“ನಿಸರ್ಗವನ್ನು ಪೂಜಿಸುವ ನಾಗರ ಪಂಚಮಿ”…..

ನಾಡಿಗೆ ಸಂಭ್ರಮ ತಂದಿದೆ ನೋಡಿ
ನಾಗರ ಪಂಚಮಿ ಹಬ್ಬದ ಮೋಡಿ
ಮೊದಲ ಹಬ್ಬ ಅದುವೇ ಶುಕ್ಲಪಂಚಮಿ
ನಾಡಿಗೆ ದೊಡ್ಡದು ನಾಗರ ಪಂಚಮಿ
ಶ್ರಾವಣ ಮಾಸದ ಮೊದಲ ಹಬ್ಬ
ಶ್ರಾವಣದ ಸಿರಿಯ ಜೋಕಾಲಿ ಹಬ್ಬ
ಸಿಹಿಯನ್ನು ಹಂಚುವ ಸ್ನೇಹದ ಹಬ್ಬ
ಪೂಜಾರಾಧನೆಯನ್ನು ಸಂಭ್ರಮಿಸುವ ಹಬ್ಬ
ಹುತ್ತಕ್ಕೆ ಹಾಲೆರೆದು ಪೂಜೆ ಮಾಡುವ
ಸರ್ಪದೋಷಗಳಿಂದ ಮುಕ್ತಿ ನೀಡುವ
ನಾಗರಹಾವುಗಳನ್ನು ಪೂಜಿಸುವ
ಶಕ್ತಿ ನಾಗರ ಪಂಚಮಿ ಹಬ್ಬವ
ಅಪರಿಮಿತ ಭರವಸೆಯ ನಾಗರ ಪಂಚಮಿ
ಜೀವನ ಜೋಕಾಲಿ ನಾಗರಪಂಚ
ಮಿನಾಗದೇವತೆಗೆ ಹಾಲನ್ನು ಉಣಿಸುವ
ನಾಗರಪಂಚಮಿ
ನಿಸರ್ಗವನ್ನು ಪೂಜಿಸುವ
ನಾಗರಪಂಚಮಿ
ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ/9980180487