ಸಹಕಾರ ಭಾರತಿ ಕರ್ನಾಟಕ ವಿಜಯಪುರ ಜಿಲ್ಲಾ ಘಟಕ – ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಿತು.
ವಿಜಯಪುರ ಜು.26

ವಿಜಯಪುರ ಜಿಲ್ಲೆಯ ಜಿಲ್ಲಾ ಸಮಿತಿ, ಜಿಲ್ಲಾ ಮಹಿಳಾ ಸಮಿತಿ, ಜಿಲ್ಲಾ ಪ್ರಕೋಷ್ಠಗಳ ಮತ್ತು ತಾಲೂಕು ಸಮಿತಿಗಳ ಪದಗ್ರಹಣ ಸಮಾರಂಭ ದಿನಾಂಕ 25/ 7/2025 ಶುಕ್ರವಾರ ರಂದು ಬಾವಸಾರ ಸಾಂಸ್ಕೃತಿಕ ಸಮುದಾಯ ಭವನ ವಿಜಯಪುರದಲ್ಲಿ ನಡೆಯಿತು. ವಿಜಯಪುರ ಜಿಲ್ಲಾ ಸಹಕಾರ ಭಾರತಿ ಘಟಕದ ಜಿಲ್ಲಾ ಅಧ್ಯಕ್ಷರರಾಗಿ ಹರೀಶ್ ಗೌಡ.ಎಸ್ ಪಾಟೀಲ ಆಯ್ಕೆಯಾಗಿದ್ದರು.ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ದೀಪಕ್ ಶಿಂತ್ರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪರಶುರಾಮ್ ಚಿಂಚಲಿ ಯವರನ್ನು ಆಯ್ಕೆ ಮಾಡಿದರು. ಅಲಮೇಲ ಪಟ್ಟಣದ ನಾಗು ಅಮರಗೊಂಡ ವಿಜಯಪುರ ಜಿಲ್ಲಾ ಸಹಕಾರ ಭಾರತಿ ಘಟಕ ಸದಸ್ಯರನ್ನಾಗಿ ನೇಮಕ ಮಾಡಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಆಲಮೇಲ ತಾಲೂಕು ಸಹಕಾರ ಭಾರತಿ ಘಟಕ ಅಧ್ಯಕ್ಷರನ್ನಾಗಿ ಕೇದಾರನಾಥ್ ಕತ್ತಿ ಪಿಕೆಪಿಎಸ್ ಅಧ್ಯಕ್ಷರು ಕಡಣಿ ಅವರನ್ನು ಆಯ್ಕೆ ಮಾಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮ ಉದ್ಘಾಟಕರಾಗಿ ಶ್ರೀ ರಮೇಶ್ ಜಿಗಜಿಣಗಿ ಸಂಸದರು ವಿಜಯಪುರ, ವಿಶೇಷ ಆಹ್ವಾನಿತರಾಗಿ ಪ್ರಭುದೇವ್ ಆರ್ ನಾಗನೂರ್ ರಾಜ್ಯಾಧ್ಯಕ್ಷರು ಸಹಕಾರ ಭಾರತಿ ಕರ್ನಾಟಕ, ಮುಖ್ಯ ಅತಿಥಿಗಳು ರಮೇಶ್ ವೈದ್ಯಜಿ ಸಂರಕ್ಷಕರು ರಾಷ್ಟ್ರೀಯ ಸಹಕಾರ ಭಾರತಿ, ಅರುಣಶಾಪುರ ಮಾಜಿ ವಿಧಾನ ಪರಿಷತ್ ಸದಸ್ಯರು, ಎಂ.ಜಿ ಪಾಟೀಲ್ ನಿವೃತ್ತ ಅಪರ ನಿರ್ಬಂಧಕರು ಕರ್ನಾಟಕ ರಾಜ್ಯ ಸಹಕಾರ ಸಂಘಗಳು, ನರಸಿಂಹ ಕಾಮತ್ ಪ್ರಧಾನ ಕಾರ್ಯದರ್ಶಿ ಸಹಕಾರ ಭಾರತಿ ಕರ್ನಾಟಕ, ಅಧ್ಯಕ್ಷತೆ ಡಾಕ್ಟರ್, ಆರ್.ಆರ್ ನಾಯಕ್ ಜಿಲ್ಲಾಧ್ಯಕ್ಷರು ಸಹಕಾರ ಭಾರತಿ ವಿಜಯಪುರ, ಗೌರವ ಸನ್ಮಾನ ಬಸವರಾಜ ಯಲಿಗಾರ್ ಉಪ ಪೋಲಿಸ್ ಅಧೀಕ್ಷಕರು, ಅತಿಥಿಗಳು ರಾಜಶೇಖರ್ ಗುಡದಿನ್ನಿ ಉಪಧ್ಯಕ್ಷರು ಡಿಸಿಸಿ ಬ್ಯಾಂಕ್ ವಿಜಯಪುರ, ವ್ಹಿ.ಡಿ ಇಜೇರಿ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಿಯಮಿತ ವಿಜಯಪುರ, ಶ್ರೀಮಂತ ಇಂಡಿ ಸಂಸ್ಥಾಪಕ ಅಧ್ಯಕ್ಷರು ಶಾಂತೇಶ್ವರ ವಿವಿಧೋದ್ದೇಶಗಳ ಸಹಕಾರಿ ಸಂಘ ಹೋರ್ತಿ, ಚಂದ್ರಶೇಖರ್ ಕವಟಗಿ ಭಾಜಪಾ ಬೆಳಗಾವಿ ಪ್ರಭಾರಿ, ರಾಜೇಶ ದೇವಗಿರಿ ಮಾಜಿ ಉಪ ಮಹಾ ಪೌರರು ಮಹಾ ನಗರ ಪಾಲಿಕೆ ವಿಜಯಪುರ. ಹಾಗೂ ಜಿಲ್ಲೆಯ ಸಹಕಾರ ಭಾರತಿ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳು, ರಾಜಕೀಯ ಮುಖಂಡರು ಹಿರಿಯರು ಮಹಿಳೆಯರು ಯುವಕರು ಭಾಗಿಯಾಗಿದ್ದರು ಎಂದು ವರದಿಯಾಗಿದೆ.