ಶ್ರೀ ಸರ್ದಾರ್ ಸೇವಾಲಾಲ್ ಮಹಾ ಸ್ವಾಮೀಗಳು ಬಂಜಾರ ಸುಧೀರ್ಘ 35 ವರ್ಷಗಳ ಕಂಠ ಸಿರಿಯಲ್ಲಿ ಮಿಂಚಿನ ಸಂಚಾರದಲ್ಲಿ ಸೇವೆ ಗೈದ – ಉಮೇಶ್ ನಾಯಕ್ ಗೆ ಸರ್ಕಾರದ ಸಹಕಾರ ನೀಡಲಿ ಎಂದು ಆಶೀರ್ವಚನ ನೀಡಿದರು.
ಚಿತ್ರದುರ್ಗ ಜು.23


ಪರಮ ಪೂಜ್ಯ ಶ್ರೀ ಶ್ರೀ ಸರ್ದಾರ್ ಸೇವಾಲಾಲ್ ಮಹಾ ಸ್ವಾಮಿಗಳು ಬಂಜಾರ ಗುರುಪೀಠ ಚಿತ್ರದುರ್ಗ ಜನಪದ ಕ್ಷೇತ್ರದಲ್ಲಿ ಸುಮಾರು ದಶಕಗಳಿಂದ ಬಂಜಾರ ಜನಾಂಗದಲ್ಲಿ ಜಾನಪದ ಗಾಯನ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಗೈದ ಹಾಗೂ ಬಂಜಾರರಲ್ಲಿ ಜಾಗೃತಿ ಗೀತೆ ಲಾವಣಿ ಪದ ಗೀಗಿ ಪದ ನಾಡಗೀತೆ ರೈತ ಗೀತೆ ಹೋರಾಟದ ಗೀತೆ ದಲಿತ ಪರ ಕ್ರಾಂತಿ ಗೀತೆ ಬಂಜಾರ ಗೀತೆ ಹಾಡಿ ರಾಜ್ಯದಲ್ಲಿಯೇ ವೃತ್ತಿ ಪರ ಗಾಯಕ ರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಇವರ ಸಿರಿ ಕಂಠದಲ್ಲಿ ಹಾಡುಗಳನ್ನು ಕೇಳುವುದೇ ತುಂಬಾ ಸಂತೋಷ ಅನಿಸುತ್ತದೆ.

ನಾಡಿನಾದ್ಯಂತ ತಮ್ಮ ಗಾಯನ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಇವರಿಗೆ ಮಠ ಮಾನ್ಯಗಳು ಸಂಘ ಸಂಸ್ಥೆ ಯವರು ಪತ್ರಿಕಾ ಮಾಧ್ಯಮದವರು ಹೋರಾಟಗಾರರು ಕನ್ನಡ ಪರ ಸಂಘಟನೆ ಅವರು ಹಸಿರು ಸೇನೆ ರೈತರ ಸಮಾವೇಶದಲ್ಲಿ ನಮ್ಮ ಸೇವಾಲಾಲ್ ಜಂತೋತ್ಸವದಲ್ಲಿ ಅತ್ಯುತ್ತಮವಾಗಿ ಹಾಡನ್ನು ಹಾಡುತ್ತಿದ್ದಾರೆ.

ಅವರ ಗಾಯನ ಸೇವೆಗೆ ಪ್ರೋತ್ಸಾಹ ನೀಡಿರುತ್ತಾರೆ ಹಾಗಾಗಿ ಅವರ ಸೇವೆ ಸಮಾಜಕ್ಕೆ ಮಾದರಿಯಾಗಲಿ ಸರ್ಕಾರಗಳು ಸಂಘ ಸಂಸ್ಥೆ ಯವರು ಹಾಗೂ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಹೋರಾಟಗಾರರು, ಪರಮ ಪೂಜ್ಯ ಶ್ರೀಗಳು ಅವರ ಸಾಧನೆಗೆ ಪ್ರೋತ್ಸಾಹ ನೀಡಬೇಕೆಂದು ಆಶೀರ್ವದಿಸುತ್ತೇವೆ. ಜೈ ಸೇವಾಲಾಲ್ ಜೈ ಮರಿಯಮ್ಮ ಜೈ ಅಂಬೇಡ್ಕರ್ ಎಂದು ವರದಿಯಾಗಿದೆ.