ಬಸವರಾಜ ಸ್ವಾಮಿ ಅವರ ಮಾಧ್ಯಮ ಕ್ಷೇತ್ರದ ಸೇವೆ ಅವಿಸ್ಮರಣೀಯ – ಎನ್.ಎಸ್ ಬೋಸರಾಜು.
ಮಾನ್ವಿ ಜು.26

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಬೆಂಗಳೂರು, ಜಿಲ್ಲಾ ಘಟಕ ರಾಯಚೂರು ಹಾಗೂ ಮಾಧ್ಯಮ ಸಮಿತಿ ಇವರುಗಳ ನೇತೃತ್ವದಲ್ಲಿ ಬಸವ ಬೆಳಗು ಹಾಗೂ ಸುದ್ದಿಮೂಲ ಪತ್ರಿಕೆಯ ಸಂಸ್ಥಾಪಕರು ಹಾಗೂ ಶರಣ ಚಿಂತಕರಾದ ಬಸವರಾಜ ಸ್ವಾಮಿ ಅವರ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್.ಎಸ್ ಬೋಸರಾಜು ಅವರು ಭಾಗವಹಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಾಧ್ಯಮ ಕ್ಷೇತ್ರದಲ್ಲಿ ಬಸವರಾಜ ಸ್ವಾಮಿ ಅವರ ಸೇವೆ ಅವಿಸ್ಮರಣೀಯವಾದದ್ದು.

ಶರಣ ತತ್ವಗಳನ್ನು ಅಳವಡಿಸಿ ಕೊಂಡು ಈಗ ಅವರು ಇರುವ ಸರಳ ಜೀವನ ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾನ್ವಿ ಕಲ್ಮಠದ ಶ್ರೀಗಳು, ಮಾಜಿ ಸಂಸದರಾದ ಬಿ.ವಿ ನಾಯಕ್, ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ರೈತ ಸಂಘದ ಮುಖಂಡರಾದ ಚಾಮರಾಜ ಮಾಲಿಪಾಟೀಲ್, ವೀರಶೈವ ಮಹಾ ಸಭಾ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ನಿರ್ಜಾಪುರ್, ರುದ್ರಪ್ಪ ಅಂಗಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ