‘ಮೆಡಿವಿಜನ್ 2025’ ವೈದ್ಯ ವಿಜ್ಞಾನ – ವಸ್ತು ಪ್ರದರ್ಶನಕ್ಕೆ ಭೇಟಿ.
ಗದಗ ಜು.28

ಕೆ.ಎಚ್ ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ‘ಮೆಡಿವಿಜನ್ – 2025’ ವೈದ್ಯ ವಿಜ್ಞಾನ ವಸ್ತು ಪ್ರದರ್ಶನಕ್ಕೆ ನಗರದ ರೋಟರಿ ಗದಗ ಸೆಂಟ್ರಲ್ ಸದಸ್ಯರು ಭೇಟಿ ನೀಡಿ ಮಾಹಿತಿಯನ್ನು ಪಡೆದರು. ಜಿಲ್ಲೆಯಲ್ಲಿ ನಡೆದ ಮೊಟ್ಟ ಮೊದಲ ಬೃಹತ್ ವೈದ್ಯಕೀಯ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಾನವ ದೇಹದ ರಚನೆ ಮತ್ತು ಕಾರ್ಯ ವೈಖರಿಗಳನ್ನು ಕಣ್ಣಾರೆ ಕಂಡು ನಮ್ಮ ಕಣ್ಣು, ಕಿವಿ, ಮೂಗು, ಬಾಯಿ ಸೇರಿದಂತೆ ಇಡೀ ದೇಹದಲ್ಲಿನ ಅಂಗ ರಚನೆಗಳ ಸೂಕ್ಮ ವಿಷಯಗಳನ್ನು ಪರಿಚಯಿಸುವ ಮತ್ತು ಸಂಶಯದ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯುವಂತಹ ಅವಕಾಶವನ್ನು ಇದು ಒದಗಿಸಿದ್ದು ಆರೋಗ್ಯ ಜಾಗೃತಿಯನ್ನು ಸಾರ್ವಜನಿಕರಲ್ಲಿ ಮೂಡಿಸುವಂತಹ ಸ್ತುತ್ಯ ಕಾರ್ಯವನ್ನು ಈ ವಸ್ತು ಪ್ರದರ್ಶನ ಮಾಡಿದೆ. ನಿರ್ದೇಶಕರಾದ ಡಾ, ಬಸವರಾಜ ಬೊಮ್ಮನಹಳ್ಳಿ ಮತ್ತು ಎಲ್ಲೂ ಸಿಬ್ಬಂದಿಗಳ ಈ ಕಾರ್ಯ ಮೆಚ್ಚುಗೆಗೆ ಕಾರಣವಾಗಿದೆ ಎಂದು ಅಧ್ಯಕ್ಷ ಚೇತನ ಅಂಗಡಿ ಹೇಳಿದರು.

ಜನರಲ್ ಮೆಡಿಸಿನ್, ಮನೋ ವೈದ್ಯಕೀಯ, ಇಎನ್,ಟಿ ಸರ್ಜರಿ, ರಕ್ತ, ಕರಳು, ಕಿಡ್ನಿ, ಮೂಳೆ, ಎಲುಬು, ಪ್ರಸೂತಿ, ಹೆರಿಗೆ ಕುರಿತು ಸ್ಟಾಲ್ಗಳಿಗೆ ಭೇಟಿ ನೀಡಿ ರೋಟರಿ ಗದಗ ಸೆಂಟ್ರಲ್ ಪದಾಧಿಕಾರಿಗಳು ಸದಸ್ಯರು ಮಾಹಿತಿಯನ್ನು ಪಡೆದು ಕೊಂಡರು. ಈ ಸಂದರ್ಭದಲ್ಲಿ ವಸ್ತು ಪ್ರದರ್ಶನದ ಸಮಗ್ರ ಮಾಹಿತಿಯನ್ನು ಡಾ, ಪ್ರದೀಪ ಕಡಿವಾಲ್ ನೀಡಿದರು. ಕಾರ್ಯದರ್ಶಿ ರಾಜು ಉಮನಾಬಾದಿ. ಖಜಾಂಚಿ ಡಾ, ಪ್ರಭು ಗಂಜಿಹಾಳ, ಅಸಿಸ್ಟಂಟ್ ಗೌರ್ನರ್ ವಿ,ಕೆ ಗುರುಮಠ, ಮಾಜಿ ಅಸಿಸ್ಟಂಟ್ ಗೌರ್ನರ್ ಮಲ್ಲಿಕಾರ್ಜುನ ಸಿ.ಐಲಿ, ಮಂಜುನಾಥ ಬೇಲೇರಿ, ರಾಜು ಮುಧೋಳ, ಸುರೇಶ ಅಬ್ಬಿಗೇರಿ, ಸಿ.ಎಫ್ ಪಾಟೀಲ, ಗುರುಶಾಂತಗೌಡ ಹಾಗೂ ಚನ್ನಪ್ಪಗೌಡರ, ಮಂಜುನಾಥ ಕಬಾಡಿ, ಶಶಿಧರ ದಿಂಡೂರ, ಎಂ.ಬಿ ರಮಣಿ, ಸಿದ್ದಲಿಂಗೇಶ ಉಮಚಗಿ, ಸುರೇಶ ನಿಡಗುಂದಿ ರೋಟರಿ ಸದಸ್ಯರು ಪಾಲ್ಗೊಂಡಿದ್ದರು.
*****
ಡಾ, ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬