ಇಂದ್ರೀಯಗಳ ನಿಗ್ರಹ ದಿಂದ ಭಗವಂತನ ದರ್ಶನ ಸಾಧ್ಯ – ಮಾತಾಜೀ ತ್ಯಾಗಮಯೀ ಹೇಳಿಕೆ.
ಚಳ್ಳಕೆರೆ ಜು.29

ಇಂದ್ರೀಯಗಳ ನಿಗ್ರಹ ದಿಂದ ಭಗವಂತನ ದರ್ಶನ ಸಾಧ್ಯವಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅಭಿಪ್ರಾಯ ಪಟ್ಟರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ “ವಿಶ್ವಗುರು ಸ್ವಾಮಿ ವಿವೇಕಾನಂದ” ಪ್ರವಚನ ಮಾಲಿಕೆಯ ದಿವ್ಯ ಸಾನಿಧ್ಯ ವಹಿಸಿ ಅವರು “ಶ್ರೀಸುಂದರ್ ರಾಮ್ ಅಯ್ಯರ್ “ಅವರ ಸ್ಮೃತಿಗಳ ಬಗ್ಗೆ ಪ್ರವಚನ ನೀಡಿದರು. ‘ಬಿಲ್ವಮಂಗಲನ’ ಕಥೆ ನಮಗೆ ಇಂದ್ರೀಯ ನಿಗ್ರಹದ ಮಹತ್ವವನ್ನು ತಿಳಿಸುತ್ತದೆ.

ಸ್ವಾಮಿ ವಿವೇಕಾನಂದರು ಮತ್ತು ಸುಂದರ್ ರಾಮ್ ಅಯ್ಯರ್ ಅವರ ನಡುವಿನ ಸಂಭಾಷಣೆಗಳು ಬಹಳ ಮಹತ್ವ ಪೂರ್ಣವಾಗಿವೆ ಎಂದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ವಿಶೇಷ ಭಜನಾ ಕಾರ್ಯಕ್ರಮ ಹಾಗೂ ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು. ಸತ್ಸಂಗ ಸಭೆಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಅಂಬುಜಾ, ಪಂಕಜ ಚೆನ್ನಪ್ಪ, ಯತೀಶ್ ಎಂ ಸಿದ್ದಾಪುರ, ಚೆನ್ನಕೇಶವ,ವನಜಾಕ್ಷಿ ಮೋಹನ್, ಗೀತಾ ನಾಗರಾಜ್, ಗೀತಾ ವೆಂಕಟೇಶರೆಡ್ಡಿ, ಉಷಾ ಶ್ರೀನಿವಾಸ್, ಕವಿತಾ ಗುರುಮೂರ್ತಿ, ರತ್ನಮ್ಮ ಚೆನ್ನಬಸಪ್ಪ, ಮಾಣಿಕ್ಯ ಸತ್ಯನಾರಾಯಣ, ಸಿ.ಎಸ್ ಭಾರತಿ, ಕಾವೇರಿ, ಪುಷ್ಪಲತಾ, ಡಾ, ಭೂಮಿಕ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.