ಕ್ಷಮೆಯ ಮೂರುತಿ ಶ್ರೀಮಾತೆ ಶಾರದಾದೇವಿ – ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅಭಿಪ್ರಾಯ.
ಚಳ್ಳಕೆರೆ ಜು.22

ಕ್ಷಮೆಯ ಮೂರುತಿ ಶ್ರೀಮಾತೆ ಶಾರದಾದೇವಿಯವರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ತಿಳಿಸಿದರು. ಶಿವ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಾರದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು “ಶ್ರೀಶಾರದಾದೇವೀ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ ಮಾತನಾಡಿದರು.

ಶ್ರೀಮಾತೆಯವರು ಇತರರ ದೋಷಗಳನ್ನು ಗುರುತಿಸದೆ ಅವರ ಸದ್ಗುರುಗಳನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಅವರ ಈ ಗುಣ ನಮ್ಮೆಲ್ಲರಿಗೂ ಮಾದರಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿಸ್ತುತಿ ಪಾರಾಯಣ ಮತ್ತು ಶ್ರೀಮತಿ ಭ್ರಮರಂಭಾ ಮಂಜುನಾಥ ಅವರಿಂದ ವಿಶೇಷ “ಬಸವ ಭಜನಾ” ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಅನಿತಾ ಯಾದವರೆಡ್ಡಿ, ತ್ರಿವೇಣಿ, ನಯನ, ಶಾಂತಮ್ಮ ಶಾಂತವೀರಪ್ಪ, ನಾಗರತ್ನಮ್ಮ, ವೀರಮ್ಮ ಬಸವರಾಜ, ಯತೀಶ್ ಎಂ ಸಿದ್ದಾಪುರ, ಕವಿತಾ ಗುರುಮೂರ್ತಿ, ವಿಜಯಲಕ್ಷ್ಮಿ, ಶೈಲಜ ಶ್ರೀನಿವಾಸ್, ರಶ್ಮಿ ವಸಂತ, ಸಂಗೀತ ವಸಂತಕುಮಾರ್, ಜಯಮ್ಮ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.