ಶ್ರೀರಾಮಕೃಷ್ಣರ ಶಿಷ್ಯ ಪ್ರೇಮ ಅನಂತವಾದದ್ದು – ಶ್ರೀಶಾರದಾಶ್ರಮದ ಸ್ವಯಂ ಸೇವಕಿ ಡಾ, ಭೂಮಿಕ ಅಭಿಪ್ರಾಯ.
ಚಳ್ಳಕೆರೆ ಜು.26

ಶ್ರೀರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರ ಮೇಲಿಟ್ಟಿದ್ದ ಶಿಷ್ಯ ಪ್ರೇಮ ಅನಂತವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕಿ ಡಾ, ಭೂಮಿಕ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಯುವಕ ಯುವತಿಯರಿಗಾಗಿ ಆಯೋಜಿಸಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ” ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶ್ರೀರಾಮಕೃಷ್ಣರ ಮೇಲಣ ಸ್ವಾಮಿ ವಿವೇಕಾನಂದರ “ಗುರು ಭಕ್ತಿ” ಯು ಇಂದಿನ ಯುವಕರಿಗೆ ಮಾದರಿ ಯಾಗಬೇಕು ಎಂದರು. ಈ ಕಾರ್ಯಕ್ರಮದ ಆರಂಭದಲ್ಲಿ ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿ ಕೊಟ್ಟರೆ, ಮಾತಾಜೀ ತ್ಯಾಗಮಯೀ ವಿದ್ಯಾರ್ಥಿಗಳಿಗೆ ಧ್ಯಾನಾಭ್ಯಾಸ ಮಾಡಿಸಿದರು.

ಈ ತರಗತಿಯಲ್ಲಿ ಸಂತೋಷಕುಮಾರ ಅಗಸ್ತ್ಯ, ಅಂಬಣ್ಣ, ಋತಿಕ್, ಪುಷ್ಪಲತಾ, ಜಿ.ಯಶೋಧಾ ಪ್ರಕಾಶ್ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.