ನಡೆ ನುಡಿ ಒಂದಾದ ಬರಹ ದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ – ಭೋವಿ ಗುರು ಪೀಠದ ಪೂಜ್ಯ ಇಮ್ಮಡಿ ಸಿದ್ಧರಾಮ ಸ್ವಾಮೀಜಿ ಅಭಿಮತ.

ಚಿತ್ರದುರ್ಗ ಜು.29

ಒಂದು ಬರಹ ಉತ್ತಮ ಎಂದು ಪರಿಗಣಿಸ ಬೇಕಾದರೆ ಅದು ಬಸವಾದಿ ಶಿವಶರಣರು ತಿಳಿಸಿದ ನಡೆ ನುಡಿಯ ಹೊಂದಾಣಿಕೆಯಿಂದ ಕೂಡಿರುವುದು ಬಹಳ ಅಗತ್ಯ ಎಂದು ಚಿತ್ರದುರ್ಗದ ಭೋವಿ ಗುರು ಪೀಠದ ಪೂಜ್ಯ ಇಮ್ಮಡಿ ಸಿದ್ಧರಾಮ ಸ್ವಾಮೀಜಿ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಕವಿ ಗಿರೀಶ್ ಎಸ್.ಸಿ ಅವರ ಚೊಚ್ಚಲ ಕವನ ಸಂಕಲನ “ರಾಗಿ ತೆನೆ” ಪುಸ್ತಕ ಬಿಡುಗಡೆ ಹಾಗೂ ಕವಿಗೋಷ್ಠಿ ಮತ್ತು ಸಂಗೀತ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಗಿರೀಶ್ ಅವರ “ರಾಗಿ ತೆನೆ” ಕವನ ಸಂಕಲನವು ನಡೆ ನುಡಿ ಒಂದಾದ ಪುಸ್ತಕವಾಗಿದೆ ಎಂದು ಕೃತಿ ರಚನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪುಸ್ತಕ ಬಿಡುಗಡೆ ಗೊಳಿಸಿ ಮಾತನಾಡಿದ ಶಿವಮೊಗ್ಗದ ಹಿರಿಯ ಪತ್ರಕರ್ತ ಆರುಂಡಿ ಶ್ರೀನಿವಾಸಮೂರ್ತಿ ಅವರು ಕಾವ್ಯಕ್ಕೆ ಯಾವುದೇ ಕಟ್ಟುಪಾಡಿರದೆ ಅದು ಜಾತಿ ಮತ ಪಂಗಡಗಳನ್ನು ಮೀರಿ ರಚನೆ ಯಾಗಬೇಕು, ಕವಿತೆಗಳು ಅನುಭವದ ಸಾಹಿತ್ಯದಿಂದ ಮೂಡಿ ಬರಬೇಕು. “ರಾಗಿ ತೆನೆ” ಕವನ ಸಂಕಲನವು ಮಾನವೀಯ ಸಂಬಂಧಗಳನ್ನು ಕಟ್ಟಿ ಕೊಡುತ್ತದೆ.

ಈ ಕವನದ ಸಂಕಲನದ ಶೀರ್ಷಿಕೆಯಾದ ರಾಗಿಗೆ ಜಾನಪದೀಯ ಮತ್ತು ಪೌರಾಣಿಕ ಹಿನ್ನೆಲೆ ಚರಿತ್ರೆಯಿದೆ. ಆದ್ದರಿಂದ ಇದೊಂದು ಉತ್ತಮ ಕವನಗಳನ್ನು ಒಳಗೊಂಡ ಪುಸ್ತಕವಾಗಿದ್ದು ಇದನ್ನು ಪ್ರತಿಯೊಬ್ಬರೂ ಕೊಂಡು ಓದಬೇಕೆಂದು ಕಿವಿಮಾತು ಹೇಳಿದರು. “ರಾಗಿ ತೆನೆ” ಕವನ ಸಂಕಲನದ ಕುರಿತು ಮಾತನಾಡಿದ ಶಿವಾನಂದ್.ಎನ್ ಬಂಡೇಹಳ್ಳಿ ಅವರು ರಾಮನಗರ ಗಿರೀಶ್ ಅವರ ರಾಗಿ ತೆನೆ ಕವನ ಸಂಕಲನವು ಕಾವ್ಯದ ಎಲ್ಲಾ ವಸ್ತುಗಳನ್ನು ಒಳಗೊಂಡ ಅರವತ್ತೆಂಟು ಅರ್ಥ ಪೂರ್ಣ ಕವನಗಳುಳ್ಳ ಪುಸ್ತಕವಾಗಿದ್ದು ಬದುಕಿನ ನೈಜ ಚಿತ್ರಣವನ್ನು ಕಟ್ಟಿ ಕೊಡುತ್ತದೆ. ಸಾಹಿತ್ಯ ಲೋಕಕ್ಕೆ ಇದೊಂದು ಉತ್ತಮ ಕೊಡುಗೆಯಾಗಿದೆ ಎಂದು ಪ್ರಶಂಸಿದರು. ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ದಯಾವತಿ ಪುತ್ತೂರ್ಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರೆ, ಗೌರವಾಧ್ಯಕ್ಷರಾದ ಬಿ.ಕೆ ರಹಮತ್ ವುಲ್ಲಾ ಅವರು‌ ಆಶಯ ಭಾಷಣ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ, ಶಫೀವುಲ್ಲಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚಿತ್ರದುರ್ಗದ ವಿವಿಧ ಮಠಗಳ ಮಠಾಧೀಶರು, ಹರಿಹರದ ಡಾ, ಪ್ರಾನ್ಸಿಸ್ ಕ್ಸೇವಿಯರ್, ಪರಮೇಶ್ವರಪ್ಪ ಕುದುರಿ, ಶಿಕ್ಷಕಿ ಸೌಭಾಗ್ಯಲಕ್ಷ್ಮೀ, ಗಾನಯೋಗಿ ಸಂಗೀತ ಬಳಗದ ಕೋಕಿಲಾ ರುದ್ರಮೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಚಿತ್ರದುರ್ಗದ ಶ್ರೀಗಾನಯೋಗಿ ಸಂಗೀತ ಬಳಗದ ಸದಸ್ಯರು ವಿಶೇಷ ಸಮೂಹ ಗಾಯನ ನಡೆಸಿ ಕೊಟ್ಟರು. ಮಧ್ಯಾಹ್ನ ನಡೆದ ಕವಿಗೋಷ್ಠಿ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಕವಿಗಳು ಕವನ ವಾಚಿಸಿದರೆ ಮತ್ತು ಗಾಯಕರು ಸುಶ್ರಾವ್ಯವಾಗಿ ಹಾಡಿದರು. ಈ ಸಾಹಿತ್ಯ ಸಂಭ್ರಮದಲ್ಲಿ ಸುಮಾ ರಾಜಶೇಖರ್, ನಾಜೀಯಾ, ಡಾ, ಬಸವರಾಜ ಹರ್ತಿ, ಶಾರದಾ ಜೈರಾಮ್, ನವೀನ್ ಸಜ್ಜನ್, ಮುರಳೀಧರ ಬಿ, ತಿಪ್ಪಮ್ಮ, ವಿನಾಯಕ, ಮಮತ, ತಿಪ್ಪೀರಮ್ಮ, ಪಗಲಬಂಡೆ ನಾಗೇಂದ್ರಪ್ಪ, ಯತೀಶ್ ಎಂ ಸಿದ್ದಾಪುರ, ಶಿವರುದ್ರಪ್ಪ, ಸತೀಶ್ ಕುಮಾರ್, ಜಯಪ್ರಕಾಶ್, ನಿರ್ಮಲಾ, ಉಷಾರಾಣಿ , ಶೋಭಾ, ಡಿ.ಬಿ ನಾಯಕ್, ಬೆಳಕುಪ್ರಿಯ ಸೇರಿದಂತೆ ಚಿನ್ಮೂಲದ್ರಿ ಸಾಹಿತ್ಯ ವೇದಿಕೆ ಹಾಗೂ ಶ್ರೀಗಾನಯೋಗಿ ಸಂಗೀತ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button