ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರಧಾನ – ಇಂದು ಜರುಗಲಿದೆ.
ಮುದ್ದೇಬಿಹಾಳ ಜು.26

ಇಲ್ಲಿನ ಆಲಮಟ್ಟಿ ರಸ್ತೆ ಪಕ್ಕದ ಅರಿಹಂತ ಗಿರಿಯಲ್ಲಿರುವ ಅರಿಹಂತ ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಜು..26 ರಂದು ಬೆಳಿಗ್ಗೆ 9 ಗಂಟೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲುಜೆ) ದ ಅಂಗ ಸಂಸ್ಥೆ ಯಾಗಿರುವ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ, ಉಪನ್ಯಾಸ, ವಾರ್ಷಿಕ ಪ್ರಶಸ್ತಿ ಪ್ರಧಾನ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿದೆ. ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷರಾದ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಉದ್ಘಾಟಿಸುವರು. ಅರಿಹಂತ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಮಹಾವೀರ ಸಗರಿ, ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ.ಬಿ ವಡವಡಗಿ ಮುಖ್ಯ ಅತಿಥಿಗಳಾಗಿ, ಅರಿಹಂತ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ, ವಿಪುಲ್ ಸಗರಿ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಸಂಘದ ತಾಲೂಕು ಅಧ್ಯಕ್ಷ ಆರ್.ಬಿ ವಡವಡಗಿ (ಮುತ್ತು) ಅಧ್ಯಕ್ಷತೆ ವಹಿಸುವರು. ಅರಿಹಂತ ಪದವಿ ಕಾಲೇಜಿನ ಉಪನ್ಯಾಸಕ ಪ್ರೊ, ರಾಜನಾರಾಯಣ ನಲವಡೆ ಅವರು ಪತ್ರಿಕೋದ್ಯಮ ಮತ್ತು ಪತ್ರಕರ್ತರ ಕಾರ್ಯಶೈಲಿ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುವರು.

ಇದೇ ಸಂದರ್ಭ ತಾಲೂಕು ಮಟ್ಟದ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಯಾಗಿರುವ ಪತ್ರಕರ್ತರಾದ ರಿಯಾಜ್ ಅಹ್ಮದ್ ಮುಲ್ಲಾ, ಹಣಮಂತ ಬೀರಗೊಂಡ, ಈಶ್ವರ ಈಳಗೇರ, ಹಣಮಂತ ಟಕ್ಕಳಕಿ (ಮುತ್ತು) ಕೃಷ್ಣಾ ಕುಂಬಾರ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗುತ್ತದೆ. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿರುವ ಹಿರಿಯ ಪತ್ರಕರ್ತ ಬಸವರಾಜ ಕುಂಬಾರ (ಚವನಭಾವಿ) ಅವರ ಪುತ್ರಿ ಭಾಗ್ಯಶ್ರೀ ಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ಯಾರ ಹತ್ತಿರವೂ ಚಂದಾ ಎತ್ತದೆ ಸಂಘದ ಕ್ರಿಯಾಶೀಲ ಸದಸ್ಯರೇ ಸ್ವ ಇಚ್ಚೆಯಿಂದ ಕೆಲವೊಂದು ಜವಾಬ್ಧಾರಿ ವಹಿಸಿಕೊಂಡು ಈ ಕಾರ್ಯಕ್ರಮ ನಡೆಸಲು ಮುಂದಾಗಿರುವುದು ವಿಶೇಷವಾಗಿದೆ ಎಂದು ಸಂಘದ ಉಪಾಧ್ಯಕ್ಷ ಸಿದ್ದು ಚಲವಾದಿ, ಪ್ರಧಾನ ಕಾರ್ಯದರ್ಶಿ ರವೀಂದ್ರ ನಂದೆಪ್ಪನರ್, ಖಜಾಂಚಿ ಲಾಡ್ಲೇಮಶ್ಯಾಕ ನದಾಫ, ಕಾರ್ಯದರ್ಶಿ ಕಾಶಿನಾಥ ಬಿರಾದಾರ ನಾಲತವಾಡ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:- ಜಿ ಎನ್ ಬೀರಗೊಂಡ (ಮುತ್ತು) ಢವಳಗಿ.