ಶಾಸಕ ಎನ್.ಟಿ ಶ್ರೀನಿವಾಸ್ ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ – ಜಿಲ್ಲಾ ಜನಸ್ಪಂದನ ಕಾರ್ಯಕ್ರಮ.
ಕೊಟ್ಟೂರು ಜು.29

ತಾಲೂಕಿನ ಉಜ್ಜನಿ ಗ್ರಾಮದ ಶ್ರೀ ಮರುಳು ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಶಾಸಕರಾದ ಡಾ, ಶ್ರೀನಿವಾಸ್ ಎನ್ ಟಿ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರ ಮತ್ತು ಎಂ.ಎಸ್ ದಿವಾಕರ್ ಜಿಲ್ಲಾಧಿಕಾರಿಗಳು ಜನಸ್ಪಂದನಾ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. ತಾಲೂಕಿನ ಆಡಳಿತ ಮತ್ತು ತಾಲೂಕು ಪಂಚಾಯತಿ ವತಿಯಿಂದ ಶಾಸಕರು ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿ ಸಾರ್ವಜನಿಕರ ಅಹವಾಲು ಸವಾಲುಗಳ ಅರ್ಜಿಗಳನ್ನು ಸ್ವೀಕರಿಸಲಾಯಿತು. ಕೆಲವೊಂದು ಅರ್ಜಿಗಳಿಗೆ ಅಲ್ಲೇ ಅಧಿಕಾರಿಗಳಿಂದ ಅರ್ಜಿಗಳಿಗೆ ಉತ್ತರ ನೀಡಲಾಯಿತು. ಬಂದಂತ ಅರ್ಜಿಗಳಲ್ಲಿ ಜೆಸ್ಕಾಂ ಇಲಾಖೆಗೆ ಹೆಚ್ಚು ಅರ್ಜಿ ಬರಲಾಯಿತು. ಪ್ರಮುಖವಾಗಿ ಉಜ್ಜಿನಿಯಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿ ವಾರ ಮತ್ತು ಹುಣ್ಣಿಮೆ ಅಮಾವಾಸ್ಯೆ ದಿನ ಬರುವುದರಿಂದ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ಬೇಕು ಮತ್ತು ಉಜ್ಜಿನಿ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆ ಇನ್ನೂ ಮುಂತಾದ ಸೌಲಭ್ಯಗಳು ಬೇಡಿಕೆಯಾಗಿತ್ತು. ಈ ಸಂದರ್ಭದಲ್ಲಿ ವಿಧವಾ ವೇತನ ಪ್ರಮಾಣ ಪತ್ರವನ್ನು ನೀಡಲಾಯಿತು.

ಮೂಲಭೂತ ಸೌಕರ್ಯಗಳಾದ ಚರಂಡಿ ಸ್ವಚ್ಛತೆಗೆ ಇಲ್ಲದ ಕಾರಣ ಅರ್ಜಿಗಳು ಸಾರ್ವಜನಿಕರ ಸಮ್ಮುಖದಲ್ಲಿ ಪಿಡಿಓ ಗಳಿಗೆ ಮುನ್ನೆಚ್ಚರಿಕೆಯ ವಹಿಸುವಂತೆ ತಿಳಿಸಲಾಯಿತು. ಕಾಳಾಪುರ ಗ್ರಾಮಕ್ಕೆ ನ್ಯಾಯಬೆಲೆ ಅಂಗಡಿ ಬೇಕು, ಹನುಮನಹಳ್ಳಿ ಕೊನೆ ಗಡಿ ಭಾಗವಾಗಿರುವುದರಿಂದ ಹನುಮನಹಳ್ಳಿ ಯಿಂದ ಮಾಗಡಿ ರಸ್ತೆ ಹನುಮನಹಳ್ಳಿ ಯಿಂದ ನಾಗರಕೊಂಡ ರಸ್ತೆ ನಿರ್ಮಾಣಕ್ಕೆ ಅರ್ಜಿ ನೀಡಲಾಯಿತು. ಜೆಜೆಮ್ ಕಾಳಾಪುರ ಗ್ರಾಮ ಪಂಚಾಯತಿ ಕಳಪೆ ಕಾಮಗಾರಿ ವಿರುದ್ಧ ಅರ್ಜಿ ಸಲ್ಲಿಸಲಾಯಿತು. ಶ್ರೀ ಕ್ಷೇತ್ರ ಮುರುಳಿಸಿದ್ದೇಶ್ವರರ ನೆಲೆಸಿರುವ ಗ್ರಾಮ ವಾಗಿರುವುದರಿಂದ ಮೂರು ನಾಲ್ಕು ತಾಲೂಕಗಳಿಂದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಟ್ಟಡ ಮಾಡಲು ಮುಂದಾಗಿದ್ದಾರೆ ದಯವಿಟ್ಟು ಇದನ್ನು ನಿಲ್ಲಿಸಬೇಕೆಂದು ಅರ್ಜಿ ನೀಡಲಾಯಿತು. ಇನ್ನೂ ಮುಂತಾದ ಹಲವು ಅರ್ಜಿಗಳನ್ನು ಸ್ವೀಕರಿಸಲಾಯಿತು. ಅಲ್ಲೇ ಇದ್ದ ಸಾರ್ವಜನಿಕರು ಮನದಲ್ಲಿ ಗುಣಗಾಡುತ್ತಿದ್ದರು ಇದರಲ್ಲಿ ಎಷ್ಟರ ಮಟ್ಟಿಗೆ ಅರ್ಜಿಗಳಿಗೆ ಉತ್ತರ ಸಿಗುವುದೋ ಇಲ್ಲವೋ ಎಂದು ಗುಣದಾಡುತ್ತಿದ್ದರು. ಹೀಗಾಗಿ ಈ ಜನಸ್ಪಂದನ ಕಾರ್ಯಕ್ರಮ ಯಶಸ್ವಿಯಾಗಿ ನಡೆದರೂ ಕೂಡ ಮುಂದೆ ಅರ್ಜಿಗಳಿಗೆ ಉತ್ತರ ನೀಡಿದಾಗ ಯಶಸ್ವಿ ಆಗುವುದೆಂದು ಸಾರ್ವಜನಿಕರು ಮತ್ತು ಸಂಘಟನಾಕಾರರು ಮಾತನಾಡಿದರು. ಈ ಸಂದರ್ಭದಲ್ಲಿ ಎನ್.ಮೊಮ್ಮದ್ ಅಲಿ ಅಕ್ರಮ್ ಸಿ.ಇ.ಓ, ದೊಡ್ಮನಿ ಮಲ್ಲೇಶ್ ಡಿ.ವೈ.ಎಸ್ಪಿ, ಸಿ.ಪಿ.ಐ, ಡಿ.ಎಚ್.ಓ, ತಹಶೀಲ್ದಾರರು, ಗೀತಾಂಜಲಿ ಸಿಂಧೆ ಪಿಎಸ್ಐ ಜಿಲ್ಲೆಯ ಹಲವು ಅಧಿಕಾರಿಗಳು ಸಾರ್ವಜನಿಕರು ಸಂಘಟನಾಕಾರರು ಸೇರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು