ಜಿ.ಹರೀಶ್ ಹೆಚ್ಚುವರಿ ಎಸ್ಪಿ, ರಾಯಚೂರು ಎಸ್ಪಿ/ಎಸ್ಟಿ ಕಾಯ್ದೆಯಲ್ಲಿ ಆರೋಪಿ 2 ಆಗಿದ್ದು, ಪ್ರಕರಣದಲ್ಲಿ ತಿರುಚಿದ್ದರಿಂದ – ಕ.ದ.ರ.ವೇ ಯಿಂದ ತತಕ್ಷಣ ವರ್ಗಾವಣೆಗೆ ಆಗ್ರಹ.

ಬಳ್ಳಾರಿ ಜು.25

ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ಈಗ ತಮ್ಮ ಗಮನಕ್ಕೆ ತಂದು ಮನವಿ ಮಾಡಿ ಕೊಳ್ಳುವುದು ಏನೆಂದರೆ ಹಾಗು ಉಲ್ಲೇಖಕ್ಕೆ ಸಂಬಂಧಿಸಿದಂತೆ ರಾಯಚೂರು ನಗರದ ಮಾರ್ಕೆಟ್ ಯಾರ್ಡ್ ಪೋಲಿಸ್ ಠಾಣೆಯಲ್ಲಿ ಡಾ, ಕವಿತ ಪಾಟೀಲ್ ಹಾಗೂ ಇತರರ ವಿರುದ್ಧ ಸೆಕ್ಷನ್ 167,177,182,34 ಐ.ಪಿ.ಸಿ ಹಾಗೂ 3.1.ಕ್ಯೂ, 3.1. ಜಡ್. ಎ. (ಇ) ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಗುನ್ನಾ ನಂಬರ್ 39/2017 ದಾಖಲಾಗಿದ್ದು, ಸದರಿ ಪ್ರಕರಣದಲ್ಲಿ ಜಿ.ಹರೀಶ್ ಡಿ.ವೈ.ಎಸ್.ಪಿ ಅವರನ್ನು ತನಿಖಾಧಿಕಾರಿಯಾನ್ನಾಗಿ ನೇಮಿಸಲಾಗಿತ್ತು. ಆದರೆ ಜಿ.ಹರೀಶ್ ಬಾಬು ಡಿವೈಎಸ್ಪಿ ತನಿಖಾಧಿಕಾರಿಗಳು ಸರಿಯಾದ ತನಿಖೆಯನ್ನು ಮಾಡಲಾರದೆ ತನಿಖೆಯಲ್ಲಿ ನಿಜ ಸ್ಥಿತಿಯ ವರದಿಯನ್ನು ಮಾಡಲಾರದೆ ಅದನ್ನು ಬಿಟ್ಟು ಆರೋಪಿಗಳ ಪರವಾಗಿ ತನಿಖೆಯನ್ನು ಬಿ.ಡಿ ಜೈನ್ ಸಹಾಯಕ ಕಾರ್ಯದರ್ಶಿ ಎಮ್ ಸಿ.ಐ ಇವರ ಜೊತೆ ಸಂಪೂರ್ಣವಾಗಿ ಶ್ಯಾಮೀಲಾಗಿದ್ದರಿಂದ ಬಾದಿತದಾರರಾದ ದಲಿತ ಸರ್ಕಾರಿ ನೌಕರಿಯಲ್ಲಿ ನಿಷ್ಠೆಯಿಂದ ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸುತ್ತಿದ್ದಂತ ಡಾ, ಬಿ.ರಮೇಶ್ ಬಾಬು ಇವರಿಗೆ ತೊಂದರೆ ಕೊಡಬೇಕು ಅನ್ನುವ ಮನಸ್ಥಿತಿ ಮಾಡಿ ಕೊಂಡಿದ್ದರಿಂದ ಡಿವೈಎಸ್ಪಿ ಜಿ.ಹರೀಶ್ ತನ್ನ ಹಣದ ಆಸೆಗೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಮೋಸದಿಂದ ಹಾಗೂ ಉದ್ದೇಶ ಪೂರ್ವಕವಾಗಿ ಮಾಡಿ ಜಿ.ಹರೀಶ್ ಡಿ.ವೈ.ಎಸ್ಪಿ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ವ್ಯವಸ್ಥಿತವಾಗಿ ಸುಳ್ಳು ಸಾಕ್ಷಿ ಸೃಷ್ಟಿಸಿ ದಲಿತ ಡಾ, ಬಿ.ರಮೇಶ್ ಬಾಬು ವೈದ್ಯರಿಗೆ ತೊಂದರೆ ನೀಡಿದ್ದರಿಂದ ಡಾ, ಬಿ.ರಮೇಶ್ ಬಾಬು ಇವರು ಜಿಲ್ಲಾ ಪರಿಶಿಷ್ಟ ಜಾತಿಯ ದೌರ್ಜನ್ಯ ಸಮಿತಿಯ ಮೊರೆ ಹೋಗಿ ಹಾಗೂ ಸಾರ್ವಜನಿಕ ನ್ಯಾಯದ ಆಡಳಿತ ಅಪರಾಧಗಳನ್ನು (perjury and offences related to administration of public justice), ដថក 2 (2) ರಲ್ಲಿ National commission for Scheduled caste ಇವರು ಆದೇಶದನ್ವಯ ಜಿಲ್ಲಾಧಿಕಾರಿ ರಾಯಚೂರು ಹಾಗೂ ಇದಕ್ಕೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರು ಆಗಿರುತ್ತಾರೆ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ಜಿಲ್ಲಾಧಿಕಾರಿಗಳು ಜಾಗೃತಿ ಉಸ್ತುವಾರಿ ಸಮಿತಿಯು ರಾಯಚೂರು ತನಿಖೆ ಕೈಗೊಂಡು ಸೆಕ್ಷನ್ 69 ಅಂಚೆ ಕಾಯ್ದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆಯ ಅಡಿಯಲ್ಲಿ ಐ.ಪಿ.ಸಿ ಕಾಯ್ದೆಗಳನ್ವಯ ವಿಶೇಷ ಸತ್ರ ನ್ಯಾಯಲಯ ರಾಯಚೂರಿನಲ್ಲಿ ಸದರಿ ಜಿ.ಹರೀಶ್ ಡಿವೈಎಸ್ಪಿ ಅಧಿಕಾರಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದ್ದು, ಸದರಿ ಪ್ರಕರಣ ನ್ಯಾಯಲಯದಲ್ಲಿ ಇನ್ನೂ ಬಾಕಿ ಇರುತ್ತದೆ. ಆದರು ಆರೋಪಿ-2 ಜಿ.ಹರೀಶ್ ಡಿವೈಎಸ್ಪಿ ಅವರು ಆಗಿದ್ದು ಈಗ ಮುಂಬಡ್ತಿ ಹೊಂದಿದ್ದು. Additional SP ಯಾಗಿ ರಾಯಚೂರಿನಲ್ಲಿ ಈಗ ಕಾರ್ಯ ನಿರ್ವಹಿಸುತ್ತಿದು ಅವರು ಆವಾಗ ಡಿವೈಎಸ್ಪಿ ಅಧಿಕಾರಿ ಇದಾಗನೇ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿ ಕೊಂಡಿದ್ದು ಈಗ ಮತ್ತೆ ಇನ್ನೂ ಹೆಚ್ಚಿನ ಅಧಿಕಾರ ಈಗ ಆರೋಪಿ 2 ಜಿ.ಹರೀಶ್ ಬಾಬು ಜಿಲ್ಲಾ ಹೆಚ್ಚುವರಿ ಎಸ್ಪಿ ಮುಂಬಡ್ತಿಯಾಗಿ ಅಧಿಕಾರವನ್ನು ವಹಿಸಿ ಕೊಂಡಿದ್ದು ಇದರಿಂದ ಅವರು ರಾಜಕೀಯ ಸಮಾಜಿಕ ಔದ್ಯೋಗಿಕ ಹಾಗೂ ಆರ್ಥಿಕ ಪ್ರಭಾವವನ್ನು ಬೀರಿಸುವಂತ ವರಾಗಿದ್ದು ಏಕೆಂದರೆ ಇವರು ಸುಮಾರು ವರ್ಷಗಳಿಂದ ಇಲ್ಲಿ ಕೆಲಸ ಮಾಡಿದ್ದರಿಂದ ಇವರಿಗೆ ಸ್ಥಳೀಯ ಪ್ರಭಾವ ರಾಜಕಾರಣಿಗಳಲ್ಲಿ ಒಳ್ಳೆಯ ಒಡನಾಟ ಇರುವುದರಿಂದ ಇವರು ಪ್ರಭಾವವನ್ನು ಮಧ್ಯೆ ಪ್ರವೇಶಿಸಿ ನ್ಯಾಯದ ಹಾದಿಯನ್ನು ತಿರುಚಿ ಬಿಡುತ್ತಾರೆ ಇವರೇ ಆರೋಪಿಯಾದ 2 ಜಿ.ಹರೀಶ್ ಜಿಲ್ಲಾ ಹೆಚ್ಚುವರಿ ಎಸ್ಪಿ ಆಗಿರುವುದರಿಂದ ಇವರನ್ನು ಈ ಪ್ರಕರಣವು ಮುಗಿಯುವ ವರೆಗೆ ಆರೋಪಿ 2 ಜಿ.ಹರೀಶ್ ಜಿಲ್ಲಾ ಹೆಚ್ಚುವರಿ ಎಸ್ಪಿ ಇವರನ್ನು ರಾಯಚೂರಿನಿಂದ ಬೇರೆ ಕಡೆಗೆ ಕೂಡಲೇ ವರ್ಗಾವಣೆ ಮಾಡಿ ಹಾಗೂ ಇವರನ್ನು ಅಧಿಕಾರ ದುರ್ಬಳಕೆಯ ಮಾಡಿ ಕೊಂಡಂತಹ ಕಾಯ್ದೆಯ ಅಡಿಯಲ್ಲಿ ಇವರನ್ನು ಅಮಾನತ್ತು ಮಾಡಿ ಹಾಗೂ ಅವರ ವಿರುದ್ದ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಈ ಮೂಲಕ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ವತಿಯಿಂದ ತಮ್ಮಲ್ಲಿ ಮನವಿ ಮಾಡಿ ಕೊಳ್ಳುತ್ತೀರುವ ಸಂಘಟಕರಾದ ಕೆ.ಶಂಕರ್ ನಂದಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಹನುಮೇಶ್ ಕಟ್ಟಿಮನಿ ಜಿಲ್ಲಾ ಕಾರ್ಯಧ್ಯಕ್ಷರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button