ಸಂಪೂರ್ಣತಾ ಅಭಿಯಾನ್ ಸಮ್ಮಾನ್ – ಸಮಾರೋಹ್ ಕಾರ್ಯಕ್ರಮ ಉದ್ಘಾಟನೆ.
ತಾಳಿಕೋಟೆ ಜು.29

ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ ಹಾಗೂ ತಾಲೂಕ ಆಡಳಿತ ತಾಲೂಕ ಪಂಚಾಯತ ತಾಳಿಕೋಟಿ ಇವರ ಸಹಯೋಗದಲ್ಲಿ ನಡೆಯಿತು, ತಾಳಿಕೋಟಿ ಪಟ್ಟಣದ ಸಂಗಮೇಶರ ಸಭಾ ಭವನದಲ್ಲಿ ನಡೆದ ಸಂಪೂರ್ಣತಾ ಅಭಿಮಾನ ಸಮ್ಮಾನ್ ಸಮಾರೋಹ್, ಪ್ರಶಸ್ತಿ ಪ್ರಧಾನ ಹಾಗೂ ವಸ್ತು ಪ್ರದರ್ಶನ ಮಳಿಗೆಗಳು ಉದ್ಘಾಟನೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ, ದೇವರ ಹಿಪ್ಪರಗಿ ಮತ ಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಅವರು ಮಾತನಾಡಿದರು.

ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲ್ಲೂಕ ಮಹತ್ವ ಕಾಂಕ್ಷೀಯ ತಾಲೂಕು ಎಂದು ಆಯ್ಕೆ ಮಾಡಿರುವ ಹಿನ್ನೆಲೆ 39 ಸೂಚ್ಯಾಂಕಗಳು ಪೈಕಿ 6 ಸೂಚ್ಯಾಂಕಗಳನ್ನು ಪಡೆದು 100 % ಪ್ರಗತಿಯನ್ನು ಸಾದಿಸಿದ ಪ್ರಯುಕ್ತ ಈ ಸಮಾರಂಭವನ್ನು ಆಯೋಜಿಸಲಾಯಿತ್ತು, ಈ ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ಶಾಸಕರಾದ ಸಿ.ಎಸ್ ನಾಡಗೌಡ, ವಿಜಯಪುರ ಜಿಲ್ಲಾ ಪಂಚಾಯತಿ ಕಾರ್ಯ ನಿರ್ವಾಹಕಾಧಿಕಾರಿಯಾದ ರಿಷಿ ಆನಂದ, ತಹಶಿಲ್ದಾರರಾದ, ವಿನಿಯಾ ಹೂಗಾರ, ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಗಳಾದ ನಿಂಗಪ್ಪ ಮೊಸಳಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ