ಆತ್ಮ ವಿಕಾಶಕ್ಕೆ ಶ್ರೀಮದ್ ಭಗವದ್ಗೀತೆ ಮತ್ತು ಸಹಸ್ರನಾಮದ ಪಾರಾಯಣ ಅವಶ್ಯಕ – ಸ್ವಾಮಿ ನಾರಾಯಣಾನಂದಜೀ ಅಭಿಪ್ರಾಯ.
ಚಳ್ಳಕೆರೆ ಡಿ.18

ಶಂಕರಾಚಾರ್ಯರು ತಿಳಿಸಿದಂತೆ ನಮ್ಮ ಆತ್ಮವಿಕಾಸಕ್ಕೆ ಶ್ರೀಮದ್ ಭಗವದ್ಗೀತೆ,ಶ್ರೀಲಲಿತಾ ಸಹಸ್ರನಾಮ ಮತ್ತು ಶ್ರೀವಿಷ್ಣು ಸಹಸ್ರನಾಮವನ್ನು ನಿತ್ಯ ಪಾರಾಯಣ ಮಾಡುವುದು ಅವಶ್ಯಕ ಎಂದು ದೊಡ್ಡಮುದವಾಡಿಯ ಸ್ವಾಮಿ ನಾರಾಯಣಾನಂದಜೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀಲಲಿತಾ ಸಹಸ್ರನಾಮ ಮತ್ತು ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಪಾರಾಯಣ ನಡೆಸಿಕೊಟ್ಟ ಅವರು “ಪ್ರಾರ್ಥನೆ ಹೇಗಿರಬೇಕು?” ಎಂಬ ವಿಷಯವಾಗಿ ಪ್ರವಚನ ನೀಡಿದರು.

ಭಗವಂತನಲ್ಲಿ ಲೌಕಿಕ ಆಸೆ-ಆಕಾಂಕ್ಷೆಗಳಿಗಾಗಿ ಬೇಡದೆ ಭಕ್ತಿ-ಜ್ಞಾನ-ವಿವೇಕ ವೈರಾಗ್ಯಗಳಿಗಾಗಿ ಪ್ರಾರ್ಥಿಸಬೇಕು. ತೊಂದರೆಗಳನ್ನು- ಕಷ್ಟಗಳನ್ನು ಪ್ರೀತಿಯಿಂದ ಸ್ವಾಗತಿಸಿ ಸಂತೋಷದಿಂದ ಅವುಗಳನ್ನು ದೇವರ ವರಪ್ರಸಾದ ಎಂದು ಭಾವಿಸಿ ಎದುರಿಸಬೇಕು ಎಂದು ಹೇಳಿದರು.
ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ ಮತ್ತು ಪೂಜ್ಯ ಮಾತಾಜೀ ತ್ಯಾಗಮಯೀ ಅವರಿಂದ ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು.
ಕಾರ್ಯಕ್ರಮದ ಸ್ವಾಗತ-ಪರಿಚಯವನ್ನು ಕುಮಾರಿ ಪುಷ್ಪಲತಾ ಮಾಡಿದರೆ ಯತೀಶ್ ಎಂ ಸಿದ್ದಾಪುರ ವಂದನಾರ್ಪಣೆ ನಡೆಸಿ ಕೊಟ್ಟರು.
ಸತ್ಸಂಗ ಕಾರ್ಯಕ್ರಮದಲ್ಲಿ ಡಾ, ಬಸವರಾಜಪ್ಪ, ಎಂ.ಗೀತಾ ನಾಗರಾಜ್, ಗೀತಾ ವೆಂಕಟೇಶರೆಡ್ಡಿ, ಲತಾ, ಲಕ್ಷ್ಮೀ, ವಾಸವಿ, ವೆಂಕಟಲಕ್ಷ್ಮೀ, ಜಿ.ಯಶೋಧಾ ಪ್ರಕಾಶ್, ಋತಿಕ್, ಸಂಜನಾ, ವಿನುತಾ, ಉಷಾ ಶ್ರೀನಿವಾಸ್, ವಿಜಯಲಕ್ಷ್ಮೀ, ರಶ್ಮಿ ವಸಂತ, ಪಂಕಜ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಸುಜಾತಾ ಬಸವರಾಜ್, ಚೇತನ್, ಆರ್.ಗೋವಿಂದ ಶೆಟ್ಟಿ ಸೇರಿದಂತೆ ಬಾಪೂಜಿ ಆಯುರ್ವೇದ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳು ಮತ್ತು ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

