ಜುಲೈ 27. ರಂದು “ರಾಗಿ ತೆನೆ” – ಕವನ ಸಂಕಲನ ಬಿಡುಗಡೆ.
ಚಿತ್ರದುರ್ಗ ಜು.26

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಹಾಗೂ ಶ್ರೀಗಾನಯೋಗಿ ಸಂಗೀತ ಬಳಗದ ಸಹಯೋಗದಲ್ಲಿ ಜುಲೈ 27 ರ ಭಾನುವಾರ ದಂದು ನಗರದ ಪತ್ರಿಕಾ ಭವನದಲ್ಲಿ ಕವಿ ಗಿರೀಶ್.ಎಸ್ ಸಿ ಅವರ “ರಾಗಿ ತೆನೆ” ಕವನ ಸಂಕಲನದ ಬಿಡುಗಡೆ ಹಾಗೂ ಕವಿ ಗೋಷ್ಠಿ ಮತ್ತು ಸಂಗೀತ ಕಾರ್ಯಕ್ರಮ ನಡೆಯಲಿದ್ದು. ಸಮಾರಂಭದ ದಿವ್ಯ ಸಾನಿಧ್ಯವನ್ನು ಭೋವಿ ಪೀಠದ ಇಮ್ಮಡಿ ಸಿದ್ಧರಾಮ ಸ್ವಾಮೀಜಿ ವಹಿಸಲಿದ್ದು.

ಅಧ್ಯಕ್ಷತೆಯನ್ನು ಡಾ, ಶಫೀವುಲ್ಲಾ, ಉದ್ಘಾಟಕರಾಗಿ ಬಿ.ಕೆ ರಹಮತ್ ವುಲ್ಲಾ ಭಾಗವಹಿಸಿದರೆ, ಕವನ ಸಂಕಲನವನ್ನು ಪತ್ರಕರ್ತ ಆರುಂಡಿ ಶ್ರೀನಿವಾಸಮೂರ್ತಿ ಬಿಡುಗಡೆ ಮಾಡಲಿದ್ದು.

ಕಾರ್ಯಕ್ರಮದಲ್ಲಿ ಸೌಭಾಗ್ಯಲಕ್ಷ್ಮೀ.ಟಿ, ಕೋಕಿಲಾ ರುದ್ರಮೂರ್ತಿ, ಕೊರ್ಲಕುಂಟೆ ತಿಪ್ಪೇಸ್ವಾಮಿ, ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ದಯಾವತಿ ಪುತ್ತೂರ್ಕರ್, ಶಿವಾನಂದ ಎನ್ ಬಂಡೆಹಳ್ಳಿ, ಗಿರೀಶ್.ಎಸ್ ಸಿ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.