ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ – ಉತ್ತಮ ಪತ್ರಕರ್ತರ ಪ್ರಶಸ್ತಿ ಪ್ರಧಾನ & ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಜರುಗಿತು.

ಮುದ್ದೇಬಿಹಾಳ ಜು.26

ಪಟ್ಟಣದ ಆಲಮಟ್ಟಿ ರಸ್ತೆಯ ಪಕ್ಕದಲ್ಲಿ ಇರುವ ಅರಿಹಂತ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ದಂದು ನಡೆದ ಪತ್ರಿಕಾ ದಿನಾಚರಣೆ ಮತ್ತು ತಾಲೂಕು ಉತ್ತಮ ಪತ್ರಕರ್ತರ ಪ್ರಶಸ್ತಿ ಪ್ರಧಾನ ಮತ್ತು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾಜಿ ಶಾಸಕರು, ರೈತ ಮೊರ್ಚದ ರಾಜ್ಯಾಧ್ಯಕ್ಷರಾದ ಎ.ಎಸ್ ಪಾಟೀಲ ನಡಹಳ್ಳಿ ಅವರು ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರು ಸಮಾಜವನ್ನು ಬದಲಾಯಿಸಲು ಅವಕಾಶ ಇದೆ.

ಮತ್ತು ಸಮಾಜದಲ್ಲಿ ಸಂಘರ್ಷಣೆ ಮಾಡಲು ಅವಕಾಶ ಇದೆ. ಆದರೆ ಸಮಾಜವನ್ನು ಸರಿ ದಾರಿಗೆ ತರುವ ಕೆಲಸವನ್ನು ಪ್ರತಿಯೊಬ್ಬ ಪತ್ರಕರ್ತರು ಮಾಡಬೇಕು. ಪತ್ರಿಕೆಯಲ್ಲಿ ಕೆಲಸ ಮಾಡುವವರು ಅಷ್ಟೇ ಪತ್ರಕರ್ತರು ಅಲ್ಲ. ಸೊಸಿಯಲ್ ಮಿಡಿಯಾದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ಪತ್ರಕರ್ತರು ಹೌದು. ಆದರೆ ಸೊಸಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡುವ ಮುಂಚೆ ಅದರ ಬಗ್ಗೆ ಅರಿತು ಪೋಸ್ಟ್ ಮಾಡಬೇಕು ಎಂದು ಹೇಳಿದರು.ನಂತರ ಹಿರಿಯ ಪತ್ರಕರ್ತರಾದ ರವಿಂಧ್ರ ನಂದೆಪ್ಪನವರು ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸಮಾಜದಲ್ಲಿ ಕಾರ್ಯಾಂಗ, ನ್ಯಾಯ್ಯಾಂಗ, ಶಾಸಕಾಂಗ ದ ಜೊತೆಗೆ ಪತ್ರಕರ್ತರನ್ನು ನಾಲ್ಕನೇ ಅಂಗವಾಗಿ ಕರೆಯುತ್ತಾರೆ. ಆದರೆ ಎಲ್ಲವನ್ನೂ ಸರಿದಾರಿಗೆ ತರುವ ಪತ್ರಕರ್ತರ ಸಂಘಟನೆಯು ಅಸಂಘಟಿತವಾಗಿದೆ. ಸಮಾಜದಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸುತ್ತಿದೆ.

ಪತ್ರಕರ್ತರು ಸಮಾಜದಲ್ಲಿ ಕನ್ನಡಿಯಂತೆ ಕಾರ್ಯ ನಿರ್ವಹಿಸಬೇಕು. ಹಿಂದೆ ಪ.ಗು ಹಳಕಟ್ಟಿ, ಡಿ.ವಿ ಗುಂಡಪ್ಪ ನಂತವರು ಅನೇಕ ಜನರು ಸಮಾಜದಿಂದ ಏನು ನಿರಿಕ್ಷೇ ಪಡೆಯದೆ. ತಮ್ಮ ಜೀವನವನ್ನು ಸಮಾಜಕ್ಕಾಗಿ ಇಟ್ಟಂತ ಒಳ್ಳೆಯವರಾಗಿ ಹೋಗಿದ್ದಾರೆ. ಪತ್ರಕರ್ತ ಜೀವನ ಹೂವಿನ ಹಾಸಿಗೆ ಅಲ್ಲ. ತೂತು ಬಿದ್ದ ದೋಣಿಯಲ್ಲಿನ ನಮ್ಮ ಪಯಣ ಆದಾಂತಿದೆ ಎಂದು ಹೇಳಿದರು.‌ ಮುಖ್ಯ ಅತಿಥಿಗಳಾದ ಅರಿಹಂತ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮಹಾವೀರ ಸಗರಿ, ಮತ್ತು ಪ್ರೋ. ರಾಜನಾರಾಯಣ ನಲವಡೆ ಅವರು ಪತ್ರಕರ್ತರ ಮತ್ತು ಅವರ ಬದುಕಿನ ಬಗ್ಗೆ ವಿಶೇಷ ಉಪನ್ಯಾಸ ಮಾಡಿದರು. ಕಾನಿಪ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಡಿ.ಬಿ ವಡವಡಗಿ ಅವರು ಸರಕಾರ ಪತ್ರಕರ್ತರಿಗೆ ನೀಡಿದ ಸೌಲಭ್ಯದ ಬಗ್ಗೆ ಮಾತನಾಡಿದರು.

ಇದೇ ವೇಳೆಯಲ್ಲಿ ರಿಯಾಜ್ ಅಮ್ಮದ್ ಮುಲ್ಲಾ, ಹಣಮಂತ ಬೀರಗೊಂಡ, ಈಶ್ವರ ಈಳಗೇರ, ಹಣಮಂತ ಟಕ್ಕಳಕಿ (ಮುತ್ತು) ಕೃಷ್ಣಾ ಕುಂಬಾರ ಇವರಿಗೆ ತಾಲೂಕು ಮಟ್ಟದ ವಾರ್ಷಿಕ ಉತ್ತಮ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು. ಮತ್ತು ಪತ್ರಕರ್ತರ ಮಕ್ಕಳಾದ ಕುಮಾರಿ ಭಾಗ್ಯಶ್ರೀ ಬಸವರಾಜ ಕುಂಬಾರ ಅವರು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಿದ್ದಕ್ಕಾಗಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆಯಲ್ಲಿ ಪ್ರೋ. ವಿಪುಲ್.ಎಂ ಸಗರಿ, ಕಾನಿಪ ಸಂಘದ ಜಿಲ್ಲಾಧ್ಯಾಕ್ಷರಾದ ಪ್ರಕಾಶ.ಜಿ ಬೆಣ್ಣೂರ, ತಾಲೂಕು ಅಧ್ಯಕ್ಷರು ಮುತ್ತು ವಡವಡಗಿ, ಭಾಜಾಪ ಮಂಡಲ ಅಧ್ಯಕ್ಷರಾದ ಜಗದೀಶ ಪಂಪಣ್ಣವರು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿ ಪ್ರಾಥನಾ ಗೀತೆ ಹಾಡಿದಳು, ನೂರನಬಿ ನಧಾಪ್ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ರವಿಂದ್ರ ನಂದೆಪ್ಪನವರು ಸ್ವಾಗತಿಸಿದರು ಎಂದು ವರದಿಯಾಗಿದೆ.

ವರದಿ:ಜಿ.ಎನ್ ಬೀರಗೊಂಡ (ಮುತ್ತು) ಢವಳಗಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button