“ಸಾಧಕನಾಗು”…..

ಬಿದ್ದಲ್ಲಿಯೇ ಎದ್ದು ನಿಂತು ಗೆಲ್ಲಬೇಕು ತುಳಿದವರ ಮುಂದೆ ಮೆರೆಯುವ ಸಾಧಕನಾಗಬೇಕು ಗೊತ್ತೇ ಇಲ್ಲ ಎಂದವರೇ ಗೊತ್ತು ಮಾಡಿಕೊಳ್ಳುವಂತಾಗಬೇಕು ನಮಗರಿವಿಲ್ಲದಂತೆ ನಾವು ಬೆಳೆದು ಬಾಳಬೇಕು

ಚುಚ್ಚು ಮಾತುಗಳಿಗೆ ಕಿವಿ ಕೊಡದೆ ಮೆಚ್ಚಿ

ಬದುಕು

ಬೇಜಾರು ಆಲಸ್ಯತನ ದೂರಕ್ಕೆ ನೂಕು ಸಾಧಕರ ಸಾಧನೆಗಳ ಮೆಲುಕು ಹಾಕು ಕರುನಾಡೆ ಒಂದು ದಿನ ನಮ್ಮನ್ನು ಓದಬೇಕು

ಕುಂಟು ನೆಪಗಳೊಂದಿಗೆ ಕಾಲ ಕಳೆಯಬೇಡಿ ಸುಮ್ಮನೆ ಅನಾಗತ್ಯವಾಗಿ ಸಮಯ ವ್ಯರ್ಥ ಮಾಡಿ

ಕಳೆದು ಹೋದ ದಿನಗಳ ಕುರಿತು ಚಿಂತಿಸಬೇಡಿ ಪ್ರಯತ್ನಗಳಲ್ಲಿ ಸೋತಿದ್ದೀರಿ ಆದರೆ ಸತ್ತಿಲ್ಲ

ನೆನಪಿಡಿ

ಇರುವುದೊಂದೇ ಜನ್ಮ ಪರಿಶ್ರಮ ಹೆಚ್ಚಾಗಲಿ ನೀವ್ಯಾರು ಎಂಬುದು ಜಗತ್ತಿಗೆ ತಿಳಿಯಲಿ ಮಾಡುವ ಕೆಲಸ ಕಾರ್ಯಗಳು ಪ್ರಾಮಾಣಿಕವಾಗಿರಲಿ

ಸತ್ತ ಮೇಲೆ ಸ್ಮಶಾನ ಕಣ್ಣೀರಿಡುವಂತಾಗಲಿ

ಮಾಡಿದ ಸಾಧನೆ ಚರಿತ್ರೆಯಲ್ಲಿ

ಉಳಿಯಬೇಕಾಗಿದೆ

ಆ ಮಹಾನ್ ಕಾರ್ಯಕ್ಕೆ ತಪಸ್ಸು ಬೇಕಾಗಿದೆ ಹೆತ್ತವರ ಒಡಲು ಸಂತಸದಿ ಇರಿಸಬೇಕಾಗಿದೆ ಸಾಧಕರಾಗಿ ಸನ್ಮಾನ ಸಮಾರಂಭಕ್ಕೆ ವೇದಿಕೆ ಸಜ್ಜಾಗಿದೆ

ಶ್ರೀ ಮುತ್ತು ಯ.ವಡ್ಡರ ಶಿಕ್ಷಕರು

HPS ಹಿರೇಮಳಗಾವಿ

ಬಾಗಲಕೋಟ/9845568484

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button