ದಕ್ಷಿಣ ಭಾರತದ ಶ್ರೀರಾಮಕೃಷ್ಣ ಪರಂಪರೆಗೆ ಸ್ವಾಮಿ ರಾಮಕೃಷ್ಣಾನಂದರ ಕೊಡುಗೆ ಅಪಾರ – ಯತೀಶ್.ಎಂ ಸಿದ್ದಾಪುರ.
ಚಳ್ಳಕೆರೆ ಜು.26

ದಕ್ಷಿಣ ಭಾರತದ ಶ್ರೀರಾಮಕೃಷ್ಣ ಪರಂಪರೆಗೆ ಸ್ವಾಮಿ ರಾಮಕೃಷ್ಣಾನಂದರು ನೀಡಿರುವ ಕೊಡುಗೆ ಅಪಾರ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಹಾಗೂ ಸಮಾಜ ಸೇವಕ ಯತೀಶ್.ಎಂ ಸಿದ್ದಾಪುರ ತಿಳಿಸಿದರು. ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ಪಂಕಜ ಚೆನ್ನಪ್ಪ ಅವರ ವಿದ್ಯಾಶ್ರೀ ನಿವಾಸದಲ್ಲಿ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ವತಿಯಿಂದ ಆಯೋಜಿಸಿದ್ದ “ಸ್ವಾಮಿ ರಾಮಕೃಷ್ಣಾನಂದರ ಜಯಂತ್ಯುತ್ಸವ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು “ಸ್ವಾಮಿ ರಾಮಕೃಷ್ಣಾನಂದರ” ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಸ್ವಾಮಿ ವಿವೇಕಾನಂದರ ಆದೇಶದಂತೆ ದಕ್ಷಿಣ ಭಾರತದ ಮದ್ರಾಸ್ ನಲ್ಲಿ ಶ್ರೀರಾಮಕೃಷ್ಣ ಮಠವನ್ನು ಕಟ್ಟಿ ಬೆಳೆಸುವಲ್ಲಿ ಅವರ ಪಾತ್ರ ಹಿರಿದು. ಅವರ ಸಾಧನಾ ಜೀವನ ಮತ್ತು ಸಂದೇಶಗಳು ಇಂದಿನ ಜನರಿಗೆ ಮಾದರಿಯಾಗಿವೆ ಎಂದರು. ಈ ಜಯಂತ್ಯುತ್ಸವದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ವಿಶೇಷ ಭಜನೆ ಮತ್ತು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು.

ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಪಂಕಜ ಚೆನ್ನಪ್ಪ, ತಳುಕಿನ ತೊಯಜಾಕ್ಷಿ, ಹೆಚ್ ಲಕ್ಷ್ಮೀದೇವಮ್ಮ, ಎಂ.ಗೀತಾ ನಾಗರಾಜ್, ಸೌಮ್ಯ ಪ್ರಸಾದ್, ಅಕ್ಷಯ ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.