ಕ್ರೀಡಾ ಚಟುವಟಿಕೆಗಳು ಆರೋಗ್ಯಕ್ಕೆ ಒಳ್ಳೆಯದು — ಬಿ. ಡಿ.ಪಾಟೀಲ.
ಇಂಡಿ ಜೂನ್.21

ಇಂಡಿ ಗೋರನಾಳ ಗ್ರಾಮದ ಯುವಕರು, ಗೋರನಾಳ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಂಡಿದ್ದು.ಪಂದ್ಯಾವಳಿ ಉದ್ಘಾಟನೆ ನೆರವೇರಿಸಿ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಮಾತನಾಡುತ್ತಾ, ಹಿಂತಾ ಕ್ರೀಡಾ ಚಟುವಟಿಕೆಗಳು ಆರೋಗ್ಯಕ್ಕೆ ಒಳ್ಳೆಯದು, ಪಂದ್ಯಾವಳಿಯಲ್ಲಿ ಸೋಲು ಗೆಲುವು ಸಾಮಾನ್ಯ ಆದರೆ ಕ್ರೀಡಾ ಮನೋಭಾವ ದಿಂದ ಸೋಲು ಗೆಲುವು ಸ್ವೀಕರಿಸಿ ಸಾಮರಸ್ಯದಿಂದ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಂಡಿದ್ದು ಸ್ವಾಗತಾರ್ಹ.ಪ್ರತಿಯೂಬ್ಬರು ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿ ಇರಬೇಕು.ಎಂದು ಯುವಕರಿಗೆ ಸಂದೇಶ ನೀಡಿದರು..ವೇದಿಕೆ ಮೇಲೆ ಗ್ರಾಂ ಪಂಚಾಯತ ಅಧ್ಯಕ್ಷರಾದ ಅಶೋಕ ಜಿಡ್ಡಿಮನಿ, ಮುಖಂಡರಾದ ಬಿ ಕೆ ಹಟ್ಟಿ,ಪಿ ಕೆ ಅಲಬಗೋಂಡ, ಯಲ್ಲಪ್ಪ ಪೂಜಾರಿ, ಶರಣು ಗಂಗನಹಳ್ಳಿ,ಚಿದಾನಂದ ಗಂಗನಹಳ್ಳಿ,ಚಂದಪ್ಪ ಸಾಗನೂರ,ಡಿ ಕೆ ಪೂಜಾರಿ, ಕೆಂಚಪ್ಪ ಹಿರೇಕುರಬರ, ಅಣ್ಣಾರಾಯ ನಾಮದಾರ, ಮಾಳಪ್ಪ ಹಂಜಗಿ ಮುಂತಾದ ನಾಯಕರು ಉಪಸ್ಥಿತರಿದ್ದರು