“ಜ್ಞಾನವ ಅರಿ ಶ್ವಾರ್ಥ ಅಳಿ ಜಗದಿ ಮಿನಗು”…..

ಸವಿ ಮಾತುಗಳಲ್ಲಿ ಅನುಭವದ ಸಾರವೇ
ಅರ್ಥವು
ನಂಬಿಕೆಯ ಜೀವನ ಸಾಗಲು ಸಂಶಯದ ಅಡ್ಡ
ಗೆರೆಯೇ ಅನರ್ಥವು
ನೊಂದವರ ಬಳಿ ಸಹಾಯದ ನೇಪವೇ
ಸ್ವಾರ್ಥವು
ಬಾಳಿನಲಿ ಅಚ್ಚ ಮಲ್ಲಿಗೆಯ ಮನದ ಗುಣವೇ
ಪಾರ್ಥತನವು
ಸ್ವಾಭಿಮಾನ ಸಮಾನತೆಯ ಕಾರ್ಯಸಾಧುವೇ
ನಿಜಕರ್ತವು
ದುರ್ಗುಣದಿ ಬೇದಭಾವ ತೋರುವುದೇ
ವ್ಯರ್ಥವು
ಹಾನಿ ಲಾಭ ನಿರೀಕ್ಷೆಯಲ್ಲಿರದೇ ಮುಗ್ಧ
ನಗುವೇ ಯತಾರ್ಥವು
ಅವರು ಪಡೆದ ಭಾಗ್ಯ ಅವರದು ನಿಶ್ಚಿಂತೆಯೇ
ಶುಭಾರ್ಥವು
ನೋವು ನಲಿವು ಎನೇ ಇದ್ದರೂ ದೃಢತೆಯೇ
ಭಾವಾರ್ಥವು
ಗೊಂದಲಗಳ ನಡುವೆ ಮೌನವಾಗಿರುವುದೇ
ಜ್ಞಾನಾರ್ಥವು
ಹೊಗಳಿಕೆ ತೆಗಳಿಕೆಗೆ ಸುಖ ದುಃಖದಿ ಮನ
ಸೋಲದಿರುವುದೇ ಸಮರ್ಥತೆ
ಎಲ್ಲ ಬಲ್ಲವರಂತೆ ನನ್ನತನದ ಅಹಂ
ಪದವಿಯೇ ಗೂಢಾರ್ಥತೆ
ಜ್ಞಾನಾರ್ಥ ಅರಿ ಶ್ವಾರ್ಥ ಅಳಿ ಸ್ವಾಭಿಮಾನತದಿ
ಬೆಳಿ ವಿಶ್ವದೆಲ್ಲಡೆ ಮಿನಗು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ