು ಕೋಲಾರ, ಬಸವರಾಜ ಹೊಸಮನಿ,, ತಾಲೂಕಾ ಸಂಚಾಲಕರು ಆಲಮೇಲ, ಸಿದ್ದು ಬಾರಿಗಿಡದ,, ತಾಲೂಕಾ ಸಂಚಾಲಕರು ತಾಳಿಕೋಟಿ ಲಕ್ಷ್ಮಿ ಕಾಂತ ಏಳಗಿ ಚಡಚಣ ಸಂಚಾಲಕರು ಬೀರಪ್ಪ ಕವಟಗಿ ಇಂಡಿ ದಯಾನಂದ ಕೋಟಿ ಮತ್ತಿತರರು ಉಪಸ್ಥಿತರಿದ್ದರು.

ವರದಿ:ಅಶೋಕ್.ಚಲವಾದಿ

ಮೊ, ನಂ 9972504615

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button