ಈಗಿನ ಯುವಕರು ಕೆಲಸಕ್ಕಾಗಿ ಹಳ್ಳಿಯಲ್ಲಿ ಇರುವ ಜಮೀನು ಬಿಟ್ಟು – ಕಂಪನಿಗಳತ್ತ ಮುಖ ಮಾಡುತ್ತಿದ್ದಾರೆ.
ರೂಡಗಿ ಜು.24

ಮುದ್ದೇಬಿಹಾಳ ತಾಲ್ಲೂಕಿನ ರೂಡಗಿ ಗ್ರಾಮದ ರೈತ ಸಹೋದರರಿಬ್ಬರು ಐಟಿಐ ಮತ್ತು ಪದವಿ ಶಿಕ್ಷಣ ಮುಗಿಸಿದರು ಕೂಡಾ ಎಲ್ಲಿ ಕೆಲಸಕ್ಕೆ ಹೋಗದೆ. ತಮ್ಮ ಹತ್ತು ಎಕರೆ ಜಮೀನಿನಲ್ಲಿ ಎರಡೂವರಿ ಎಕರೆ ಜಮೀನು ಕಾಲುವೆಗೆ ಹೋಗಿದೆ. ಇನ್ನುಳಿದ ಏಳುವರಿ ಎಕರೆ ಜಮೀನಿನಲ್ಲಿ ಕಲ್ಲು ಭೂಮಿ ಪ್ರದೇಶವಾದ ಒಂದು ಎಕರೆ ಹತ್ತು ಗುಂಟೆಯಲ್ಲಿ ಕಳೆದ ಮೂರು ವರ್ಷದ ಹಿಂದೆ ಸಾಂಗ್ಲಿ ಜಿಲ್ಲಾ ಸಾಂಗೋಲಿಯಲ್ಲಿ ತಮ್ಮ ಸಂಬಂಧಿಕರ ಪರಿಚಯ ದಿಂದ ಕೆಸರಿ ತಳಿಯ 420 ದಾಳಿಂಬೆ ಸಸಿಯನ್ನು ತಂದು ಸಾಲಿಂದ ಸಾಲಿಗೆ 10 ಅಡಿ ಮತ್ತು ಗಿಡ ದಿಂದ ಗಿಡಕ್ಕೆ 6 ಅಡಿ ಅಂತರದಲ್ಲಿ ನಾಟಿ ಮಾಡಿದ್ದಾರೆ. ಮೊದಲು ಒಂದು ವರ್ಷ ಸಸಿ ಚೆನ್ನಾಗಿ ಬಂದಿದ್ದರು ಕೂಡಾ ಕಾಯಿ ಬಿಡದೆ ಗಿಡ ಬಲಿಷ್ಠ ಮಾಡಲು ಕಾಯಿ ಕೀಳಿದ್ದಾರಂತೆ. ಎರಡನೇ ವರ್ಷದ ಮೊದಲ ಬೆಳೆ ಉತ್ತಮವಾಗಿ 3 ಟನ್ 7 ಕ್ವೀಂಟಲ್ ಬೆಳೆ ಪಡೆದು ಒಳ್ಳೆಯ ಲಾಭ ಬಂದಿದೆ ಎನ್ನತ್ತಿದ್ದಾರೆ ದಾಳಿಂಬೆ ಬೆಳೆದ ಸಹೋದರರು. ಕಳೆದ ಎರಡು ವರ್ಷಕ್ಕಿಂತ ಈ ವರ್ಷ ಉತ್ತಮ ಕಾಯಿ ಬಂದಿವೆ. ಇಳುವರಿ ಕೂಡಾ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ಕಳೆದ ವರ್ಷಕ್ಕಿಂತ ಈ ವರ್ಷದ ಫಸಲಿನ ಬೆಳೆಗೆ ರೇಟ್ ಕೂಡಾ ಹೆಚ್ಚಾಗುವ ನಂಬಿಕೆ ಇದೆ ಎಂದು ಯುವ ರೈತರಾದ ಮುಕುಂದ ಈಳಗೇರ ಹೇಳಿದರು. ಕಳೆದ ವರ್ಷ ಬೇಸಿಗೆಯಲ್ಲಿ ನೀರಿನ ತೊಂದರೆಯಿಂದ ಟ್ಯಾಂಕರ್ ಮೂಲಕ ನೀರು ಹಾಕಿ ನಮ್ಮ ಮಕ್ಕಳಂತೆ ಜೋಪಾನ ಮಾಡಿದ್ದೆವೆ. ಅದಕ್ಕಾಗಿ ಇವಾಗ ನಮಗೆ ಒಳ್ಳೆಯ ಫಸಲು ಬರುತ್ತಿದೆ ಎನ್ನುತ್ತಿದ್ದಾರೆ ರೈತ ಸಹೋದರರು.

ಬೆಳೆಗೆ ನಿರ್ವಹಣೆ:-
ಕಳೆದ ವರ್ಷ ಸರಕಾರಿ ಗೊಬ್ಬರ ಹಾಕಿದರು ನಮಗೆ ಒಳ್ಳೆಯ ಫಸಲು ತೆಗೆಯಲು ಸಾಧ್ಯವಾಗಿದ್ದಿಲ್ಲ. ಆದರೆ ಈ ವರ್ಷ ಸರಕಾರಿ ಗೊಬ್ಬರ ಬಿಟ್ಟು ದನದ ಗೊಬ್ಬರ ಮತ್ತು ಕುರಿಯ ಗೊಬ್ಬರ ಹಾಕಿದ್ದೆವೆ. ನಮಗೆ ಕಳೆದ ವರ್ಷಕ್ಕಿಂತ ಈ ವರ್ಷ ಬೆಳೆ ತುಂಬಾ ಚೆನ್ನಾಗಿ ಬಂದಿದೆ. ಬೆಳೆಯ ನಿರ್ವಹಣೆಗಾಗಿ ಕಳೆದ ವರ್ಷ 80ಸಾವಿರ ರೂಪಾಯಿ ಹಾಕಿದ್ದೆವೆ. ಈ ವರ್ಷ ಸರಕಾರಿ ಗೊಬ್ಬರ ಕೈ ಬಿಟ್ಟು ಸಾವಯುವ ಗೊಬ್ಬರವನ್ನು ಬಳಸಿದ್ದೆವೆ. ಅದಕ್ಕಾಗಿ ಕಳೆದ ವರ್ಷಕ್ಕಿಂತ ಈ ವರ್ಷ ನಿರ್ವಹಣೆಯ ಖರ್ಚುಕೂಡಾ ಕಡಿಮೆ ಬಂದಿದೆ(60000) ಎಂದಿದ್ದಾರೆ. ನಮ್ಮ ಇನ್ನುಳಿದ 6 ಎಕರೆ ಜಮೀನಿನಲ್ಲಿ ಎಷ್ಟು ಆದಾಯ ಬರತ್ತೆ ಅದಕ್ಕಿಂತ ಹೆಚ್ಚಿನ ಆದಾಯ ನಮಗೆ ಇದು ಒಂದು ಎಕರೆ ಯಲ್ಲಿ ಲಾಭ ಬರುತ್ತದೆ ಎಂದು ಹೇಳಿದರು.

ದಾಳಿಂಬೆ ಬೆಳೆಗೆ ತಗಲುವ ರೋಗ:-
ನಮಗೆ ದಾಳಿಂಬೆ ಕೃಷಿಗೆ ಯಾವುದೇ ರೋಗಿನ ಭಯವಿಲ್ಲ. ಈ ಬೆಳೆಗೆ ಮುಖ್ಯವಾಗಿ ಬರುವ ರೋಗ ಎರಡೆ. ಒಂದು ಕ್ಯಾರ್ ರೋಗ ಮತ್ತು ಮರ್ ರೋಗ ಎಂದು ಎರಡೆ ರೋಗ ಅಟ್ಯಾಕ್ ಆಗುತ್ತದೆ. ಕ್ಯಾರ್ ರೋಗ ಇದು ಕಾಯಿಗಳ ಮೇಲೆ ಬರುತ್ತದೆ. ಮತ್ತು ಇನ್ನೊಂದು ಮರ್ ರೋಗ್ ಇದು ದಿನದಿಂದ ದಿನಕ್ಕೆ ಗಿಡವೇ ಸಂಪೂರ್ಣ ಒಣಗಿ ಹೋಗುತ್ತದೆ.ಕ್ಯಾರ್ ರೋಗ್ ದ ಬಗ್ಗೆ ನಮಗೆ ಭಯ ಇಲ್ಲ. ಇದನ್ನು ಕಂಟ್ರೋಲ್ ಮಾಡುತ್ತೆವೆ.ಆದರೆ ಮರ್ ರೋಗಕ್ಕೆ ನಮಗೆ ಇನ್ನೂ ಔಷಧಿ ಸಿಕ್ಕಿಲ್ಲ. ವರ್ಷಕ್ಕೆ ಒಂದೆರಡು ಗಿಡ ನಾಶ ಆಗತಾವು ಮರ್ ರೋಗಕ್ಕೆ ನಮಗೆ ಇನ್ನೂ ಔಷಧಿ ಸಿಕ್ಕಿಲ್ಲ ಎಂದು ಮಾಹಿತಿ ನೀಡಿದರು.
ಮಾರುಕಟ್ಟೆ:-
ನಮ್ಮ ಲೋಕಲ್ ಮಾರ್ಕೆಟ್ ಗಿಂತ್ತ ಮಹಾರಾಷ್ಟ್ರ ರಾಜ್ಯದ ಜತ್ತ ತಾಲೂಕಿನಲ್ಲಿ ಪರಿಚಯದ ವ್ಯಾಪಾರಸ್ಥರು ಇದ್ದಾರೆ. ಅವರೆ ಇಲ್ಲಿ ಬಂದು ಇಲ್ಲಿಯ ಮಾರ್ಕೆಟ್ ಬೆಲೆಗಿಂತ ಕೆಜಿಗೆ ಹತ್ತಿಪ್ಪತ್ತು ರೂಪಾಯಿ ಹೆಚ್ಚು ಕೊಟ್ಟು ತಗೊಂಡು ಹೋಗುತ್ತಾರೆ ಎಂದು ಸಹೋದರರಾದ ಮುಕುಂದ ಈಳಗೇರ, ಶಿವನಂದ ಈಳಗೇರ ಅವರು ತಿಳಿಸಿದರು. ಇವರು ಐಟಿಐ ಕಲಿತರು ಕೂಡಾ ಎಲ್ಲಿ ಕೆಲಸಕ್ಕೆ ಹೋಗದೆ ತಮ್ಮ ಜಮೀನಿನಲ್ಲಿ ಕೃಷಿ ಮಾಡುತ್ತಾ. ರಾಶಿ ಮಷಿನ್ ಕೂಡಾ ನಡೆಸುತ್ತಾರೆ.
ವರದಿ:ಜಿ.ಎನ್ ಬೀರಗೊಂಡ (ಮುತ್ತು) ಢವಳಗಿ