ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರಧಾನಕ್ಕೆ – ಡಾ, ಪ್ರಸನ್ನ ನಾಡಿಗರ್ ಭಾಜನ.
ಬೆಂಗಳೂರು ಜು.23

ಚೇತನ ಪ್ರತಿಷ್ಠಾನ ಧಾರವಾಡ, ರಾಷ್ಟ್ರೀಯ ಶಿಕ್ಷಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ಜೆ.ಎಸ್.ಎಸ್ ಕ್ಯಾಂಪಸ್ಸಿನ ವಚನ ಮಂಟಪ ಸಭಾಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಡಾ, ಪ್ರಸನ್ನ ನಾಡಿಗೇರ ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು .ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುವುದರ ಜೊತೆಗೆ ಕಲೆ ಸಾಹಿತ್ಯ ಸಂಘಟನೆ ನಿಟ್ಟಿನಲ್ಲಿ ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ಡಾ, ಶಿವಣ್ಣ ಜಿ, ಚೇತನ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು ಡಾ, ಚಂದ್ರಶೇಖರ ಮಾಡಲಗೇರಿ, ಸಾಹಿತಿ ತೆರಿಗೆ ಅಧಿಕಾರಿ ಸುರೇಶ್ ಕೋರೆಕೊಪ್ಪ, ಕಿರುತೆರೆ ನಟಿ ನಿರೂಪಕಿ ಶ್ರೀದೇವಿ ಗೌಡ, ಸಂಗಮನಾಥಪಿ ಸಜ್ಜನ, ಭಾಗ್ಯಶ್ರೀ ರಜಪೂತ, ಸಂಗೀತ ಮಠಪತಿ, ಕೆ.ಎಸ್ ವೀರೇಶ್, ಸೇರಿದಂತೆ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು, ಪ್ರಶಸ್ತಿ ಪ್ರಧಾನ ಕಾರ್ಯ ಕ್ರಮ ಜರುಗಿತು. ಡಾ, ಪ್ರಸನ್ನ ನಾಡಿಗೇರ್ ರವರು ಅಭಿಮಾನಿಗಳು ಹಿತೈಷಿಗಳು ಸೇರಿದಂತೆ ಅನೇಕರು ಅಭಿನಂದನೆಗಳು ಸಲ್ಲಿಸಿದ್ದಾರೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ