ಆ. 24 ರಂದು ಕುರುಬರ ಜನ ಜಾಗೃತಿ – ಹೋರಾಟ ಸಮಾವೇಶ.
ಮುದ್ದೇಬಿಹಾಳ ಆ.22

ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ದೊರೆಯಬೇಕು. ಬೇಡಿಕೆಗಳನ್ನು ಈಡೇರಿಸಬೇಕು. ಎಂದು ಆಗ್ರಹಿಸಿ ವಿಜಯಪುರ ಮತ್ತು ಬಾಗಲಕೋಟ. ಜಿಲ್ಲಾ ಕುರುಬ ಸಮುದಾಯದ ಜನ ಜಾಗೃತಿ ಸಮಾವೇಶ. ಆ. 24 ರಂದು ಭಾನುವಾರ ನಗರದ ಮದರಿ ಮಂಗಲ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟದ ಅಡಿಯಲ್ಲಿ ನಡೆಯಲಿರುವ ಈ ಜನ ಜಾಗೃತಿ ಸಮಾವೇಶದಲ್ಲಿ. ಬಹು ದಿನದ ನಿರೀಕ್ಷೆ ಇಟ್ಟು ಕೊಂಡಿರುವ ಎಸ್.ಟಿ ಸಮುದಾಯಕ್ಕೆ ಸೇರಿಸಿ ಮೀಸಲಾತಿ ನೀಡಬೇಕು. ಎಂಬ ಬೇಡಿಕೆಯ ಜೊತೆಗೆ ಪ್ರತಿಯೊಂದು ತಾಲೂಕಿನ ಕೇಂದ್ರ ಸ್ಥಳದಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ಕನಕ ಶ್ರೀ ಸಮುದಾಯ ಭವನ ನಿರ್ಮಾಣ ಪ್ರತಿ ತಾಲೂಕಿನಲ್ಲಿ ಕನಕ ಶ್ರೀ ಇಂಗ್ಲಿಷ್ ಮಾಧ್ಯಮ ಶಾಲೆ. ಹಾಗೂ ಪಿಯು ಕಾಲೇಜ್ ಆರಂಭಿಸ ಬೇಕು. ಮತ್ತು ಸಮುದಾಯದ ವಿದ್ಯಾರ್ಥಿಗಳಿಗೆ ಐ.ಎ.ಎಸ್ ಕೆ.ಎ.ಎಸ್ ಪರಿಕ್ಷೇಯ ತರಬೇತಿ ಜೊತೆಗೆ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತರಬೇತಿ ಕೇಂದ್ರ ಆರಂಭಿಸಬೇಕು. ಎಂಬ ಬೇಡಿಕೆಗಳೊಂದಿಗೆ ರಾಜ್ಯ ಮಟ್ಟದ ಕುರುಬ ಸಮಾಜದ ಮುಖಂಡರ ಸಮ್ಮುಖದಲ್ಲಿ ಜನ ಜಾಗೃತಿ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಸ್ವಾಮೀಜಿಗಳು ಸೇರಿದಂತೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ. ಎಚ್.ವಿಶ್ವನಾಥ್. ಬಂಡೆಪ್ಪ ಕಾಶಂಪುರ್. ಬಿ.ಟಿ.ಬಿ ನಾಗರಾಜ್. ಮುಕಡಪ್ಪ ಹಾಗೂ ಕೆ.ವಿರೂಪಾಕ್ಷಪ್ಪ. ಸಮ್ಮುಖದಲ್ಲಿ ಸಮಾವೇಶ ಆಯೋಜಿಸಿದ್ದಾರೆ. ಸ್ಥಳೀಯ ಮುಖಂಡರಾದ. ನಿವೃತ್ತ ಡಿವೈಎಸ್ಪಿ ಎಸ್.ಎಸ್ ಹುಲ್ಲೂರ್. ಕುರುಬರ ಸಂಘದ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ್ ಮದರಿ. ಸಂಗಯ್ಯ ಹಾಲ್ ಗಂಗಾಧರ್ ಮಠ. ಶಿವಾನಂದ್ ಮೇಟಿ ನ್ಯಾಯವಾದಿಗಳಾದ ಎಚ್.ವೈ ಪಾಟೀಲ್. ಪಿ.ಬಿ ಗೌಡರ್. ಬಿ.ವೈ ಮೇಟಿ. ನಾಗಪ್ಪ ರೂಡಗಿ. ಬಿ.ಬಿ ವಕ್ರಾಣಿ. ರವಿ ಜಗಲಿ. ಕೃಷ್ಣ ಬಿಳಿಬಾವಿ. ಸಿದ್ದು ವಾಲಿಕಾರ್. ಜುಮ್ಮಣ್ಣ ಹೂಗಾರ್. ಹಂಪಣ್ಣ ಮಠ. ಭಾಗವಹಿಸುತ್ತಾರೆ. ಎಂದು ಸಂಚಾಲಕ. ನ್ಯಾಯವಾದಿ.ಶ್ರೀ.ಪಿ.ಬಿ ಮಾತಿನ್ ತಿಳ್ಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ