ಸ್ವಾಮಿ ರಾಮಕೃಷ್ಣಾನಂದರ ಗುರು ಭಕ್ತಿ ಸ್ಮರಣೀಯ – ಶ್ರೀಶಾರದಾಶ್ರಮದ ಸದ್ಭಕ್ತೆ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅಭಿಮತ.
ಚಳ್ಳಕೆರೆ ಜು.24

ಶ್ರೀರಾಮಕೃಷ್ಣ ಪರಮಹಂಸರ ಮೇಲೆ ಸ್ವಾಮಿ ರಾಮಕೃಷ್ಣಾನಂದರು ಹೊಂದಿದ್ದ ಗುರು ಭಕ್ತಿ ಸ್ಮರಣೀಯವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ತಿಳಿಸಿದರು. ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ “ಸ್ವಾಮಿ ರಾಮಕೃಷ್ಣಾನಂದರ ಜಯಂತ್ಯುತ್ಸವ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಅವರ ಗುರು ಭಕ್ತಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಶ್ರೀರಾಮಕೃಷ್ಣ ಪರಮ ಹಂಸರ ಹದಿನಾರು ಮಂದಿ ನೇರಸಂನ್ಯಾಸಿ ಶಿಷ್ಯರಲ್ಲಿ ಒಬ್ಬರಾದ ಸ್ವಾಮಿ ರಾಮಕೃಷ್ಣಾನಂದರು ತಮ್ಮ ಗುರು ಭಕ್ತಿಯಿಂದ ಖ್ಯಾತರಾದವರು. ಶ್ರೀರಾಮಕೃಷ್ಣ ಪೂಜಾ ಪದ್ಧತಿಗೆ ವ್ಯವಸ್ಥಿತ ಅಡಿಪಾಯ ಹಾಕಿದ ಅವರು ಸ್ವಾಮಿ ವಿವೇಕಾನಂದರ ಆದೇಶದಂತೆ ದಕ್ಷಿಣ ಭಾರತದ ಮದ್ರಾಸ್ ಗೆ ಬಂದು ಅಲ್ಲಿ ಶ್ರೀರಾಮಕೃಷ್ಣ ಮಠವನ್ನು ಕಟ್ಟಿ ಬೆಳೆಸಿದರು. ಆದ್ದರಿಂದ ದಕ್ಷಿಣ ಭಾರತದ ಶ್ರೀರಾಮಕೃಷ್ಣ ಪರಂಪರೆಗೆ ಅವರ ಕೊಡುಗೆ ಅಪಾರ ಎಂದರು. ಈ ಜಯಂತ್ಯೋತ್ಸವದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿ ಸ್ತುತಿ ಪಠಣ, ವಿಶೇಷ ಭಜನೆ ಹಾಗೂ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು.

ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಮೀನಾಕ್ಷಿ,ಉಷಾ ಶ್ರೀನಿವಾಸ್ , ಶಾಂತಮ್ಮ ಶಾಂತವೀರಪ್ಪ, ಕವಿತಾ ಗುರುಮೂರ್ತಿ, ಸಂಗೀತ ವಸಂತಕುಮಾರ್, ಶೈಲಜ ಶ್ರೀನಿವಾಸ್ ಕೃಷ್ಣವೇಣಿ ವೆಂಕಟೇಶ್, ಸೌಮ್ಯ ಪ್ರಸಾದ್, ಯತೀಶ್ ಎಂ ಸಿದ್ದಾಪುರ, ವಿಜಯಲಕ್ಷ್ಮಿ, ವೀರಮ್ಮ, ಜಯಶೀಲಮ್ಮ, ಜಯಮ್ಮ, ಭ್ರಮರಂಭಾ ಮಂಜುನಾಥ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ನಾಗರತ್ನಮ್ಮ, ಶಾರದಾಮ್ಮ ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.