ಶೀಘ್ರದಲ್ಲಿ ರೈತರಿಗೆ ಯೂರಿಯಾ ಗೊಬ್ಬರ ಕೊಡದಿದ್ದರೆ ಶಾಸಕರ ಮನೆ ಮುಂದೆ ಧರಣಿ ಕೂಡಲು ಎಚ್ಚರಿಕೆ – ರೈತ ಸಂಘದ ಮುಖಂಡ ದೇವರ ಮನೆ ಮಹೇಶ್.
ಕೂಡ್ಲಿಗಿ ಜು.30

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕೂಡ್ಲಿಗಿ ತಾಲೂಕಿನ ಅಸಮರ್ಪಕ ರೈತರ ಬಿತ್ತನೆಯ ಮಾಹಿತಿ ಕೊರತೆಯಿಂದ ರೈತರಿಗೆ ಬಿತ್ತನೆ ಮಾಡಿರುವ ರೈತರ ಪರಿಸ್ಥಿತಿಯು ರಾಸಾಯನಿಕ ಗೊಬ್ಬರವಾದ ಯೂರಿಯಾ ಗೊಬ್ಬರವಿಲ್ಲದೆ ಬಿತ್ತನೆ ಮಾಡಿರುವಂತ ಮೆಕ್ಕೆಜೋಳ, ಜೋಳ, ಇನ್ನಿತರ ಬೆಳೆಗಳು ರಾಸಾಯನಿಕ ಗೊಬ್ಬರಗಳ ಇಲ್ಲದೆ ಹಸಿರು ಬಣ್ಣ ಇರುವಂತಹ ಎಲೆಗಳು ಅರಿಶಿಣ ಬಣ್ಣಕ್ಕೆ ಬದ್ಲಾವಣೆಯಾಗಿದೆ. ಕಾರಣ ರಾಸಾಯನಿಕ ಗೊಬ್ಬರಾದ ಯೂರಿಯ ಸಮಯಕ್ಕೆ ಸರಿಯಾಗಿ ಗೊಬ್ಬರ ಕೊಡದೆ ಇರುವ ಕಾರಣಕ್ಕೆ ಬೆಳೆಯು ಸಮೃದ್ಧಿಯಾಗಿ ಬೆಳೆಯದೆ ಎಲೆಗಳೆಲ್ಲ ಅರಿಶಿಣ ಬಣ್ಣದ ಸ್ಥಿತಿಗೆ ಬದಲಾಗುತ್ತೆ ಎಂದು ಹೋರಾಟಗಾರರು ಬೇಸರ ವ್ಯಕ್ತಪಡಿಸುತ್ತಾರೆ. ಹಾಗೆ ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷರಾದ ಉರುಳಿಯಾಳ್ ರೇವಣ್ಣ ಇವರು ರೈತ ಮುಖಂಡರ ಜೊತೆ ಕೈಜೋಡಿಸಿ ರಾಜ್ಯ ಸರ್ಕಾರವು ರೈತರಿಗೆ ವಿಷ ಕೊಡುವಂತಹ ಪರಿಸ್ಥಿತಿಗೆ ತಂದೊಡ್ಡಿದೆ ಕಾರಣ ಆಯಾ ತಾಲೂಕಿನ ಅಧಿಕಾರಿಗಳು ಬಿತ್ತನೆ ಮಾಡಿರುವಂತಹ ರೈತರ ಅಂದಾಜು ಲೆಕ್ಕವನ್ನು ವರದಿಯನ್ನು ತೆಗೆದು ಕೊಳ್ಳದೆ ತಮಗೆ ತಿಳಿದಂತ ಸಂದರ್ಭದಲ್ಲಿ ರೈತರಿಗೆ ಗೊಬ್ಬರ ಸಿಗುವಂತ ಪರಿಸ್ಥಿತಿ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹಾಗೆ ಸೂರ್ಯ ಪಾಪಣ್ಣ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವರು ಹೋರಾಟದಲ್ಲಿ ಭಾಗಿಯಾಗಿ ಕರ್ನಾಟಕ ರಾಜ್ಯದಲ್ಲಿ ರೈತರಿಗೆ ಅನುಕೂಲ ಮಾಡಿ ಕೊಡದೆ ಬಿತ್ತನೆ ಮಾಡಿದ ಬೆಳೆಗಳಿಗೆ ಯೂರಿಯ ಗೊಬ್ಬರ ರೈತರಿಗೆ ಕೊಡ್ಲಿಕ್ಕೆ ಆಗದೆ ಇರುವಂತಹ ಆಳುವಂತ ಸರ್ಕಾರವಾಗಿದೆ ರಾಜ್ಯ ಸರ್ಕಾರ ರೈತರನ್ನು ನಿರ್ಲಕ್ಷ್ಯ ಮಾಡುತ್ತಿದೆ. ಹಾಗೂ ರೈತರಿಗೆ ಸಮಯಕ್ಕೆ ಸರಿಯಾಗಿ ಗೊಬ್ಬರ ಕೊಡದ ರಾಜ್ಯ ಸರ್ಕಾರ ಇರಬೇಕಾ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಹಾಗೆ ರೈತ ಮುಖಂಡ ದೇವರ ಮನೆ ಮಹೇಶ್ ಇವರು ಸರ್ಕಾರ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡು ಜಿಲ್ಲಾದ್ಯಂತ ರೈತರ ಬಿತ್ತನೆ ಮಾಡಿದ ಬೆಳೆಗಳ ನಿಖರವಾದ ವರದಿಯನ್ನು ಅಧಿಕಾರಿಗಳು ತೆಗೆದು ಕೊಂಡು ಯಾವ ಯಾವ ತಾಲೂಕಿಗಳಿಗೆ ಎಷ್ಟೆಷ್ಟು ಗೊಬ್ಬರ ಬೇಕಾಗುತ್ತದೆ ಎಂಬ ವರದಿಯ ಅಂಶವನ್ನು ತೆಗೆದು ಕೊಂಡು ರೈತರ ಬೆಳೆಗಳಿಗೆ ಸಮಯಕ್ಕೆ ಸರಿಯಾಗಿ ಅಗತ್ಯತೆಯನ್ನು ಸರ್ಕಾರದ ಅಧಿಕಾರಿಗಳು ರೈತರಿಗೆ ಗೊಬ್ಬರವನ್ನು ಅನುಕೂಲ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಗೆ ನಮ್ಮ ವಿಜಯನಗರ ಹಾಗೂ ಅಖಂಡ ಬಳ್ಳಾರಿ ಜಿಲ್ಲೆಯ ಎಂ.ಪಿ ಎಂ.ಎಲ್.ಎ ಗಳು ಹಾಗೂ ಉಸ್ತುವಾರಿ ಸಚಿವರುಗಳು ಚುನಾಯಿತ ಪ್ರತಿ ನಿಧಿಗಳಾಗಿರುವ ಇವರುಗಳು ಸರ್ಕಾರದ ಗಮನ ಹರಿಸಿ ಜಿಲ್ಲೆಯ ಎಲ್ಲಾ ರೈತರಿಗೆ ರಾಸಾಯನಿಕ ಯೂರಿಯಾ ಗೊಬ್ಬರ ಕೊಡುವಂತೆ ಮಾಡಬೇಕು ಇಲ್ಲವಾದರೆ ರೈತಪರ ಅನೇಕ ಸಂಘಟನೆಗಳು ಒಗ್ಗೂಡಿ ರೈತರ ಪರವಾಗಿ ಶಾಸಕರ ಮನೆಯ ಮುಂದೆ ಧರಣಿ ಕೂಡುವಂತೆ ಎಚ್ಚರಿಕೆ ನೀಡಿದರು.ಹಾಗೆ ಕೂಗಿ ತಾಲೂಕಿನಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಬ್ಲಾಕ್ ನಲ್ಲಿ ಗೊಬ್ಬರ ತೆಗೆದುಕೊಂಡು ಬಂದು ರಿಯಾಯಿತಿ ದರದಕ್ಕಿಂತ ಎರಡು ಪಟ್ಟು ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಅಂತವರ ಪರವಾನಗಿಯನ್ನು ರದ್ದು ಪಡಿಸಬೇಕು ಎಂದು ಹೋರಾಟಗಾರರು ಮಾನ್ಯ ತಹಶೀಲ್ದಾರರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ತಮ್ಮ ಮನವಿ ಮಾಡಿ ಕೊಂಡರು. ಹಾಗೆ ಈ ಸಂದರ್ಭದಲ್ಲಿ ಅನೇಕ ಮುಖಂಡರುಗಳು ರೈತರ ಕುರಿತು ಮಾತನಾಡಿದ ಅವರು ಬಿತ್ತನೆ ಮಾಡಿರುವಂತಹ ಬೆಳೆಗಳಿಗೆ ಯೂರಿಯಾ ಗೊಬ್ಬರ ಕೊಡದಿದ್ದರೆ ಹೇಳುವವರಿ ಕಾಣಲು ಸಾಧ್ಯವಾಗಲಿಲ್ಲ, ಸಂಕಷ್ಟದ ಮಾತುಗಳನ್ನು ತಿಳಿಸಿದರು, ಈ ಸಂದರ್ಭದಲ್ಲಿ ಕೆ. ದೇವೇಂದ್ರಪ್ಪ ಜಿಲ್ಲಾಧ್ಯಕ್ಷರು ಬಳ್ಳಾರಿ ಬಾಣದ ಮಾರುತಿ ತಾಲೂಕು ಅಧ್ಯಕ್ಷ ನವೀನ್ ಕುಮಾರ್ ಬಣಕಾರ್ ಬಸವರಾಜ್ ಜಿಲ್ಲಾಧ್ಯಕ್ಷ ವಿಜಯನಗರ ಬಿ.ಶೇಖಪ್ಪ ತಾಲೂಕ ಅಧ್ಯಕ್ಷರು ಹೊಸಪೇಟೆ ಗಾಳೆಪ್ಪ ಗ್ರಾಮ ಘಟಕದ ಅಧ್ಯಕ್ಷರು ಹೊಸಪೇಟೆ ಪಿ.ನಾಗಪ್ಪ ಘಟಕ ಅಧ್ಯಕ್ಷರು ಜೆಡಿಎಸ್ ತಾಲೂಕ ಅಧ್ಯಕ್ಷರಾದ ಗುಪ್ಪಲ್ ಕಾರಪ್ಪ, ಶಿವರಾಜ್ ಕೆ.ಬಾಣದ ಕೃಷ್ಣಪ್ಪ ಜಿಲ್ಲಾ ಕಾರ್ಯದರ್ಶಿ ಇನ್ನೂ ಅನೇಕ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ