ರಸ್ತೆಗಳ ಸಮಸ್ಯೆ ಬಗೆಹರಿಸುವಂತೆ ವಿವಿಧ ಪ್ರಗತಿ ಪರ – ಸಂಘಟನೆಗಳಿಂದ “ಧರಣಿ ಸತ್ಯಾಗ್ರಹ”.

ಆಲಮೇಲ ಜು.23

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಆರಾಧ್ಯ ದೇವರಾದ “ಹಜರತ್ ಫೀರ್ ಗಾಲೀಬ ಸಾಹೇಬರ ದರ್ಗಾ” ದೇವರು ಸುತ್ತಮುತ್ತಲಿನ 48 ಹಳ್ಳಿಗಳಿಗೆ ಹೆಸರು ವಾಸಿಯಾಗಿದೆ. ಈ ದರ್ಗಾಕ್ಕೆ ಹೋಗಲು ತನ್ನದೆ ಆದ ರಸ್ತೆ ಇರುವುದಿಲ್ಲ. ಮತ್ತು ದಲಿತ ಸಮುದಾಯ ಬ್ರಾಹ್ಮಣ ಸಮುದಾಯ, ತಳವಾರ ಸಮುದಾಯ, ಕೃಷ್ಣ (ಗೊಲ್ಲರ) ಸಮುದಾಯ, ಭಜಂತ್ರಿ ಸಮುದಾಯ, ಮಾದಿಗ ಸಮುದಾಯಗಳ ಸ್ಮಶಾನ ಭೂಮಿಗೆ ಹೋಗಲು ರಸ್ತೆ ಇರುವುದಿಲ್ಲ. ಮತ್ತು ಬಸವನ ಗುಡಿ, ಗಣೇಶ ನಗರ, ಜನರಿಗೆ ಸಾರ್ವಜನಿಕ ರಸ್ತೆ ಇರುವುದಿಲ್ಲ. ಈ ವಿಷಯವಾಗಿ ಸಂಬಂಧಿಸಿದ ತಹಶೀಲ್ದಾರ್ ಇವರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ರೀತಿಯ ಪ್ರಯೋಜನ ಆಗಿರುವುದಿಲ್ಲ.

ಆದ್ದರಿಂದ ಹಳೆಯ ರುಕುಂಪೂರ ರಸ್ತೆಯ ಮೇಲೆ ಇರುವ ಅಂಗಡಿಗಳನ್ನು ತೆರವು ಗೊಳಿಸಿ ಈ ಎಲ್ಲಾ ಸ್ಥಳಗಳಿಗೆ ಸಾರ್ವಜನಿಕರು ಹೋಗಲು ಅವಕಾಶ ಮಾಡಿ ಕೊಡುವ ರೆಂದೂ ಈ ನಮ್ಮ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಧರಣಿ ನಿರತ ಸಂಘಟನಾಕಾರರು ಬಸ್ ನಿಲ್ದಾಣದ ಸಮೀಪವಿರುವ ಡಾ, ಬಿ.ಆರ್ ಅಂಬೇಡ್ಕರ ವೃತ್ತದ ಸಮೀಪ ಅನಿರ್ಧಿಷ್ಟಾವಧಿ ವರೆಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಧರಣಿ ನಿರತರಾದ ಪ್ರಭು ವಾಲಿಕಾರ. ಬಸವರಾಜ ತೆಲ್ಲೂರ. ಡಾ, ಸಂಜು ಯಂಟಮಾನ. ಸೋಮನಾಥ ಮೇಲಿನಮನಿ. ಶ್ರೀಶೈಲ ಮಠಪತಿ. ಅಪ್ಪು ಪಟ್ಟಣಶೆಟ್ಟಿ. ರವಿ ವಾರದ. ದೇವಪ್ಪ ಗುಣಾರಿ. ಶ್ರೀಶೈಲ ಅಗಸರ. ಶಿವಕುಮಾರ ಮೇಲಿನಮನಿ. ಶಶಿಧರ ನಾಯ್ಕೋಡಿ. ಸಲೀಮ್ ತಾಂಬೋಳಿ. ಇತರರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button