ಪುರ ಸಭೆಯ ಜಾಗದಲ್ಲಿನ ಅಕ್ರಮ ಕಂಪೌಂಡ ತೆರವು ಗೊಳಿಸಿ ರಸ್ತೆಗೆ ರಸ್ತೆ ಲಿಂಕ್ ಮಾಡಿ ಇರದಿದ್ದರೆ – ನಿವಾಸಿಗಳಿಂದ ಧರಣಿ ಸತ್ಯಾಗ್ರಹದ ಎಚ್ಚರಿಕೆ.
ಮುದ್ದೇಬಿಹಾಳ ಜು.25

ರಸ್ತೆಗೆ ರಸ್ತೆ ಲಿಂಕ್ ಮಾಡಿ ರಸ್ತೆ ನಿರ್ಮಾಣ ಮಾಡುವಂತೆ ನಿವಾಸಿಗಳಿಂದ ಮನವಿ ಸಲ್ಲಿಸಿ ಮೂರು ವರ್ಷ ಗತಿಸಿದರು ಇಲ್ಲಿಯ ವರೆಗೂ ಇಂದು ಮಾಡುತ್ತೇವೆ. ನಾಳೆ ಮಾಡುತ್ತೇವೆ ಎಂದು ಪುರ ಸಭೆಯವರು ಕಾಲಹರಣದ ಉತ್ತರ ನಿಡುತ್ತಾ ಬರುತ್ತಿದ್ದಾರೆ. ಸರ್ವೆ ನಂಬರ 179/ಇ ನಲ್ಲಿ ಇರುವ ಗಾರ್ಡನ್ ಜಾಗವನ್ನು ಅತಿಕ್ರಮಣ ಮಾಡಿ ಸರ್ವೆ ನಂಬರ್ 179/2ಡ, ರಸ್ತೆಗೆ ರಸ್ತೆ ಲಿಂಕ್ ಮಾಡಿರುವುದಿಲ್ಲ, ಈ ಕುರಿತು 2-11-2022 ರಲ್ಲಿ ಪುರ ಸಭೆಗೆ ನಿವಾಸಿಗಳು ಮನವಿ ಸಲ್ಲಿಸಿದರು. ಅಂದು ಇರುವ ಪುರಸಭೆ ಮುಖ್ಯಾಧಿಕಾರಿಗಳು ಈ ಸರ್ವೆ ನಂಬರಗೆ ಸಂಬಂಧಿಸಿದವರಿಗೆ ನೋಟಿಸ್ ನೀಡಿದ್ದೇವೆ.

ಸ್ವಲ್ಪ ದಿನದಲ್ಲಿ ಅನುದಾನ ಬಂದ ಮೇಲೆ ರಸ್ತೆ ಮಾಡಿ ಕೊಡುತ್ತೇವೆ ಎಂದು ಹೇಳಿದ್ದರು. ನಂತರ ಒಂದು ವರ್ಷ ಕಳೆದರು ಇದರ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ. ನಂತರ ಮುದ್ದೇಬಿಹಾಳದಲ್ಲಿ ಲೋಕಾಯುಕ್ತದವರು ಸಾರ್ವಜನಿಕ ಕುಂದು ಕೊರತೆ ಸಭೆ ನಡೆಸಿದ್ದರು. ಅವಾಗ ಲೋಕಾಯುಕ್ತ ಅಧಿಕಾರಿಗಳು ಪುರ ಸಭೆಗೆ ನೋಟಿಸ್ ನೀಡಿದ್ದರು. ನಂತರ ಪುರಸಭೆ ಇಂಜಿನಿಯರಿಂಗ್ ಮಾರುತಿ ನಗರದ ಸರ್ವೆ ನಂಬರ 179/2ಡ ಮತ್ತು 179/ಇ, ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಇದು ಪುರ ಸಭೆಯ ಜಾಗೆ ಇದ್ದು ನಿಮಗೆ ಶೀಘ್ರದಲ್ಲೇ ಅನಧಿಕೃತ ಕಂಪೌಂಡ ತೆರವು ಗೊಳಿಸಿ ರಸ್ತೆ ನಿರ್ಮಾಣ ಮಾಡಿ ಕೊಡುತ್ತೇವೆ ಎಂದಿದ್ದರು.

ಆದರೆ ಈಗ ಅನುದಾನ ಬಂದಿದೆ. ರಸ್ತೆ ಇನ್ನೂ ನಿರ್ಮಾಣ ಮಾಡುತ್ತಿಲ್ಲಾ. ಇಲ್ಲಿ ಈಗ ಮಳೆ ಬಂದಾಗ ನೀರು ನಿಂತು ತಿರುಗಾಡಲು ರಸ್ತೆ ಇಲ್ಲಾ. ಕಾರಣ ತ್ವರಿತಾಗಿ ಒಂದು ವಾರದಲ್ಲಿ ಅತಿಕ್ರಮಣದ ಕಂಪೌಂಡ ತರೆವು ಗೊಳಿಸಿ ರಸ್ತೆ ನಿರ್ಮಾಣ ಮಾಡಿ ಕೊಡಬೇಕು. ಇಲ್ಲವಾದಲ್ಲಿ ನಂತರದ ದಿನದಲ್ಲಿ ಪುರಸಭೆ ಮುಂದೆ ಬಂದು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಾಕ್ಸ್ ಸುದ್ದಿ:-
ಮಾರುತಿ ನಗರದ ದಾನಮ್ಮ ದೇವಸ್ಥಾನವು ಗಾರ್ಡನ್ ಜಾಗದಲ್ಲಿ ನಿರ್ಮಾಣವಾಗಿದೆ. ಆ ಗುಡಿಯ ಹಿಂದೆ ಜಾಗವಿದ್ದು ಅಲ್ಲಿ ಅಕ್ರಮಣದ ಕಂಪೌಂಡ ನಿರ್ಮಾಣ ಮಾಡಿದ್ದಾರೆ. ಆದ್ದರಿಂದ ರಸ್ತೆಯಿಂದ ರಸ್ತೆಗೆ ಲಿಂಕ್ ಇಲ್ಲಾ. ಕಂಪೌಂಡ ತೆರವು ಗೊಳಿಸಿ ರಸ್ತೆಗೆ ರಸ್ತೆ ಲಿಂಕ್ ಮಾಡಬೇಕು. ಇಲ್ಲವಾದಲ್ಲಿ ಪುರಸಭೆ ಮುಂದೆ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳ ಬೇಕಾಗುತ್ತದೆ.
– ಸಾಗರ.ಎಂ ಉಕ್ಕಲಿ ಹಾಗೂ ಪತ್ರಕರ್ತರು.
ವರದಿ:ಜಿ.ಎನ್ ಬೀರಗೊಂಡ (ಮುತ್ತು) ಢವಳಗಿ