ಹೆಬ್ಬಾಳು ಟೋಲ್ ಗೇಟ್ ಬಳಿ ಆಕಸ್ಮಿಕವಾಗಿ ಭೇಟಿಯಾದ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ಎಸ್.ವೈ ವಿಜಯೇಂದ್ರ ರವರು – ಕಂಚಿನ ಕಂಠದ ಸಿ.ಎಚ್ ಉಮೇಶ್ ನಾಯಕ್ ರವರಿಗೆ ಶುಭ ಹಾರೈಸಿದರು.
ಬೆಂಗಳೂರು ಜು.21

ಬಿಜೆಪಿ ಪಕ್ಷದ ಬಿ.ಎಸ್.ವೈ ವಿಜಯೇಂದ್ರ ರಾಜ್ಯಾಧ್ಯಕ್ಷರು ದಿನಾಂಕ 20.07.2025 ರಂದು ರಾತ್ರಿ 10 ಗಂಟೆಗೆ ಹೆಬ್ಬಾಳು ಟೋಲ್ ಗೇಟ್ ಬಳಿ ಆಕಸ್ಮಿಕವಾಗಿ ಭೇಟಿ ಯಾಗಿದ್ದರು. ಜಾನಪದ ಕಲೆಯಲ್ಲಿ ಸುಮಾರು 25 ವರ್ಷಗಳ ಕಾಲ ವೃತ್ತಿಪರ ಗಾಯಕರಾಗಿ ಮತ್ತು ಗ್ರಾಮೀಣ ಭಾಗದಲ್ಲಿ ವಿಶೇಷವಾಗಿ ಜಾನಪದ ಗೀತೆ. ನಾಡಗೀತೆ. ಪರಿಸರ ಗೀತೆ. ರಾಜ್ಯದಾದ್ಯಂತ ಕಾರ್ಯಕ್ರಮ ಮಾಡುತ್ತಿರುವ.

ಉಮೇಶ್ ನಾಯಕ್ ರವರ ಮತ್ತೆ ಸುಗ್ಗಿ ಕಾಲ ಬಂತು ಜಾನಪದ ಲೋಕದಲ್ಲಿ ಅಭಿನಂದನಾ ಗ್ರಂಥ 2024 ರಂದು ಬಿಡುಗಡೆ ಯಾಗಿದ್ದು ತುಂಬಾ ಸಂತೋಷಕರ ವಿಷಯ. ಸಂತ ಸೇವಾಲಾಲ್ ಜಯಂತೋತ್ಸವದಲ್ಲಿ ನಾಡಗೀತೆ ಅಂಬೇಡ್ಕರ್ ಗೀತೆ ಕ್ರಾಂತಿ ಗೀತೆ ಬಂಜಾರರ ಗೀತೆಗಳು ಜಾನಪದ ಕೋಗಿಲೆ ಎಂದೇ ಬಿರುದು ಪಡೆದಿರುವ ಉಮೇಶ್ ನಾಯಕ್ ಚಿನ್ನ ಸಮುದ್ರ ಇವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ವಿಜಯೇಂದ್ರ ಅಭಿಮಾನಿ ಬಳಗದವರಿಂದ ಫೋಟೋ ತೆಗೆಸಿದ ಕ್ಷಣವಾಗಿತೆಂದು ವರದಿಯಾಗಿದೆ.