ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ 56 ನೇ. ಸಂಸ್ಥಾಪನಾ ದಿನಾಚರಣೆ – ಆರ್.ಟಿ.ಪಿ.ಎಸ್/ವಾಯ್.ಟಿ.ಪಿ.ಎಸ್ ಇವರ ಸಹಯೋಗದಲ್ಲಿ ಆಚರಿಸಲಾಯಿತು.
ರಾಯಚೂರು ಜು.23

ಡಾ, ಬಿ.ಆರ್ ಅಂಬೇಡ್ಕರ್ ಭವನ ಶಕ್ತಿನಗರದಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ 56 ನೇ. ಸಂಸ್ಥಾಪನಾ ದಿನಾಚರಣೆಯನ್ನು RTPS/YTPS ಇವರ ಸಹಯೋಗದಲ್ಲಿ ಆಚರಿಸಲಾಯಿತು. ಅಧ್ಯಕ್ಷತೆಯನ್ನು RTPS ಯೋಜನಾ ಪ್ರದೇಶದ ಕಾರ್ಯ ನಿರ್ವಾಹಕ ನಿರ್ದೇಶಕರಾದ ಶ್ರೀ ಜಯಪ್ರಕಾಶ್ ಎಂ.ಆರ್ ಇವರು, ಗೌರವಧ್ಯಕ್ಷತೆಯನ್ನು YTPS ಯೋಜನಾ ಪ್ರದೇಶದ ಶ್ರೀ ಗಂಗಾಧರ ಎಂ.ಆರ್ ಇವರು ವಹಿಸಿದ್ದರು.ವಿಶೇಷ ಆಹ್ವಾನಿತರಾದ ಶ್ರೀ ಜಿ.ಸಿ ಮಹೇಂದ್ರ, ನಿವೃತ್ತ ಕಾರ್ಯನಿರ್ವಾಹ ನಿರ್ದೇಶಕರು, ಕ.ವಿ.ನಿ.ನಿ ಇವರು ನಿಗಮದ ಆಗು ಹೋಗುಗಳ ಮತ್ತು ಕರ್ತವ್ಯಗಳನ್ನು ನಿರ್ವಹಿಸಿದ ಬಗ್ಗೆ ಹಾಗೂ ಶಿವಪ್ಪ, ನಿವೃತ್ತ ಸೀ.ಮೆರಿಟ್ ಗ್ರೇಡ್ ಮಷಿನಿಷ್ಟ್, ಇವರು ತಮ್ಮ ಸೇವಾ ಅವಧಿಯಲ್ಲಿ ಮಾಡಿದ ಕರ್ತವ್ಯ ಹಾಗೂ ಸಂಘದ ಚಟುವಟಿಗಳ ಕುರಿತು ಮಾತನಾಡಿದರು. ಪ್ರಾಸ್ತಾವಿಕ ಭಾಷಣದಲ್ಲಿ ಕೃಷ್ಣರಾಜ್ ಕೆ.ಕೆ CE (O&M) RTPS, ರವರು RTPS & YTPS ಯೋಜನೆಗಳಲ್ಲಿ ವಿದ್ಯುತ್ ಉತ್ಪಾದನೆ ಬಗ್ಗೆ ತಿಳಿಸಿದರು. ನಿಗಮದಲ್ಲಿ 25 ವರ್ಷಗಳ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ಹಾಗೂ 25 ವರ್ಷ ಪೂರ್ಣ ಗೊಳಿಸದೇ ವಯೋ ನಿವೃತ್ತಿ ಹೊಂದಿದ ಉದ್ಯೋಗಿಗಳಿಗೆ ಕೈ ಗಡಿಯಾರ ಮತ್ತು ಪ್ರಶಂಸೆನೀಯ ಪತ್ರವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾದ ಶ್ರೀ ವಿ.ಎಸ್ ಏಕ್ ಬೋಟೆ, ಸಿಇ (ಓ&ಎಂ) ಶ್ರೀ ಗಂಗಾಧರಯ್ಯ ಕೆ.ಆರ್, ಸಿ.ಇ (ಐ) ಶ್ರೀ ಶಂಕರ್ ನಾಯಕ ಎಸ್, ಸಿ.ಇ (ಎಫ್ ಎಂ) ಶ್ರೀ ಅಜಯ್ ಟಿ.ಪಿ ಸಿ.ಇ (ಸಿವಿಲ್) ಶ್ರೀ ನಿಜೇಂದ್ರ.ಬಿ. ಜಿ.ಎಂ (ಎಫ್) ಶ್ರೀ ಅಮರೇಶ ಡಿ.ಜಿ.ಎಂ (ಹೆಚ್.ಆರ್.ಡಿ) ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು, ಹಾಗೂ ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು ಎಂದು ವರದಿಯಾಗಿದೆ.