ಕಲುಷಿತ ನೀರು ಕುಡಿದ ಗ್ರಾಮಸ್ಥರು ಆರೋಗ್ಯ ವಿಚಾರಿಸಿದ – ಪ್ರಭುಗೌಡ ಲಿಂಗದಳ್ಳಿ.
ಬ್ಯಾಲಿಹಾಳ ಜು.29

ಕಲುಷಿತ ನೀರು ಕುಡಿದು ಸುಮಾರು 60 ಕ್ಕಿಂತ ಹೆಚ್ಚು ಜನರು ಅಸ್ವಸ್ಥ ಗೊಂಡ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬ್ಯಾಲಿಹಾಳ ಗ್ರಾಮದಲ್ಲಿ ನಡೆದಿದೆ. ಅಸ್ವಸ್ಥ ಗೊಂಡವರು. ಬಸವನ ಬಾಗೇವಾಡಿ ತಾಲೂಕಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಹತ್ತಿರದ ಖಾಸಗಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದ ಕೊಳವೆ ಭಾವಿ ನೀರು ಕುಡಿಯುವುದರಿಂದ ಜನರಿಗೆ ವಾಂತಿ ಭೇದಿಯಿಂದ ಆರೋಗ್ಯ ಏರೂಪೇರಾಗಿ ಎಂದು ತಿಳಿದು ಬಂದಿದೆ. ಈ ಸುದ್ದಿ ತಿಳಿದ ಕೂಡಲೇ ಬಸವನ ಬಾಗೇವಾಡಿ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಗ್ರಾಮಸ್ಥರು ಆರೋಗ್ಯ ವಿಚಾರಿಸಿದ. ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಹಾಗೂ ದೇವರ ಹಿಪ್ಪರಗಿ ವಿಧಾನ ಸಭಾ ಮತ ಕ್ಷೇತ್ರದ ಉಸ್ತುವಾರಿಯಾದ ಡಾ, ಪ್ರಭುಗೌಡ. ಲಿಂಗದಳ್ಳಿಯವರು.

ನಂತರ ವೈದ್ಯರ ಜೊತೆ ಮಾತನಾಡಿ. ಕಲುಷಿತ ನೀರು ಕುಡಿದ ಗ್ರಾಮಸ್ಥರನ್ನು ಸರಿಯಾದ ಚಿಕಿತ್ಸೆ ನೀಡಿ ಎಂದು ಹೇಳಿದರು. ತದನಂತರ ಬ್ಯಾಲಿಹಾಳ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ಇದ್ದ ಜನರಿಗೆ ಜಾಗ್ರತೆ ಮೂಡಿಸಿ ಅವರು ಜೊತೆ ಮಾತನಾಡಿ. ಇನ್ನೂ ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ವೈದ್ಯೆರಾದ ಡಾ, ಕವಿತಾ.ದೊಡ್ಡಮನಿ ಹಾಗೂ ಡಾ, ಸಾಬೀರ ಪಟೇಲ ಹಾಗೂ ದತ್ತತರಾಯ್ಯ ಹೊಸಮಠ, ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ